ಕಲಬುರಗಿ: ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ನಡೆದ ಕೃಷಿ ಯಂತ್ರ ಮೇಳ ಕಾರ್ಯಕ್ರಮದಲ್ಲಿ ಆಳಂದ ತಾಲ್ಲೂಕಿನ ಸುಂಟನೂರು ಗ್ರಾಮದ ರೈತರು ನಿಖರ ಯೋಜನೆ ಯಡಿ ಪ್ರವಾಸ ನಡೆಸಿ ವಿವಿದ ಯಂತ್ರ ಉಪಕರಣ, ಕೃಷಿ ತಂತ್ರಜ್ಞಾನ,ಔಷಧ ಸಿಂಪರಣೆ ಯಂತ್ರ, ಬೇಕರಿ ಉತ್ಪನ್ನ, ಅಡುಗೆ ಎಣ್ಣೆ, ಬೇವಿನ ಎಣ್ಣೆ, ಹಿಂಡಿ ಸಂಸ್ಕರಣೆ ಘಟಕ, ಸಿರಿಧಾನ್ಯ ಘಟಕ, ಸವಲು ಮಣ್ಣು ನಿರ್ವಹಣೆ ಪೈಪ್ ಲೈನ್ ಮಾಹಿತಿ, ಜೈವಿಕ ಕೃಷಿ ವಿವಿದ ಘಟಕ ಭೇಟಿ ನೀಡಿ ಕೃಷಿ ಮಾಹಿತಿ ಪಡೆದರು.
ಸಭಾಂಗಣ ದಲ್ಲಿ ರೈತರ ಪ್ರಶ್ನೆಗೆ ವಿಜ್ಞಾನಿಗಳು ಉತ್ತರ ನೀಡಿದರು. ಮುಂದಿನ ವರ್ಷ ಹೊಸ ಹೊಸ ಯಂತ್ರ ಉಪಕರಣ ಆವಿಷ್ಕಾರ ಮಾಡಿ ಬಿಡುಗಡೆ ಮಾಡ ಲಾಗುವುದು ಎಂದರು.
ಕಲಬುರ್ಗಿ ಕೆವಿಕೆ ತಜ್ಞರಾದ ಜಹೀರ್ ಅಹಮದ್, ವಿಜಯಸಿಂಗ್, ಸುಂಟನೂರ್ ರೈತರು ಉಪಸ್ಥಿತರಿದ್ದರು.