ಅಂಕಗಳಿಗಿಂತ ಮೌಲ್ಯ ಶಿಕ್ಷಣ ಮುಖ್ಯ: ಗುರುಪ್ರಸಾದ

0
46

ಆಳಂದ: ಅಂಕ ಪಡೆಯುವುದೇ ಶಿಕ್ಷಣದ ಮುಖ್ಯ ಉದ್ದೇಶವಲ್ಲ ಅದರ ಜೊತೆಗೆ ಮಕ್ಕಳಲ್ಲಿ,ನೈತಿಕತೆ, ಪ್ರಾಮಾಣಿಕತೆ, ಶಿಶ್ತು ಮೂಡಿಸುವುದರ ಮೂಲಕ ಅವರನ್ನು ಸ್ವಾವಲಂಭಿಯಾಗುವ ದಿಸೆಯಲ್ಲಿ ಅಧ್ಯಾಪಕರು ಶಿಕ್ಷಣ ನೀಡಬೇಕೆಂದು  ಜೆ ಎಂ ಎಫ್ ಸಿ ಪ್ರಧಾನ ಸಿವ್ಹಿಲ್ ನ್ಯಾಯಾಧೀಶ ಗುರುಪ್ರಸಾದ ಸಿ ಹೇಳಿದರು.

ಅವರು ತಾಲೂಕಿನ ಕೊರಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ  ತಾಲೂಕಾ ಕಾನೂನು ಸೇವಾ ಸಮಿತಿ,ನ್ಯಾಯವಾದಿಗಳ ಸಂಘ ಹಾಗೂ ಶಿಕ್ಷಣ ಇಲಾಖೆ ಇವರ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ “ಬೇಟಿ ಬಚಾವೊ ಬೇಟಿ ಪಡಾವೊ” ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದಿರಾ ಗಾಂಧಿ, ಕಲ್ಪನಾ ಚಾವ್ಲಾ, ಪಿ.ವಿ.ಸಿಂಧು ಸೇರಿದಂತೆ ಅನೇಕ ಜನ  ಮಳೆಯರು ವಿವಿಧ   ಕ್ಷೇತ್ರಗಳಲ್ಲಿ ಸಾಧನೆಗೈದು ಸ್ಪೂರ್ತಿ  ಯಾಗಿದ್ದಾರೆ.ಪುರುಷರಗಿಂತ ಮಹಿಳೆಯರು ಇಂದು ಯಾವೂದರಲ್ಲಿಯೂ ಕಡಿಮೆ ಇಲ್ಲ ಎನ್ನುವದನ್ನು ಅವರು ಸಾಬೀತುಮಾಡಿದ್ದಾರೆ. ಆದ್ದರಿಂದ ವಿದ್ಯಾರ್ಥಿನಿಯರು ಪೋಷಕರ ಕನಸು ನನಸು ಮಾಡಲು  ನಿರಂತರವಾಗಿ ಅಧ್ಯಯನದಲ್ಲಿ  ತೊಡಗಬೇಕೆಂದು ಕರೆ ನೀಡಿದರು.

Contact Your\'s Advertisement; 9902492681

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ನ್ಯಾಯವಾದಿ ದೇವಾನಂದ ಹೊದಲೂರಕರ್ ಮಾತನಾಡಿ, ಅನಾದಿಕಾಲದಿಂದಲೂ ಈ ಸಮಾಜದಲ್ಲಿ ಮಹಿಳೆಯರನ್ನು ತುಚ್ಛವಾಗಿ ಕಾಣಲಾಗುತ್ತಿತ್ತು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ಬರೆಯುವ ಮೂಲಕ ಸ್ತ್ರೀಯರಿಗೆ ಸಮಾನತೆಯನ್ನು ನೀಡಿದ್ದಾರೆ. ಪುಲೆ ದಂಪತಿಗಳು ಎಲ್ಲ ವರ್ಗದ ಮಹಿಳೆಯರಿಗೆ ಶಿಕ್ಷಣವನ್ನು ನೀಡಲು ಶ್ರಮಿಸಿದ್ದಾರೆ. ಶರಣರು ಕೂಡಾ ಮಹಿಳೆಯರಿಗೆ ಸಮಾನತೆಯನ್ನು ಪ್ರತಿಪಾದಿಸಿದ್ದಕ್ಕಾಗಿ ಇಂದು  ಎಲ್ಲ ರಂಗಗಳಲ್ಲಿ ಮಹಿಳೆಯರು ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಪ್ರಾಚಾರ್ಯ ಡಾ.ರಾಜಶೇಖರ ಮಾಂಗ್ ಮಾತನಾಡಿ, ಮೊದಲಿನಿಂದೂ  ದೇವರ ಧರ್ಮದ ಹೆಸರಿನ ಮೇಲೆ ಮಹಿಳೆಯರನ್ನು ಶೋಷಣೆ ಮಾಡುತ್ತ ಬರಲಾಗಿದ್ದು ಇಂದು  ಸಂವಿಧಾನದಿಂದ ಅವರಲ್ಲಿ ಧೈರ್ಯ, ಜಾಗೃತಿ ಮೂಡಿದೆ. ವಸತಿ ಶಾಲೆಯ ಬಾಲಕಿಯರು ಸರಕಾರದ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು  ಮುಂದೆ ಬರಬೇಕೆಂದು ಕಿವಿಮಾತು ಹೇಳಿದರು.

ಸಂಗೀತ ಶಿಕ್ಷಕ ಬದರಿನಾಥ ಮುಡಬಿ ಪ್ರಾರ್ಥನಾ ಗೀತೆ ಹಾಡಿದರು. ಬಿ.ಆಯ್.ಶಿರೋಳೆ  ನಿರೂಪಿಸಿದರು.ಬಾಪು ಪವಾರ ವಂದಿಸಿದರು. ವೇದಿಕೆಯ ಮೇಲೆ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್ ಡಿ ಬೋಸಗೆ,ಕಾರ್ಯದರ್ಶಿ ಬಿ.ಜಿ.ಬೀಳಗಿ, ಶಿವಶಂಕರ ಮುನೋಳಿ,ಸಂಜುಕುಮಾರ ಪಾಟೀಲ,ಬಲಭೀಮ ಸಿಂಧೆ, J. ಸಿ ತೋಳೆ,ಮಹಾದೇವ ಹತ್ತಿ ,ಬಿ.ಎಸ್. ನಿಂಬರಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here