- ಎಂ.ಡಿ ಮಶಾಖ ಚಿತ್ತಾಪುರ
ಚಿತ್ತಾಪುರ: ವಡ್ಡರ ಸಮುದಾಯದವರು ಭೋವಿ ಪದ ದುರ್ಬಳಕೆ ಮಾಡುತ್ತಿರುವುದನ್ನು ಖಂಡಿಸಿ ಕರ್ನಾಟಕ ಭೋವಿ ಸಮಾಜ ವಿಕಾಸ ಸಂಘದ ನೇತೃತ್ವದಲ್ಲಿ ಫೆ.24 ರಂದು ಬೆಳಗ್ಗೆ 11 ಗಂಟೆಗೆ ಸಮಾಜದ ಮುಖಂಡರು ಚಿತ್ತಾಪುರ ಪಟ್ಟಣದ ತಹಶೀಲ್ ಕಚೇರಿ ಎದರುಗಡೆ ಬೃಹತ್ ಪ್ರತಿಭಟನೆ ನಡೆಸಿದರು.
ನಂತರ ತಹಶೀಲ್ದಾರ್ ಸೈಯದ್ ಶಾಹವಲಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಭೋವಿ ಸಮಾಜದ ತಾಲೂಕು ಅಧ್ಯಕ್ಷ ಸುರೇಶ ಅಳ್ಳೋಳ್ಳಿ, ಕಾರ್ಯದರ್ಶಿ ಸಿದ್ರಾಮ ಆಲಮೇಲಕರ್, ಶಂಭುಲಿಂಗಪ್ಪ ತಾಂಡೂರಕರ್, ಶಂಬಣ್ಣ ಎದರಮನಿ, ಮಲ್ಲಿಕಾರ್ಜುನ, ನರಸಿಂಹ ಆಲಮೇಲಕರ್, ಸಿದ್ದಲಿಂಗಪ್ಪ ಬೆಳಗೇರಿ, ಅಂಬರೀಶ ಕರದಳ್ಳಿ ಸೇರಿದಂತೆ ಅನೇಕ ಮುಖಂಡರು ಹಾಗೂ ಪದಾಧಿಕಾರಿಗಳು ಇದ್ದರು.