ತಿಭೆಗೆ ಉತ್ತಮ ವೇದಿಕೆ ಪ್ರತಿಭಾ ಕಾರಂಜಿ : ಹನುಮಂತಪ್ಪ

0
21

ಕೊಪ್ಪಳ: ಸರ್ಕಾರ ಗ್ರಾಮೀಣ ಮಕ್ಕಳ ಪ್ರತಿಭೆಯನ್ನು ಗುರುತಿಸಲು ಪ್ರತಿಭಾ ಕಾರಂಜಿಯನ್ನ ಶಿಕ್ಷಣ ಇಲಾಖೆಯ ಮೂಲಕ ನಡೆಸಲಾಗುತ್ತಿದ್ದು, ಶಿಕ್ಷಕರು ಮತ್ತು ಪಾಲಕರು ಹೆಚ್ಚಿನ ಮಟ್ಟದಲ್ಲಿ ಪ್ರೋತ್ಸಾಹಿಸಿದಾಗ ಮಾತ್ರ ಪ್ರತಿಭೆಯನ್ನು ಪ್ರದರ್ಶಿಸಲು ಸಾಧ್ಯವಾಗುತ್ತದೆ ಎಂದು ಅಕ್ಷರ ದಾಸೋಹ ತಾಲೂಕ ಅಧಿಕಾರಿಯಾದ ಹನುಮಂತಪ್ಪ ಹೇಳಿದರು.

ಅವರು ನಗರದ ತಾಲೂಕಿನ ಭಾಗ್ಯನಗರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಉತ್ತರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಆರೋಗ್ಯ ಮುಖ್ಯ. ಆರೋಗ್ಯವಂತರಾಗಿ ಇರಬೇಕೆಂದರೆ ಮಕ್ಕಳು ವಿದ್ಯೆಯ ಜೊತೆಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳಬೇಕು. ಪ್ರತಿ ಮಕ್ಕಳು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ವ್ಯಕ್ತಡಿಸಲು ಪ್ರತಿಭಾ ಕಾರಂಜಿಯಂತಹ ಅನೇಕ ಕಾರ್ಯಕ್ರಮದ ಮೂಲಕ ಸಾಧ್ಯ ಎಂದರು.

Contact Your\'s Advertisement; 9902492681

ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ, ಪ್ರತಿಭೆ ಎನ್ನುವುದು ಸಾಧಕರ ಸ್ವತ್ತು ಹೊರತು ಸೋಮಾರಿಯ ಸ್ವತ್ತಲ್ಲ.ಜೀವನದಲ್ಲಿ ಅಸಾಧ್ಯ ಎಂಬುದು ಯಾವುದು ಇಲ್ಲಾ ಸಾಧ್ಯ ಎಂಬ ಮನೋಭಾವನೆಯನ್ನು ಬೆಳೆಸಿಕೊಳ್ಳುವುದರ ಜೊತೆಯಲ್ಲಿ ಪ್ರಯತ್ನ ಮಾಡಿದಾಗ ಮಾತ್ರ ಅಂದು ಕೊಂಡ ಕ್ಷೇತ್ರದಲ್ಲಿ ಯಶಸ್ವಿ ಕಾಣಲು ಸಾಧ್ಯವಾಗುತ್ತದೆ. ಮಕ್ಕಳ ಆಸಕ್ತಿಗೆ ಅನುಗುಣವಾಗಿ ಶಿಕ್ಷಕರು ಅವರನ್ನು ಕಾರ್ಯ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉತ್ತರ ಕ್ಲಸ್ಟರಿನ ಸಿ.ಆರ್.ಪಿ.ಶ್ರೀರಾಮ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪ.ಪಂ. ಸದಸ್ಯರಾದ ಕವಿತಾ ಚಾಳಮರ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪಾಂಡುರಂಗಪ್ಪ, ಆಂಜನೇಯ ಬಡಾವಣೆ ಶಾಲೆಯ ಮುಖ್ಯೋಪಾಧ್ಯಾಯ ಯಲ್ಲಪ್ಪ ಹಾದಿಮನಿ, ಸರಕಾರಿ ನೌಕರರ ಸಂಘದ ನಿರ್ದೇಶಕರಾದ ಬಾಳಪ್ಪ ಕಾಳೆ, ಟಣಕನಲ್ಲ ಶಾಲೆಯ ಮುಖ್ಯೋಪಾಧ್ಯಾಯ ಪ್ರಭುರಾಜ ಬಳಿಗಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಬಸವರಾಜ ಕೊಮಲಾಪುರ, ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ವೀರಭದ್ರಯ್ಯಾ, ಹಲಗೇರಿ ಕ್ಲಸ್ಟರಿನ್ ಸಿ.ಆರ್.ಪಿ.ಬಸವನಗೌಡ, ನಿವೃತ್ತ ಶಿಕ್ಷಕರಾದ ಮೋಹನಲಾಲಸಾ, ಅಮರೇಶ ಬಿಜ್ಜಳ, ದೈಹಿಕ ಶಿಕ್ಷಕರಾದ ವೀರಭದ್ರಯ್ಯಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕೆ.ಎಸ್.ಡಿ.ಎ.ಕಾಲೋನಿಯ ಮುಖ್ಯ ಶಿಕ್ಷಕ ವಿರೇಶ ಹುಲ್ಲೂರ ಕಾರ್ಯಕ್ರಮವನ್ನು ನಿರೂಪಿಸಿದರು.
ಬಸವಂತಪ್ಪ ಸ್ವಾಗತಿಸಿ ,ಯಲಪ್ಪ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here