ಸರಕಾರಿ ಸಂಸ್ಥೆಗಳ ದುರಪಯೋಗ ಮಾಡಿಕೊಂಡು ಚುನಾವಣೆ ಗೆಲ್ಲುವ ಪ್ರಯತ್ನ ನಡೆಯುತ್ತಿದೆ

0
65

ಕಲಬುರಗಿ: ಸರಕಾರಿ ಏಜೆನ್ಸಿಗಳನ್ನು ದುರಪಯೋಗ ಮಾಡಿಕೊಂಡು ಪ್ರಜಾಪ್ರಭುತ್ವದಲ್ಲಿ ಅಹಂನಿಂದ ಮಾತಾಡಿದರೆ ಜನ ಅವರಿಗೆ ಪಾಠ ಕಲಿಸುತ್ತಾರೆ. ಸರಕಾರಿ ಮಷಿನರಿಗಳನ್ನು ದುರಪಯೋಗ ಮಾಡಿಕೊಂಡು ಚುನಾವಣೆ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.

ಸೋಮವಾರ ಸುರಪುರ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜ ವೆಂಕಟಪ್ಪ ನಾಯಕ ನಿಧನ ಹಿನ್ನೆಲೆ ಅಂತಿಮ ದರ್ಶನಕ್ಕೆ ಕಲಬುರಗಿ ವಿಮಾನದಲ್ಲಿ ಬಂದಿಳಿದು ಮಾಧ್ಯಮಗಳೊಂದಿಗೆ ಮಾತನಾಡಿದರು.

Contact Your\'s Advertisement; 9902492681

ನಾವು ಮತದಾರರನ್ನು ಉಳಿಸಿಕೊಳ್ಳಿಸಿಕೊಳ್ಳಲು ಎಸ್.ಪಿ, ಆಮ್ಆದ್ಮಿ ಪಾರ್ಟಿ, ಝಾರಖಂಡನಲ್ಲಿನಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಬಿಹಾರ, ಡಿಎಂಕೆ, ಮುಸ್ಲಿಮ್ ಲಿಗ್ ಹೊಂದಾಣಿಕೆ ಆಗಿದೆ ಬಹಿರಂಗ ಪಡಿಸಬೇಕಿದೆ ಹೀಗೆ ನಾವು ಅಲೈನ್ಸ್ ಪಾರ್ಟನರ್ಸ್ ಸೇರಿ ಒಗ್ಗೂಡಿಸುತ್ತೇವೆ ಎಂದು ತಿಳಿಸಿದರು.

ಪ್ರಜಾಪ್ರಭುತ್ವದಲ್ಲಿ ಯಾರಾದರು ಅಹಂನಿಂದ ಮಾತಾಡಿದರೆ ಜನ ಅವರಿಗೆ ಪಾಠ ಕಲಿಸುತ್ತಾರೆ. ಪ್ರಜಾಪ್ರಭುತ್ವದಲ್ಲಿ ಇದು ಯಾರೋ ಒಬ್ಬರ ಕೈಯಲ್ಲಿ ಇಲ್ಲ. ನೀವು ಸರಕಾರಿ ಸಂಸ್ಥೆಯನ್ನು ದುರಪಯೋಗ ಮಾಡಿಕೊಳ್ತಿದಿರಿ ಎಂದು ಅರ್ಥವಾಗುತ್ತದೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವಾರಜ್ ಸಿಂಗ್ ಚವ್ಹಾಣ್ 371 ಜೆ ಹೊಂದಿರುವ ಕಲಬುರಗಿಗೆ ಕೇಂದ್ರದಿಂದ 10 ಸಾವಿರ ಕೋಟಿ ಕೋಡಿಸಿ ಈ ಭಾಗವನ್ನು ಉದ್ಧಾರ ಮಾಡುವ ಬಗ್ಗೆ ಮಾತನಾಡಬೇಕು, ಸುಮ್ಮನೆ ಟೀಕೆ ಮಾಡಿ ಹೊಗುವುದಲ್ಲ. ಬಿಜೆಪಿ ಮಂತ್ರಿಗಳಿಗೆ ಕಾಂಗ್ರೆಸ್ ಬಗ್ಗೆ ಟೀಕೆ ಮಾಡುವುದು ಮಾತ್ರ ಗೊತ್ತು. ನಮ್ಮನು ಎದುರಿಸಲು ಕಷ್ಟವಾಗುತ್ತಿರುವುದರಿಂದ ಈ ರೀತಿ ಮತನಾಡುತ್ತಾರೆ ಎಂದರು.

ವೆಂಕಟಪ್ಪ ನಾಯಕ್ ನನ್ನಗೆ ಪ್ರತಿಯೊಂದು ಚುನಾವಣೆಯಲ್ಲಿ ಕರೆಯುತ್ತಿದರು. ನಾವು ನೀಡಿರುವ ಕೆಲಸ ಚಾಚು ತಪ್ಪದೆ ಮಾಡುತ್ತಿದರು. ಈ ಬಾರಿ ಅವರಿಗೆ ಲೋಕಸಭೆಗೆ ಕರೆಸಿಕೊಳ್ಳಬೇಕೆಂದು ಅಂದುಕೊಂಡಿದ್ದೇವೆ ಆದರೆ ವಿಷಯ ಬಹಿರಂಗ ಪಡಿಸಲಿಲ್ಲ. ಅವರ ಆಕಸ್ಮಿಕ ನಿಧನ ನಮ್ಮಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಂತಾಪ ಸೂಚಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here