ಕ್ರೀಡೆಗೆ ಬದ್ದತೆ ಹಾಗೂ ಸಮರ್ಪಣಾ ಭಾವನೆ ಮುಖ್ಯ: ಪ್ರೊ. ಯಶವಂತರಾಯ ಅಷ್ಠಗಿ

0
87
  • ಹೆಚ್ ಕೆ ಇ ಡೆಂಟಲ್ ಕಾಲೇಜು ಮೈದಾನದಲ್ಲಿ ಶರಣು ರಟಕಲ್ ಪ್ರತಿಷ್ಠಾನದಿಂದ ಆಯೋಜನೆ

ಕಲಬುರಗಿ: ಪ್ರುಡೆಂಟ್ ಕ್ರಿಕೆಟ್ ಟ್ರೋಫಿ ಸಿಜನ್ ೩-೨೦೨೪ ರ ಫೈನಲ್ ಪಂದ್ಯ ವಿಜೇತ ಶಾಹ ಹುಂಡೈ ತಂಡಕ್ಕೆ ಟ್ರೋಫಿ ವಿತರಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ ಯಶವಂತರಾಯ ಅಷ್ಠಗಿ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ ಆದರೆ ಆಟಗಾರರು ಬದ್ದತೆ, ಸಮರ್ಪಣೆ ಮತ್ತು ಕ್ರೀಡಾ ಮನೋಭಾವನೆ ಮೆರೆಯುವುದು ಅತ್ಯಂತ ಅವಶ್ಯಕ ಎಂದರು.

ಶರಣು ರಟಕಲ್ ಪ್ರತಿಷ್ಠಾನದಿಂದ ಆಯೋಜಿಸಿದ್ದ ಪ್ರುಡೆಂಟ್ ಕ್ರಿಕೆಟ್ ಟ್ರೋಫಿ ಸಿಜನ್ ೩-೨೦೨೪ ರ ಫೈನಲ್ ಪಂದ್ಯದಲ್ಲಿ ವಿಜೇತ ತಂಡಕ್ಕೆ ಟ್ರೋಫಿ ವಿತರಿಸಿ ಮಾತನಾಡಿದರು.

Contact Your\'s Advertisement; 9902492681

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಕಲಬುರಗಿ ಎಪಿಎಂಸಿ ಉಪಾಧ್ಯಕ್ಷರಾದ ರಾಜಕುಮಾರ್ ಕೋಟೆ ಮಾತನಾಡಿ, ಕ್ರೀಡೆಯಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ನಿರಂತರವಾಗಿ ಅಭ್ಯಾಸ ಮಾಡಿದಾಗ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಪ್ರುಡೆಂಟ್ ಕ್ರಿಕೆಟ್ ಟ್ರೋಫಿ ಸಿಜನ್ – ೩ ಆಯೋಜಕರಾದ ಶರಣು ರಟಕಲ್, ಮಲ್ಲಿಕಾರ್ಜುನ ಡಂಬಳ, ಪ್ರಾಯೋಜಕರಾದ ಸೈಯದ್ ಮುದಾಸೀರ್, ಮಹೇಶ್ ಸೋನಾರ, ಸಂತೋಷ ಕುಲಕರ್ಣಿ, ಮಂಜುನಾಥ ಗುಂಡಗುರ್ತಿ, ಸಂಗಮೇಶ ಎಂ ಕೆ ಸೇರಿದಂತೆ ನೂರಾರು ಕ್ರಿಕೆಟ್ ಅಭಿಮಾನಿಗಳು ಭಾಗವಹಿಸಿದ್ದರು.

ಈ ಪಂದ್ಯಾವಳಿಯಲ್ಲಿ ಒಟ್ಟು ೭ ತಂಡಗಳು ಪಾಲ್ಗೊಂಡಿದ್ದವು. ಫೈನಲ್ ಪಂದ್ಯದಲ್ಲಿ ಶಾಹ ಹುಂಡೈ ತಂಡ ಕರುಣಾ ಟೊಯೋಟಾ ತಂಡವನ್ನು ಸೋಲಿಸಿ ವಿಜಯ ಪತಾಕೆ ಹಾರಿಸಿ, ಟ್ರೋಫಿ ತನ್ನದಾಗಿಸಿಕೊಂಡಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here