ಸುರಪುರ: ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾನದ ಮಳೆಯಾಗದಿರುವುದರಿಂದ ಬೇಳೆದ ಬೆಳೆಯು ಕೈಸಿಗದೆ ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುತ್ತಾರೆ ರೈತರು ಬರಿ ಬೇಳೆಯ ಮೇಲೆ ಆಧಾರವಾಗಿರದೆ ಕೃಷಿಯ ಉಪ ಕಸಬುಗಳಾದ ಹೈನುಗಾರಿಕೆ, ಕುರಿ ಸಾಕಾಣಿಕೆ ಮತ್ತು ಕೋಳಿ ಸಾಕಾಣಿಕೆಗಳನ್ನು ಮಾಡಿಕೊಳ್ಳುವುದರ ಮುಖಾಂತರ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಎಮ್.ಕುರ್ಮರಾವ ತಿಳಿಸಿದರು.
ತಾಲೂಕಿನ ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಬುಧವಾರ ಕೃಷಿ ವಿಶ್ವವಿದ್ಯಾಲಯ ರಾಯಚೂರ ಮತ್ತು ಕೃಷಿ ವಿಜ್ಞಾನ ಕೇಂದ್ರ ಯಾದಗಿರ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಯಾದಗಿರ ರವರ ಸಂಯೂಕ್ತಾಶ್ರಯದಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಹಾಗೂ ಕೃತಕ ಗರ್ಭಧಾರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಈಗಾಗಲೆ ಜಾನುವಾರುಗಳನ್ನು ಹೊಂದಿರುವ ರೈತರು ಜಾನುವಾರುಗಳಿಗೆ ಬರುವ ಕಾಲುಬಾಯಿ ರೋಗ,ಕಂದುರೋಗಬ್ರುಸೆಲ್ಲೋಸಿಸ್ ರೋಗಗಳ ಲಸಿಕೆಗಳನ್ನು ಹಾಕಿಸಿ ರೋಗಗಳನ್ನು ನಿಯಂತ್ರಿಸಿ ಜಾನುವಾರುಗಳನ್ನು ರಕ್ಷಿಸಿಕೊಳ್ಳಿ ಹಾಗೂ ನಮ್ಮ ಪಶುಗಳಿಗೆ ಕೃತಕ ಗರ್ಭಧಾರಣೆ ಮಾಡುಸುವದರ ಮುಖಾಂತರ ಉತ್ತಮ ತಳಿಯ ಪಶುಗಳ ಸಾಕಾಣಿಕೆಗೆ ಒತ್ತನೀಡಿ ಈ ಕಾರ್ಯಕ್ರಮದ ಕುರಿತು ರೈತರು ಇಲಾಖೆಯೊಂದಿಗೆ ಕೈಜೋಡಿಸಿ ಪ್ರಚಾರಪಡಿಸಬೇಕು ಮತ್ತು ಈ ಕಾರ್ಯಕ್ರಮದ ಶೇ.೧೦೦ ರಷ್ಟು ಲಾಬ ಪಡೆದುಕೋಳ್ಳ ಬೇಕು ಎಂದು ತಿಳಿಸಿದರು.
ಮಹತ್ವಾಕಾಂಕ್ಷೆ ಜಿಲ್ಲೆಗಳಲ್ಲಿ ನಮ್ಮ ಜಿಲ್ಲೇಯೂ ಇದೆ ನಮ್ಮ ಜಿಲ್ಲೆಯಲ್ಲಾಗುವು ಶಿಕ್ಷಣ ಮತ್ತು ಕೃಷಿ ಇಲಾಖೆಗೆ ಹಾಗೂ ಇನ್ನಿತರ ಇಲಾಖೆಗಳಲ್ಲಾಗುವ ಅಭಿವೃದ್ಧಿ ಕೆಲಸಗಳನ್ನು ಕೇಂದ್ರ ಸರಕಾರ ನಂತರ ಜಿಲ್ಲಾ ಪಂಚಾಯತ ಅಧ್ಯಕ್ಷ ರಾಜಶೇಖರಗೌಡ ವಜ್ಜಲ ಮಾತನಾಡಿ ನಮ್ಮ ಭಾಗದ ರೈತರು ಬರಿ ಭತ್ತ, ತೊಗರಿ, ಹತ್ತಿಗಳನ್ನು ಬೇಳೆಯುವುದರ ಜೋತೆಗೆ ಉಪ ಕಸುಬುಗಳನ್ನು ಬೇಳೆದು ಲಾಭ ಪಡೆದುಕೋಳ್ಳುವತ್ತ ಯೋಚನೆ ಮಾಡಬೇಕು ಸಿರಿಧಾನ್ಯ ಮತ್ತು ರೇಷ್ಮೆ ಬೇಳೆಗಳನ್ನು ಬೇಳೆದು ಉತ್ತಮ ಲಾಭ ಪಡೆದುಕೊಂಡು ತಮ್ಮ ಆರೋಗ್ಯದೊಂದಿಗೆ ಪಶುಗಳ ಆರೋಗ್ಯದ ಬಗ್ಗೆಯೋ ಕಾಳಜಿ ವಹಿಸಿಕೊಂಡು ತಮ್ಮ ಆರ್ಥಿಕತೆಯನ್ನು ಬಲಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆವಹಿಸಿ ಶಾಸಕ ನರಸಿಂಹ ನಾಯಕ (ರಾಜುಗೌಡ) ಮಾತನಾಡಿ ಈಗಿನ ಯುಕರಲ್ಲಿ ಒಂದು ಭಾವನೆ ಇದೆ ಸೇಗಣಿ ಬಳಿಯುವುದರಿಂದ ನಮ್ಮ ಮರ್ಯಾದೆ ಹಾಳಾಗುತ್ತದೆ ಎಂದು ತಿಳಿದುಕೊಂಡಿದ್ದಾರೆ ನಮ್ಮ ಗೋವಿನ ಸೇಗಣಿಗೆ ೮೦ ರೋಗಗಳನ್ನು ತಡೆಯುವ ಶಕ್ತಿ ಇದೆ ಎನ್ನುವುದು ಅರಿತುಕೊಳ್ಳಬೇಕು ಮತ್ತು ಬಹಳಷ್ಟು ಯುವಕರು ಪದವಿ ಮುಗಿಸಿ ಉದ್ಯೋಗಕ್ಕಾಗಿ ಅಲ್ಲಿ ಇಲ್ಲಿ ಅಲೆದಾಡುವುದಕ್ಕಿಂತಲು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡುವ ಕುರಿತು ಚಿಂತಿಸಬೇಕು ಎಂದು ತಿಳಿಸಿದರು.
