ಕಲಬುರಗಿ; ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣಗಳಲ್ಲಿ ಮಾತ್ರ (ಎಪಿಎಂಸಿ ಯಾರ್ಡ್‍ಗಳಲ್ಲಿ) ಮಾರಾಟ ಮಾಡುವುದರಿಂದ ರೈತರ ಕೃಷಿ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ದೊರೆಯಲಿದೆ ಎಂದು ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ರೈತರು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವಾಗ ತಮ್ಮ ಉತ್ಪನ್ನಗಳನ್ನು ಎಲೆಕ್ಟ್ರಾನಿಕ್ ಕಡ್ಡಾಯವಾಗಿ ತೂಕದ ಯಂತ್ರದ ಮೂಲಕ ತೂಕ ಮಾಡಿಸಬೇಕು. ದಲ್ಲಾಳಿಗಳಿಗೆ ಯಾವುದೇ ರೀತಿಯ ಕಮಿಷನ್ ನೀಡಬಾರದು ಹಾಗೂ ಬಿಳಿ ಚೀಟಿಯನ್ನು ತಿರಸ್ಕರಿಸಿ ಅಧಿಕೃತ ಲೆಕ್ಕ ತಿರುವಳಿ ಪಟ್ಟಿಯನ್ನು ಕೇಳಿ ಪಡೆಯಬೇಕು. ಕೃಷಿ ಉತ್ಪನ್ನ ಮಾರಾಟ ಮಾಡುವ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸಿದ್ದಲ್ಲಿ ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.