ವಾಡಿ ಬಿಜೆಪಿ ಕಚೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ

0
15

ವಾಡಿ; ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 394 ನೇ ಜಯಂತಿ ಆಚರಿಸಲಾಯಿತು.

ಇದೇ ವೇಳೆ ಎಸ್ ಸಿ ಮೂರ್ಚಾದ ತಾಲ್ಲೂಕ ಅಧ್ಯಕ್ಷರಾದ ರಾಜು ಮುಕ್ಕಣ್ಣ ಮಾತನಾಡಿ ಶಿವಾಜಿ ಮಹಾರಾಜರು ಮರಾಠ ಸಾಮ್ರಾಜ್ಯಕ್ಕಿಂತ ಹೆಚ್ಚಾಗಿ ಹಿಂದೂಗಳ ಸಾಮ್ರಾಜ್ಯ ಕಟ್ಟಿ ಹಿಂದೂ ಹೃದಯದ ಸಾಮ್ರಾಟರಾದರು ಎಂದರು.

Contact Your\'s Advertisement; 9902492681

ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಶಿವಾಜಿಯವರ ಧೈರ್ಯ ಸಾಹಸ ಪ್ರೇರಣೆಯಾಗಿತ್ತು. ಶಿವಾಜಿ ತನ್ನ ವೃತ್ತಿಜೀವನದ ಆರಂಭದಿಂದಲೂ ತನ್ನದೇ ಆದ ಸ್ವತಂತ್ರ ರಾಜ್ಯವನ್ನು ರಚಿಸುವ ಗುರಿಯನ್ನು ಹೊಂದಿದ್ದನು. ಯಾವುದೇ ಸಂದರ್ಭದಲ್ಲಿ ಅವರು ಮುಸ್ಲಿಂ ಆಡಳಿತಗಾರನ ಅಡಿಯಲ್ಲಿ ಸೇವೆಯನ್ನು ಸ್ವೀಕರಿಸಲು ಸಿದ್ಧರಿರಲಿಲ್ಲ. ಹಿಂದೂಗಳನ್ನು ಮುಸಲ್ಮಾನರ ಬಂಧನದಿಂದ ಮುಕ್ತಗೊಳಿಸುವ ತನ್ನ ಮುಖ್ಯ ಗುರಿ ಎಂದು ತಳಿದಿದ್ದರು ಎಂದು ಹೇಳಿದರು.

ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ ಶಿವಾಜಿ ಮಹಾರಾಜರು ಚಿಕ್ಕ ವಯಸ್ಸಿನಲ್ಲಿಯೇ ಕೋಟೆಗಳನ್ನು ಗೆದ್ದು ಶತ್ರುಗಳನ್ನು ಸೋಲಿಸಿದರು. ರಾಜನಾಗಿ ಅವರು ಸಾರ್ವಜನಿಕ ಆಡಳಿತದಲ್ಲಿ ಸುಧಾರಣೆಗಳನ್ನು ಜಾರಿಗೆ ತರುವ ಮೂಲಕ ಉತ್ತಮ ಆಡಳಿತವನ್ನು ನಡೆಸಿದರು ಎಂದರು.

ದಾಳಿಕೋರರಿಂದ ರಾಜ್ಯ ಮತ್ತು ಸಂಸ್ಕೃತಿಯನ್ನು ರಕ್ಷಿಸಿ ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಹೋರಾಡಿದರು. ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ದೂರದೃಷ್ಟಿಯಿಂದಾಗಿ ಇತಿಹಾಸದ ಇತರ ವೀರರಿಗಿಂತ ಸಂಪೂರ್ಣವಾಗಿ ಭಿನ್ನರಾಗಿದ್ದಾರೆ, ಅವರ ಸಾರ್ವಜನಿಕ ಕಲ್ಯಾಣ ಆಡಳಿತದ ಪಾತ್ರದಿಂದಾಗಿ ಇಂದು ನಾವು ಸ್ವಾಭಿಮಾನದಿಂದ ಬದುಕುತ್ತಿದ್ದೇವೆ ಎಂದು ಹೇಳಿದರು.

ಮರಾಠ ಸಮಾಜದ ಅಧ್ಯಕ್ಷ ಅಶೋಕ ಪವಾರ,ರಾಮಚಂದ್ರ ರಡ್ಡಿ, ಸಿದ್ದಣ್ಣ ಕಲ್ಲಶೆಟ್ಟಿ,ಹರಿ ಗಲಾಂಡೆ,ಪ್ರಮೋದ್ ಚೊಪಡೆ,ಅರ್ಜುನ ಕಾಳೆಕರ, ಪುರಸಭೆ ಮಾಜಿ ವಿರೋಧ ಪಕ್ಷದ ನಾಯಕ ಭೀಮಶಾ ಜಿರೋಳ್ಳಿ,ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ರವಿ ನಾಯಕ,ಎಸ್ ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್, ಯೂವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ,ಶಿವಶಂಕರ ಕಾಶೆಟ್ಟಿ, ರಿಚರ್ಡ್ ಮಾರೆಡ್ಡಿ,ಅಯ್ಯಣ್ಣ ದಂಡೋತಿ,ಮಲ್ಲಿಕಾರ್ಜುನ ಸಾತಖೇಡ, ಚಂದ್ರಶೇಖರ ಬೆಣ್ಣೂರ,ಮಹೇಂದ್ರ ಕುಮಾರ ಪುಜಾರಿ,ಮಹೇಶ ಶಹಬಾದಕರ್,ದತ್ತಾ ಖೈರೆ, ಅರ್ಜುನ ದಹಿಹಂಡೆ, ಶಿವಾಜಿ ಸೂರ್ಯವಂಶಿ, ಯಂಕಮ್ಮ ಗೌಡಗಾಂವ, ಅನ್ನಪೂರ್ಣ ದೊಡ್ಡಮನಿ, ಉಮಾದೇವಿ ಗೌಳಿ, ರಾಜು,ಆಕಾಶ ಜಾಧವ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here