ನಮ್ಮ ದೇಶ ಬೆನ್ನೆಲುಬು ರೈತನಾಗಿರುವುದರಿಂದ ಮತ್ತು ನಮ್ಮ ದೇಶವು ಶೆ.೭೫ ಪ್ರತಿಶತ ಕೃಷಿ ಕ್ಷೇತ್ರವನ್ನು ಅವಲಂಬಿಸಿರುವುದನ್ನು ಗಮನದಲ್ಲಿಟ್ಟುಕೊಂಡು ನಮ್ಮ ರೈತರಿಗೆ ಹಾಗೂ ಅವರು ಸಾಕುವ ಜಾನುವಾರುಗಳಿಗೆ ತೊಂದರೆಯನ್ನು ಅನುಭವಿಸಬಾರದೆಂದು ಸುಮಾರು ೧೫ ಕೋಟಿ ವೆಚ್ಚದಲ್ಲಿ ನಮ್ಮ ಕೇಂದ್ರ ಸರಕಾರ ರಾಷ್ಟ್ರವ್ಯಾಪಿಯಾಗಿ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಯೋಜೆನೆ ಹಾಗೂ ಕೃತಕ ಗರ್ಭಧಾರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮವು ಪ್ರತಿಯೊಬ್ಬ ರೈತರಿಗೆ ತಲುಪುವಂತೆ ನಮ್ಮ ಅಧಿಕಾರಿಗಳು ನೋಡಿಕೊಳ್ಳಬೇಕು ಹಾಗೂ ಈ ಕಾರ್ಯಕ್ರಮದ ಲಾಭವನ್ನು ರೈತರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಇದೆ ಸಮಯದಲ್ಲಿ ಪಶುವಿಗೆ ಲಸಿಕೆ ಹಾಕುಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಮತ್ತು ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಯೋಜೆನೆ ಹಾಗೂ ಕೃತಕ ಗರ್ಭಧಾರಣೆ ಕಾರ್ಯಕ್ರಮದ ಭಿತ್ತಿಪತ್ರಗಳನ್ನು ಬಿಡುಗಡೆಗೋಳಿಸಲಾಯಿತು.
ಪಶು ಪಾಲನೆ ಇಲಾಖೆಯ ಉಪನಿರ್ದೇಶಕ ಡಾ.ಶರಣಭೂಪಾಲರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು ತಾಲೂಕು ಪಂಚಾತ ಅಧ್ಯಕ್ಷೆ ಶಾರದಾ ಬೀಮಣ್ಣ ಬೇವಿನಾಳ, ಖಾನಾಪುರ ಗ್ರಾಪಂ ಅಧ್ಯಕ್ಷ ಮಧ್ಯಮ್ಮ ಭೀಮಣ್ಣ, ಎಪಿಎಮ್‌ಸಿ ಸದಸ್ಯ ಮಲ್ಲಣ್ಣ ಸಾಹುಕಾರ, ಮುಖಂಡರಾದ ದೊಡ್ಡದೇಸಾಯಿ ಅಧಿಕಾರಿಗಳಾದ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಆರ್.ದೇವಿಕಾ, ಕೃಷಿ ವಿಜ್ಞಾನ ಕೇಂದ್ರ ಹಿರಿಯ ವಿಜ್ಞಾನಿ ಡಾ. ಮಲ್ಲಿಕಾರ್ಜುನ ಕೆಂಗನಾಳ ವೇದಿಕೆಯಲ್ಲಿದ್ದರು, ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಿಂದ ರೈತರು ಮತ್ತು ಯುವಕು ಅಧಿಕಾರಿಗಳು ಸೇರಿದಂತೆ ಇನ್ನಿತರರಿದ್ದರು.