ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ‘ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆ ಸರಣಿ ಉಪನ್ಯಾಸ ಮಾಲೆ-2’ ವಿಷಯ ಡಾ. ಚೆನ್ನಣ್ಣ ವಾಲೀಕಾರ ಅವರ ಜೀವನ ಮತ್ತು ಸಾಧನೆ ಎಂಬ ಕಾರ್ಯಕ್ರಮ ಜರುಗಿತು.
ಮುಖ್ಯ ಅತಿಥಿಗಳ ಮಾತು ಪೆÇ್ರ. ವಿಕ್ರಮ ವಿಸಾಜಿ ಅವರು ಡಾ. ಚೆನ್ನಣ್ಣ ವಾಲೀಕಾರ ಅವರ ಜೀವನ ಸಾಧನೆಯನ್ನು ಕುರಿತು ಮಾತನಾಡುತ್ತ ವಾಲೀಕಾರ ಅವರು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಒಂದು ದಶಕಕ್ಕಿಂತ ಹೆಚ್ಚು ಕಾಲ ಈ ಅಧ್ಯಯನ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರು. ಆ ಮೂಲಕ ಕನ್ನಡ ಅಧ್ಯಯನ ಸಂಸ್ಥೆಯ ಹೆಸರು ಇಡೀ ಕರ್ನಾಟಕದ ಪರಿಚಯಿಸಿದ್ದಾರೆ. ಹೋರಾಟದಿಂದ ಬಂದ ಇವರು ಸಮಾಜದಲ್ಲಿ ಆಗುತ್ತಿರುವ ಅನ್ಯಾಯ-ಶೋಷಣೆಯ ವಿರುದ್ಧ ಸಂಘಟನೆ ಹೋರಾಟಗಳ ಮುಖಾಂತರ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ.
ಸಾಮಾಜಿಕ ಚಳುವಳಿಗಳ ಮೂಲಕ ಬತ್ತಲೆ ಸೇವೆಗಳಂತಹ ಅನಿಷ್ಟಗಳನ್ನು ತಡೆಗಟ್ಟಿ ಅದನ್ನು ಮುಕ್ತಗೊಳಿಸಿದರು ಸಾಮಾಜಿಕ ಶೋಷಣೆ ಮೂಡನಂಬಿಕೆಗಳ ವಿರುದ್ಧ, ಕುದುರೆ ಮೋತಿ ಪ್ರಕಾರಣದ ವಿರುದ್ಧ ಹೋರಾಡಿದರು. ಇದಲ್ಲದೆ ತನ್ನ ಕಾವ್ಯದಲ್ಲಿ ತಮ್ಮ ಜನರಿಗಾದ ನೋವನ್ನು ಅಕ್ಷರದ ಮೂಲಕ ಹೇಳಿದ್ದಾರೆ. ಯಾವ ಅಕ್ಷರದಿಂದ ಬರೆದು ತೋರಿಸಲಯ್ಯ ‘ನನ್ನ ಜನರಿಗಾದ ಎದೆಯ ಬ್ಯಾನಿ’ ಎಂದು ಕಾವ್ಯದ ಪ್ರತಿಪಾದಿಸಿದ್ದಾರೆ. ಕಾವ್ಯ ಕ್ಷೇತ್ರದಲ್ಲಿ ಗಪ್ಪಿನಾಟ, ಗೀಗಿ ಪದ, ಜನಪದ ಮಟ್ಟುಗಳನ್ನು ವಿಶೇಷ ಸಾಹಿತ್ಯದಲ್ಲಿ ಬಳಸಿಕೊಂಡಿದ್ದಾರೆ.
ತಮ್ಮ ಕಾವ್ಯದಲ್ಲಿ ಸಮಾಜದಲ್ಲಿ ಯಾರು ಶೋಷಣೆಗೆ ಅತ್ಯಾಚಾರಕ್ಕೆ ಒಳಗಾದ್ದಾರೆ, ಅಂಥವರ ವಿಷಯವನ್ನು ತಮ್ಮ ಕಾವ್ಯದ ಉಸ್ತುವಾಗಿಟ್ಟುಕೊಂಡು ಸಾಹಿತ್ಯ ರಚನೆ ಮಾಡಿದ್ದಲ್ಲದೆ ಯಾರು ಸಮಾಜದಿಂದ ಹೊರಗಿದ್ದರೊ, ಯಾರು ಅನ್ಯಾಯಕ್ಕೆ ಒಳಗಾಗಿದ್ದರೊ ಅಂಥವರ ವಿಷಯಗಳನ್ನು ತಮ್ಮ ಕಾವ್ಯದಲ್ಲಿ ಬಳಸಿಕೊಳಡು ಒಂದು ಚರಿತ್ರೆ ಮಾಡಿದ್ದಾರೆ.
