ಸುರಪುರ: ಭಾರತೀಯ ಸಂವಿಧಾನವು ಪ್ರತಿಯೊಬ್ಬ ಭಾರತೀಯ ಪ್ರಜೆಯ ಹಿತವನ್ನು ಕಾಪಾಡುವ ಮೂಲಕ ಸಂವಿಧಾನ ಬದ್ಧ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದ ಸಂವಿಧಾನವೇ ನಮಗೆ ಆದರ್ಶ ಎಂದು ಮುಖಂಡರಾದ ಮಲ್ಲಿಕಾರ್ಜುನ ತಳ್ಳಳ್ಳಿ ಹೇಳಿದರು.
ತಾಲೂಕಿನ ಕೆ ತಳ್ಳಳ್ಳಿ ಗ್ರಾಮಕ್ಕೆ ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆ ಯಾದಗಿರಿ ಇಂದ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಸಂವಿಧಾನದ ಆಶಯದಂತೆ ನಾವೆಲ್ಲರೂ ನಡೆಯೋಣ ಎಂದು ಹೇಳಿದರು.
ಗ್ರಾಮಸ್ಥರೆಲ್ಲರೂ ಸೇರಿ ಕುಂಭ ಕಳಸ ಹಾಗೂ ತಮಟೆ ವಾದ್ಯಗಳೊಂದಿಗೆ ಉತ್ಸಾಹದಿಂದ ಜಾಥಾವನ್ನು ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.ಗ್ರಾಮ ಪಂಚಾಯತ ಸಿಬ್ಬಂದಿ ಪ್ರಕಾಶ ಇವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸಾಹೇಬ್ ಗೌಡ ಪೊಲೀಸ ಪಾಟೀಲ, ನಿಂಗಣ್ಣ ಸಾಹುಕಾರ, ತಿರುಪತಿಗೌಡ ಕಾಕರಗಲ್, ಗ್ರಾಮ ಪಂಚಾಯತ ಉಪಾಧ್ಯಕ್ಷ ರಾಚಣ್ಣ ಕಮತಗಿ, ಭೀಮಣ್ಣ ದೊರಿ ಮಕಾಶಿ, ನಾರಾಯಣಸ್ವಾಮಿ ದೊರಿ ಮಕಾಶಿ ದಲಿತ ಯುವ ಮುಖಂಡ ಭೀಮಣ್ಣ ಬೋನಾಳ, ವಿರುಪಾಕ್ಷಿ ಅಂಬರಕೇಡ್, ಹಣಮಂತ ಮಾನಸಗಲ್, ರಾಘವೇಂದ್ರ, ಮೌನೇಶ ಆಲ್ಗೂರ, ಮುದುಕಣ್ಣ ಕಡಿಮನಿ, ದೇವಿಂದ್ರಪ್ಪ ದೊರಿ, ದೇವಣ್ಣ ವಜ್ಜಲ ,ಅಶೋಕ ಮಾಲಗತ್ತಿ, ನಬಿಸಾಬ್ ನದಾಫ ಹಾಗೂ ಅಂಗನವಾಡಿ ಆಶಾ ಕಾರ್ಯಕರ್ತೆಯರು ಶಾಲಾ ಮಕ್ಕಳು ಸೇರಿದಂತೆ ಅನೇಕ ಜನ ಭಾಗವಹಿಸಿದ್ದರು.