ನಾಳೆ ರಾಜ್ಯದಲ್ಲಿ 3 ನೇ ಹಂತದ ಮತದಾನ. 237 ಅಭ್ಯರ್ಥಿಗಳ ಭವಿಷ್ಯ, 2.43 ಕೋಟಿ ಮತದಾರರ ಕೈಯಲ್ಲಿ

0
99

ಕಲಬುರಗಿ: ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಮೂರನೇ ಹಂತದ ಮತದಾನ ಮಂಗಳವಾರ ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭಗೊಳಲಿದೆ. ಕಾಂಗ್ರೆಸ್​​, ಜೆಡಿಎಸ್ ಸೇರಿದಂತೆ ಮುಂತಾದ ಘಟಾನುಘಟಿ ನಾಯಕರ ಭವಿಷ್ಯ ನಿರ್ಧರಿಸಿರುವ ಈ  ಚುನಾವಣೆ ಇದಾಗಿದೆ. ಬಿಗಿ ಬಂದೋಬಸ್ತ್​​ ನಡುವೆ ಚುನಾವಣೆ ಮತದಾನ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೇ ನೋಡಿಕೊಳ್ಳಲು ಆಯೋಗ ಮುನ್ನೆಚ್ಚರಿಕಾ ಕ್ರಮವಾಗಿ ಸುಮಾರು 45 ಸಾವಿರ ಪೊಲೀಸರು ಭದ್ರತೆಗಾಗಿ ನಿಯೋಜಿಸಿದೆ.

ನಾಳೆ ಮತದಾನ ನಡೆಯಲಿರುವ ರಾಜ್ಯದ 14 ಕ್ಷೇತ್ರಗಳು:-

ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ, ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಸುಮಾರು 2.43 ಕೋಟಿ ಮತದಾರರು 237 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧರಿಸಲಿದ್ದಾರೆ.

ಚುನಾವಣೆ ