ಕಲಬುರಗಿ: ಇಲ್ಲಿನ ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಶರಣ ಚಿಂತಕ ಆರ್.ಜಿ.ಶೆಟಗಾರ ಅವರ ತಂದೆ ಶರಣ ಲಿಂ. ಗುರುಶಾಂತಪ್ಪ ಶೆಟಗಾರ ಅವರು ಇಂದು ಬೆಳಿಗ್ಗೆ 9 ಗಂಟೆಗೆ ನಿಧನರಾಗಿದ್ದಾರೆ.
ಇವರ ಪ್ರಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕಾಗಿ ನಗರ ಎಂ.ಬಿ ನಗರದ ಮನೆಯಲ್ಲಿ ಇರಿಸಲಾಗಿದೆ ಎಂದು ಕುಟುಂಬ ಮೂಲಕಗಳು ತಿಳಿಸಿವೆ.
ಸಂಜೆ 4 ಕ್ಕೆ ಸ್ವ ಗ್ರಾಮ ಹರಸೂರದಲ್ಲಿ ಅಂತಿಮ ವಿಧಿ ವಿಧಾನಗಳ ಮೂಲಕ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಜಾಗತಿಕ ಲಿಂಗಾಯತ್ ಮಹಾಸಭಾ ಕಲಬುರಗಿ ಪ್ರಕಟನೆಯಲ್ಲಿ ತಿಳಿಸಿದೆ.