ಸುರಪುರ: ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ನಗರದಲ್ಲಿ ರಾಜ್ಯ ಮಟ್ಟದ ಬಿಲ್ವಿದ್ಯೆ (ಅರ್ಚರಿ) ಹಾಗೂ ಸೈಕ್ಲಿಂಗ್ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್ ತಿಳಿಸಿದರು.
ತಾಲೂಕು ಪಂಚಾಯತಿ ಕಚೇರಿಯಲ್ಲಿ ನಡೆದ ಪೂರ್ವ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ಸರಕಾರದ ಆದೇಶದಂತೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,ಬಿಲ್ವಿದ್ಯೆಯಲ್ಲಿ 50 ರಿಂದ 60 ಜನ ಹಾಗೂ ಸೈಕ್ಲಿಂಗ್‍ನಲ್ಲಿ 50 ರಿಂದ 60 ಜನ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಅಲ್ಲದೆ ಈ ಎರಡೂ ಸ್ಪರ್ಧೆಗಳಲ್ಲಿ ಭಾಗವಹಿಸಿದವರಲ್ಲಿ ಪ್ರಥಮ ದ್ವಿತೀಯ ಹಾಗೂ ತೃತೀಯ ಬಹುಮಾನ ಮತ್ತು ಇನ್ನುಳಿದ ಮೂರು ಜನರಿಗೆ ಸಮಾಧಾನಕರ ಬಹುಮಾನವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ತಹಸಿಲ್ದಾರ್ ಕೆ.ವಿಜಯಕುಮಾರ ಮಾತನಾಡಿ,ಬಿಲ್ವಿದ್ಯೆಯಲ್ಲಿ ನಮ್ಮ ತಾಲೂಕಿನ 13 ಜನರು ಭಾಗವಹಿಸಲಿದ್ದಾರೆ,ಅಲ್ಲದೆ ಸೈಕ್ಲಿಂಗ್ ಪುರುಷರಿಗೆ 25 ಕಿಲೋ ಮೀಟರ್ ಹಾಗೂ ಮಹಿಳೆಯರಿಗೆ 15 ಕಿಲೋ ಮೀಟರ್ ನಡೆಯಲಿದೆ,ಇದರ ಕುರಿತು ದೈಹಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ದೂರದ ಕುರಿತು ತಿಳಿಸಲಿದ್ದಾರೆ ಎಂದರು.
ಮೊದಲಿಗೆ 20ನೇ ತಾರಿಖು ಬಿಲ್ವಿದ್ಯೆ ನಡೆಸಲು ಉದ್ದೇಶಿಸಲಾಗಿದ್ದು,ನಗರದ ಶ್ರೀ ಪ್ರಭು ಕಾಲೇಜ್ ಮೈದಾನದಲ್ಲಿ ನಡೆಯಲಿದೆ,20 ರಂದು ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ.ಅದೇರೀತಿಯಾಗಿ 21ನೇ ತಾರಿಖು ಮುಂಜಾನೆ 9 ಗಂಟೆಗೆ ಶ್ರೀ ಪ್ರಭು ಕಾಲೇಜ್ ಬಳಿಯಿಂದ ಕೆಂಭಾವಿ ವರೆಗೆ ಸೈಕ್ಲಿಂಗ್ ನಡೆಯಲಿದೆ ಎಂದರು.ಈ ಎರಡೂ ರಾಜ್ಯ ಮಟ್ಟದ ಸ್ಪರ್ಧೆಗಳಾಗಿದ್ದು ಯಾರಾದರೂ ಭಾಗವಹಿಸಬಹುದು ಎಂದರು.
ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್ಪೇಕ್ಟರ್ ಆನಂದ ವಾಘಮೊಡೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.