ಕಲಬುರಗಿ : ನಗರದ ನೂತನವಾಗಿ ಕಟ್ಟಿರುವ ಜಯದೇವ ಆಸ್ಪತ್ರೆ ಕಂಪೌಂಡ್‍ಗೆ ಬಸ್ ನಿಲ್ದಾಣ ನಿರ್ಮಾಣ ಹಾಗೂ ಬೇಸಿಗೆ ಬಿಸಿಲು ಪ್ರಾರಂಭವಾಗುತ್ತಿರುವದರಿಂದ ನಗರದಲ್ಲಿರುವಂತಹ ಎಲ್ಲಾ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಹಾಗೂ ಪ್ಯಾನ್ ವ್ಯವಸ್ಥೆ ಕಲ್ಪಿಸಬೇಂದು ಜೈ ಕನ್ನಡಿಗರ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಸಚೀನ್ ಎಸ್. ಫರತಾಬಾದ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಈ ಹಿಂದೆ ಡಿ.ಹೆಚ್.ಓ ಆಫೀಸ್ ಇದ್ದಾಗ ಬಸ್ ನಿಲ್ದಾಣ ಇದ್ದಿರುತ್ತದೆ. ಸದರಿ ನೂತನವಾಗಿ ಕಟ್ಟಿರುವ ಜಯದೇವ ಆಸ್ಪತ್ರೆ ಕಂಪೌಂಡ್ ಹತ್ತಿರ ನಿರ್ಮಾಣ ಮಾಡುವ ಸಂದರ್ಭದಲ್ಲಿ ಬಸ್ ನಿಲ್ದಾಣ ತೆಗೆದು ಹಾಕಿರುತ್ತಾರೆ. ಇದರಿಂದ ಸಾರ್ವಜನಿಕರಿಗೆ. ಕಾಲೇಜು ವಿದ್ಯಾರ್ಥಿಗಳು ರಸ್ತೆ ಮೇಲೆ ಬಿಸಿಲಿನಲ್ಲಿ ನಿಲ್ಲುತ್ತಿದ್ದು, ಆದಕಾರಣ ಪುನಃ ಬಸ್ ನಿಲ್ದಾಣ ನಿರ್ಮಾಣ ಮಾಡಿ ಸಾರ್ವಜನಿಕರಿಗೆ. ಕಾಲೇಜು ವಿದ್ಯಾರ್ಥಿಗಳಿಗೆ, ಅಲ್ಲೆ ಇರುವಂತಹ ರಂಗ ಮಂದಿರಕ್ಕೆ ಬರುವ ಎಲ್ಲಾ ಜನರಿಗೆ ಅನುಕೂಲಕ್ಕಾಗಿ ಬಸ್ ನಿಲ್ದಾಣ ಪುನರ್ ನಿರ್ಮಾಣ ಮಾಡುವದು ಅತೀ ಅವಶ್ಯಕವಾಗಿರುತ್ತದೆ. ಹಾಗೂ ಈಗ ಬೇಸಿಗೆ ಬಿಸಿಲು ಪ್ರಾರಂಭ ಆಗುತ್ತಿರುವದರಿಂದ ನಗರದಲ್ಲಿರುವಂತಹ ಎಲ್ಲಾ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ. ವಯೋವೃದ್ಧರ ಅನುಕೂಲಕ್ಕಾಗಿ ಕುಡಿಯುವ ನೀರು ಹಾಗೂ ಪ್ಯಾನ್ ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಕ್ಷಯ, ನವೀನ್, ಸುರೇಶ ಹನಗುಡಿ, ಅಣವೀರ ಪಾಟೀಲ, ಪ್ರವೀಣ ಶಿಂಧೆ, ಅಂಬು ಮಸ್ತಿ, ಸಾಯಿಕುಮಾರ ಶಿಂಧೆ ಇದ್ದರು.