ಕಲಬುರಗಿ: ಸಮಾಜಿಕ ಜಾಲತಾಣದಲ್ಲಿ ಭೈರಪ್ಪ ಹರೀಶ್ ಕುಮಾರ್ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಅವಹೇಳನಕಾರಿಯಾಗಿ ಫೇಸ್ಬುಕ್ ನಲ್ಲಿ ಟೀಕೆ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ವೀರ ಶಿವಾಜಿ ಸೇನೆ ಪದಾಧಿಕಾರಿಗಳು ದಿಢೀರನೆ ಪ್ರತಿಭಟನೆ ನಡೆಸಿ ಬಂಧನಕ್ಕೆ ಆಗ್ರಹಿಸಿದರು.
ಜಿಲ್ಲಾಧಿಕಾರಿಗಳಿಗೆ ಭೈರಪ್ಪ ಹರೀಶ್ ಕುಮಾರ್ ಎಂಬ ವ್ಯಕ್ತಿಗೆ ಕೂಡಲೇ ಬಂಧಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಡಿವಾಳಪ್ಪ ಅಮರಾವತಿ, ಜಿಲ್ಲಾ ಗೌರವಾಧ್ಯಕ್ಷರಾದ ಅನೀಲ್ ಮೋರೆ, ಜಿಲ್ಲಾಧ್ಯಕ್ಷರಾದ ಶ್ರೀಕಾಂತ್ ಜಾದವ್, ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ್ ಸೂರ್ಯವಂಶಿ, ಪಿಂಟು ಮರಾಠಾ,ರಾಕೇಶ್ ಮಾನೆ ಮಡಿವಾಳಪ್ಪ ಅಮರಾವತಿ ಉಪಸ್ಥಿತರಿದ್ದರು.