ಚಿಂಚೋಳಿ: ಶೈಕ್ಷಣಿಕ ಸಾಮಾಜಿಕ ಆರ್ಥಿಕ ಮತ್ತು ಅಸಮಾನತೆ ಮೌಢ್ಯಕ್ಕೆ ಒಳಗಾಗಿರುವ ದೇವದಾಸಿ ಮಹಿಳೆಯರಿಗೆ ಮತ್ತು ಹೆತ್ತವರು ಸಮಾಜ ವಕ್ರದೃಷ್ಟಿಯಿಂದ ನೋಡುವ ಮಂಗಳಮುಖಿಯರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಸೌಲಭ್ಯ ನೀಡುವಂತೆ ನಾವುಗಳು ಸರ್ಕಾರದ ಮೇಲೆ ಒತ್ತಡ ಹಾಕಲು ಸಂಘಟಿತರಾಗುವುದು ಪ್ರಸ್ತುತ ದಿನಮಾನಗಳಲ್ಲಿ ಅತ್ಯವಶ್ಯಕವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಮಾರುತಿ ಗಂಜಗಿರಿ ಹೇಳಿದರು.
ಚಂದಾಪೂರ ಪಟ್ಟಣದಲ್ಲಿ ಯ್ಯೂನಿಟಿ ಆಫ್ ಮೂಲನಿವಾಸಿ ಬಹುಜನ ಸಹಯೋಗಿ ಸಂಘಟನೆಗಳಾದ ದೇವದಾಸಿ ನಿರ್ಮೂಲನ ವೇದಿಕೆ ಮತ್ತು ಮಂಗಳಮುಖಿಯರ ಸಂಘಟನೆಯ ಪದಾಧಿಕಾರಿಗಳ ಆಯ್ಕೆಯ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು.
ಮುಂದುವರೆದು ರಾಜ್ಯದಲ್ಲಿ ಸುಮಾರು ಲಕ್ಷಾನುಗಟ್ಟಲೆ ದೇವದಾಸಿಯರು ಸಾವಿರಾರುಗಟ್ಟಲೆ ಮಂಗಳಮುಖಿಯರಿದ್ದು ಅವರ ಜೀವನ ಅತಂತ್ರವಾಗಿದೆ ಆರ್ಥಿಕವಾಗಿ ಹಿಂದುಳಿದವರು ನಿರ್ಗತಿಕರು ಬಡವರು ಅನಿವಾರ್ಯ ಮತ್ತು ಮೌಢ್ಯಕ್ಕೆ ಒಳಗಾಗಿ ಈ ಅನಿಷ್ಠ ಪದ್ದತಿಗೆ ಒಳಗಾಗಿದ್ದಾರೆ ಇದರಿಂದ ನಾವುಗಳು ಹೋರಬಂದು ನಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಬೇಕಾದರೆ ನಾವು ಸಂಘಟಿತರಾಗಿ ಸೌಲಭ್ಯಗಳು ಪಡೆದುಕೊಂಡಾಗ ಮಾತ್ರ ಸಾದ್ಯವೆಂದರು.
ಇದೆ ಸಂದರ್ಭದಲ್ಲಿ ದೇವದಾಸಿ ನಿರ್ಮೂಲನೆ ವೇದಿಕೆಯ ಚಿಂಚೋಳಿ ತಾಲೂಕಾಧ್ಯಕ್ಷರಾಗಿ ದ್ರೌಪತಿ ಚಿಮ್ಮನಚೋಡ ಕಾರ್ಯದರ್ಶಿಯಾಗಿ ಶರಣಮ್ಮ ಚಿಮ್ಮಾಯಿದ್ಲಾಯಿ ಸುಲೇಪೇಟ ವಲಯ ಅಧ್ಯಕ್ಷರಾಗಿ ನೀಲಮ್ಮ ನಿಡಗುಂದಾ ವಲಯ ಅಧ್ಯಕ್ಷರಾಗಿ ಬಸ್ಸಮ್ಮಾ ಹಾಗೂ ಮಂಗಳಮುಖಿಯರ ಸಂಘಟನೆ ಚಿಂಚೋಳಿ ತಾಲೂಕಾಧ್ಯಕ್ಷರಾಗಿ ಶೈಲಜಾ ಚಂದಾಪೂರ ಮತ್ತು ಕಾಳಗಿ ತಾಲೂಕಿನ ಮಂಗಳಮುಖಿಯರ ಅಧ್ಯಕ್ಷರಾಗಿ ಭಾಗ್ಯ ಹಲಚೇರಾ ರವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಉಮೇಶ ಶೇಖರ ಸಾಗರ ಆನಂದಿ ಹೊಸಳ್ಳಿ ಗೋಪಾಲ ಗಾರಂಪಳ್ಳಿ ಮೌನೇಶ ಗಾರಂಪಳ್ಳಿ ಶಾಂತಾಬಾಯಿ ರೇವಣಸಿದ್ದಪ್ಪ ಕಾಶಿನಾಥ ಸೂರ್ಯಕಾಂತ ಇಂದುಬಾಯಿ ಮಾಹದೇವಿ ಯಶೋಧಾ ಸಿದ್ದಮ್ಮ ಮರೆಮ್ಮಾ ಶಿವಮ್ಮ ಚಂದ್ರಕಲಾ ಸುಮಿತ್ರಾ ನಿರ್ಮಲಾ ಜಗದೇವಿ ಗೌರಮ್ಮ ವಿಠಲ ಮಲ್ಲಮ್ಮ ಮಹೇಂದ್ರ ಮಲ್ಲಿಕಾರ್ಜುನ ಮುಂತಾದವರು ಉಪಸ್ಥಿತರಿದ್ದರು.