ಸುರಪುರ: ಸಪ್ಟೆಂಬರ್ ೧೭ ರಂದು ಆಚರಿಸಲಿರುವ ಕಲ್ಯಾಣ ಕರ್ನಾಟಕ (ಹೈ-ಕ) ವಿಮೋಚನಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ನಗರದ ತಹಸೀಲ್ದಾರ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ ಮಾತನಾಡಿ,ಈ ತಿಂಗಳ ೧೭ನೇ ತಾರೀಖಿನಂದು ಬೆಳಿಗ್ಗೆ ಒಂಬತ್ತು ಗಂಟೆಗೆ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಕಲ್ಯಾಣ ಕರ್ನಾಟಕ (ಹೈ-ಕ) ವಿಮೋಚನಾ ದಿನವನ್ನು ಆಚರಿಸಲಾಗುವುದು.ಶಾಸಕ ನರಸಿಂಹ ನಾಯಕ(ರಾಜುಗೌಡ) ಕಾರ್ಯಕ್ರಮ ಉದ್ಘಾಟಿಸಲಿದ್ದು,ಉಪನ್ಯಾಸಕರಾಗಿ ವೇಣುಗೋಪಾಲ ನಾಯಕ ಜೇವರ್ಗಿ ಮಾತನಾಡಲಿದ್ದಾರೆ.ಅಲ್ಲದೆ ತಾಲ್ಲೂಕಿನ ವಿವಿಧ ಸಾಧಕರಿಗೆ ಸನ್ಮಾನಿಸಲಾಗುವುದು.ಈ ಸಂದರ್ಭದಲ್ಲಿ ತಾಲ್ಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ತಪ್ಪದೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಅಲ್ಲದೆ ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜು ಮತ್ತು ಇತರೆ ಎಲ್ಲಾ ಇಲಾಖೆಗಳಲ್ಲಿ ಬೆಳಿಗ್ಗೆ ವಿಮೋಚನಾ ದಿನವನ್ನು ಆಚರಣೆ ಮಾಡಿ,ನಂತರ ತಾಲ್ಲುಕಾಡಳಿತದಿಂದ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಿಳಿಸಿದರು.
ಸಬೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃಧ್ಧಿ ಇಲಾಖೆಯ ಅಧಿಕಾರಿ ಲಾಲಸಾಬ್,ಸಮಾಜ ಕಲ್ಯಾಣಾಧಿಕಾರಿ ಸತ್ಯನಾರಾಯಣ ದರಬಾರಿ,ನಗರಸಭೆಯ ಲಕ್ಷ್ಮಣ ಕಟ್ಟಿಮನಿ ಹಾಗು ವಿವಿಧ ಇಲಾಖೆಯ ಅಧಿಕಾರಿಗಳಾದ ಅಮರೇಶ,ಬಸವರಾಜ ನಾಯಕ,ರಾಜಶೇಖರ,ಗ್ಯಾನಪ್ಪ ಮೇಟಿ,ಕೊಪ್ರೇಶ ಹಳಿಜೋಳ,ಗೌತಮ್ ಬಡಿಗೇರ,ಸತೀಶಕುಮಾರ ಬಿ ಸೇರಿದಂತೆ ಅನೇಕರಿದ್ದರು.