ಕಲಬುರಗಿ: ಜೇವರ್ಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ 20 ಕೆರೆ ತುಂಬುವ ಯೋಜನೆಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ. ಬೋಸರಾಜು ಅವರು ವಿಧಾನಸಭೆ ಅಧಿವೇಶದಲ್ಲಿಕೆಕೆಆರ್‌ಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯ್‌ಸಿಂಗ್ ಪ್ರಶ್ನೆಗೆ ಭರವಸೆ ನೀಡಿದ್ದಾರೆ.
ಜೇವರ್ಗಿಗೆ ಕುಡಿಯುವ ನೀರಿನ ಯೋಜನೆಗಾಗಿ ಈ ಹಿಂದೆ 306 ಕೋಟಿ ರೂ. ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿತ್ತು. 2024-25ರ ಬಜೆಟ್‌ನಲ್ಲಿಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 130 ಕೋಟಿ ರೂ ಅನುದಾನ ನೀಡಲಾಗಿದ್ದು, ಇದರಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್‌ಗಾಗಿ ಇನ್ನು ಹೆಚ್ಚಿನ ಅನುದಾನ ಅವಶ್ಯಕತೆಯಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ಹೆಚ್ಚುವರಿ ಅನುದಾನದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉತ್ತರ ಸಚಿವರು ಸಿಂಗ್ ಅವರಿಗೆ ನೀಡಿದ್ದಾರೆ.
ಸದನದಲ್ಲಿಮಾತನಾಡಿದ ಡಾ.ಅಜಯಸಿಂಗ್ ಅವರು, ಜೇವರ್ಗಿಯಲ್ಲಿನೀರಿನ ಅಭಾವ ಕಡಿಮೆ ಮಾಡಲು 2020ರಲ್ಲಿ20 ಹೊಸ ಕೆರೆ ನಿರ್ಮಾಣ ಹಾಗೂ ಭೀಮಾ ನದಿಯಿಂದ ಏತ ನೀರಾವರಿ ಮೂಲಕ ನೀರು ತುಂಬುವ ಯೋಜನೆಗೆ ಸಣ್ಣ ನೀರಾವರಿ ಇಲಾಖೆಯ ಮೂಲಕ ಸರ್ವೆ ನಡೆಸಿ ಡಿಪಿಆರ್ ತಯಾರಿಸಿ ತಾಂತ್ರಿಕ ಮೌಲ್ಯ ನಿರ್ಣಯ ಸಮಿತಿ(ಟಿಎಸಿ)ಗೆ ಸಲ್ಲಿಕೆ ಮಾಡಲಾಗಿತ್ತು. 306 ಕೋಟಿ ರೂ. ಅಂದಾಜು ಪಟ್ಟಿ ಸಲ್ಲಿಸಲಾಗಿತ್ತು. ಆದರೆ ಅದಾದ ನಂತರ ಸರಕಾರ ಬದಲಾಗಿದ್ದರಿಂದ ಇಲ್ಲಿವರಗೆ ಯಾವುದೇ ಚಟುವಟಿಕೆ ನಡೆದಿರಲಿಲ್ಲ. ಆದ್ದರಿಂದ ಕೂಡಲೇ ಈ ಯೋಜನೆಗೆ ಮರುಜೀವ ನಿಡಬೇಕು ಎಂದು ಗಮನ ಸೆಳೆದರು.
ಈ ಯೋಜನೆಯಲ್ಲಿಮಲ್ಲಬಾದ್ ಏತ ನೀರಾವರಿ ಯೋಜನೆಯಡಿಯ ಲಿಫ್ಟ್-1, ಲಿಫ್ಟ್-2ರಡಿಯ ವಿತರಣಾ ಕಾಲುವೆಗಳ ಕಾಮಗಾರಿ ಪೂರ್ಣಗೊಳಿಸಲು ಅವಶ್ಯವಿರುವ ಒಟ್ಟು ಅನುದಾನ 295.26 ಕೋಟಿ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಕಳೆದ ಹಲವು ಅಧಿವೇಶನಗಳಲ್ಲಿಮನವಿ ಮಾಡಲಾಗಿತ್ತು. ಕೂಡಲೇ ಕೆಬಿಜೆಎನ್‌ಎಲ್ ಮಂಡಳಿಯ ಸಭೆಯ ಮುಂದೆ ಮಂಡಿಸಿ ಅನುಮೋದನೆ ನೀಡಿ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಜೇವರ್ಗಿಯಲ್ಲಿನೀರಿನ ಬವಣೆ ನಿವಾರಿಸಲು ಕ್ಷೇತ್ರದ 20 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಹೆಚ್ಚುವರಿ ಅನುದಾನ ಕೋರಲಾಗಿದೆ. ಇದಾದರೆ ನೀರಿನ ಸಮಸ್ಯೆ ನಿವಾರಣೆಯಾಗುವ ಜತೆಗೆ, ಅಂತರ್ಜಲವೂ ಹೆಚ್ಚಾಗುತ್ತದೆ. ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. -ಡಾ. ಅಜಯಸಿಂಗ್, ಅಧ್ಯಕ್ಷ, ಕೆಕೆಆರ್‌ಡಿಬಿ