ದಲಿತ ಬಂಡಾಯ ಸಾಹಿತ್ಯ ಲೋಕದಲ್ಲಿ ಜನಪದ ಮಟ್ಟಗಳನ್ನು ಬಳಸಿಕೊಂಡು ಕವಿತೆಗಳು ಬರೆದವರು ಚೆನ್ನಣ್ಣ ವಾಲೀಕಾರ ಒಬ್ಬರೆ ಆಗಿದ್ದಾರೆ. ಅವರ ಎಲ್ಲ ಕೃತಿಗಳಲ್ಲಿ ವೈಚಾರಿಕ ತಾಯಿತನ ಕಂಡು ಬರುತ್ತದೆ. ಅಲ್ಲದೆ ಚೆನ್ನಣ್ಣ ವಾಲೀಕಾರ ಅವರು ತಮ್ಮ ಸಾಹಿತ್ಯದಲ್ಲಿ ಜಮೀನ್ದಾರಿ ಪದ್ದತಿಯ ವಿರುದ್ಧ ಮಾತಾಡಿ ತಳಸಮುದಾಯದ ಅಸಾಯಕರ ಬದುಕನ್ನು ತಮ್ಮ ಕೃತಿಗಳಲ್ಲಿ ರಚನೆ ಮಾಡಿದ್ದಾರೆ ಎಂದು ಪೆÇ್ರ. ವಿಕ್ರಮ ವಿಸಾಜಿ ಹೇಳಿದರು.
ಅಧ್ಯಕ್ಚತೆ ವಹಿಸಿದ್ದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪೆÇ್ರ. ಎಚ್.ಟಿ. ಪೆÇೀತೆ ಅವರು ಚೆನ್ನಣ್ಣ ಅವರ ಕುರಿತು ಮಾತಾಡುತ್ತ ‘ಗಾಂಧಿಯವರು ಮುಂದೊಂದು ಜನ್ಮವಿದ್ದರೆ ನಾನು ಅಸ್ಪøಶ್ಯತೆನಾಗಿ ಹುಟ್ಟಲು ಬಯಸುತ್ತೇನೆ ಅಂದಿದ್ದರು. ಆದರೆ ಚೆನ್ನಣ್ಣ ವಾಲೀಕಾರ ಅವರು ಹುಟ್ಟುವಾಗ ಅಸ್ಪøಶ್ಯರಾಗಿರಲಿಲ್ಲ. ಆದರೆ ಬದುಕಿದ್ದು ಮಾತ್ರ ದಲಿತನಾಗಿ’ ಎಂದು ಅಭಿಪ್ರಾಯ ಪಟ್ಟರು.
ಮುಂದುವರೆದು ಮಾತನಾಡುತ್ತ ‘ಸಾಮಾನ್ಯ ಹಳ್ಳಿಯಿಂದ ಬಂದ ಚೆನ್ನಣ್ಣ ಲೇಖಕನಾಗಿ ಬೆರಗು ಹುಟ್ಟಿಸಿದರೆ, ಮಾನವೀಯ ನೆಲೆಯಲ್ಲಿ ಸಮಾನ್ಯರನ್ನು ಪ್ರೀತಿಸಿದ್ದಲ್ಲದೆ, ಅಧೋಲೋಕದ ಸಮುದಾಯದ ಪ್ರತಿನಿಧಿಯಾಗಿ ಬದುಕಿದ್ದು ಮಹಾ ಬೆರಗು’ ಎಂದು ಹೇಳಿದರು.
ನಿರೂಪಣೆ ನಿರ್ಮಲಾ, ವಂದನಾರ್ಪನೆ ಸಂಗಮ್ಮ, ಸ್ವಾಗತ ಡಾ. ಹಣಮಂತ ಮೇಲ್ಕೇರಿ ಮಾಡಿದರು.