ಕಲಬುರಗಿ: ಶಿಕ್ಷಣ ಸಂಸ್ಥೆಗಳಲ್ಲಿ ಮೌಢ್ಯ ಬೆತ್ತಲಾಗುತ್ತಿದೆ ಧರ್ಮತೀತ ಜಾತ್ಯತೀತ ಪ್ರಜಾ ಸತಾತ್ಮಕ ಮನೋಭಾವವನ್ನು ಬೆಳೆಸಬೇಕಾದ ಶಿಕ್ಷಣ ಸಂಸ್ಥೆಗಳೇ ಇಂದು ಮೂಢನಂಬಿಕೆ ಬೆಳೆಸುತ್ತಿವೆ. ಇಂಥಾ ಸಮಯದಲ್ಲಿ ಯುವಕರು ವೈಜ್ಞಾನಿಕ ಚಿಂತನೆಯನ್ನು ಪ್ರಶ್ನೆ ಮಾಡುವುದನ್ನು ಕಲಿಯಬೇಕು ಮತ್ತು ಸತ್ಯವನ್ನು ಹುಡುಕಬೇಕು ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ರಮೇಶ್ ಲಂಡನ್ ಕರ್ ಅಭಿಪ್ರಾಯಪಟ್ಟರು.
ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (DYFI) ಸಂಘಟನೆಯು ಹಮ್ಮಿಕೊಂಡ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಉದ್ಯೋಗ ಕೊಡುವ ಮೌಢ್ಯ ಇಲ್ಲದ ವೈಜ್ಞಾನಿಕ ಚಿಂತನೆ ಬೆಳೆಸುವ ಸಮ ಸಮಾಜ ನಿರ್ಮಾಣಕ್ಕೆ ಯುವಕರು ಮುಂದಾಗ ಬೇಕು, ಭ್ರಷ್ಟಾಚಾರಕ್ಕೆ ಮತ್ತು ಮೌಢೆಗಳಿಗೆ ಯುವಕರು ಬಲಿಯಾಗುತ್ತಿದ್ದಾರೆ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಖಾಸಗಿಕರಣದಿಂದಾಗಿ ಪುನಃ ಹೊರಗುತ್ತಿಗೆ ಮೂಲಕ ಕೆಲಸ ಮಾಡುವ ಜೀತ ಪದ್ಧತಿ ಬರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಯುವಕರು ಒಗ್ಗಟ್ಟಾಗಿ ಹೋರಾಟರೂಪಿಸಲು ಮುಂದಾಗ ಬೇಕಿದೆ. ದೇಶದಲ್ಲಿ ಇವತ್ತಿನ ಪರಿಸ್ಥಿತಿಯಲ್ಲಿ ಯುವಕರು ಮಾತನಾಡದೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ ಈಗ ಮೌನ ಮುರಿದು ಮಾತನಾಡುವ ಸಮಯ ಬಂದು ಒದಗಿರುವುದರಿಂದ ಸಂಘಟನಾತ್ಮಕ ಹೋರಾಟ ಒಂದೇ ಇದಕ್ಕೆ ದಾರಿ ಎಂದು ಪ್ರಮೋದ ಪಾಂಚಾಳ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಪ್ರಾಸ್ತವಿಕವಾಗಿ ಲವಿತ್ರ ಯುವಜನತೆಯ ಸಮಸ್ಯೆಗಳು ಕುರಿತು ವಿಸ್ತೃತವಾಗಿ ವಿವರಿಸಿದರು. ಶ್ರೀಮಂತ ಬಿರಾದಾರ್, ಸುಜಾತ ಕುಸುನೂರ್, ರಾಹುಲ್ ದೊಡ್ಮನಿ, ರಹೀಂ ಖೇಡಗಿ ಮುಂತಾದವರು ಈ ಸಂದರ್ಭದಲ್ಲಿ ಮಾತನಾಡಿದರು. ಶಶಿಕಾಂತ್ ಅಧ್ಯಕ್ಷತೆ ವಹಿಸಿದ್ದರು. ನಾಗರಾಜ್ ಸ್ವಾಗತಿಸಿದರು. ಶಾಂತೇಶ್ ಕೊಡ್ಲೆ ನಿರೂಪಿಸಿದರು.
ಈ ವೇಳೆ ಸಮಾವೇಶದಲ್ಲಿ ಸಙಘಟನೆ ಹಕ್ಕೊತ್ತಾಯ ಮಂಡಿಸಿ ಜಿಲ್ಲಾ ಸಂಚಾಲಕರಾಗಿ ಲವಿತ್ರ ವಸ್ತ್ರದ ನೇಮಕಗೊಂಡಿದ್ದು, ಸಹ ಸಂಚಾಲಕರಾಗಿ ಶಶಿಕಾಂತ್ ಬಿರಾದಾರ್, ನಾಗರಾಜ್ ಭಾಸ್ಕರ್, ರಹಿಮ್ ಖೇಡಗಿ ನಾಗಮ್ಮ ಆಯ್ಕೆಯಾದ್ದು, 12 ಜನರ ಸಮಿತಿ ನೇಮಿಸಲಾಯಿತು.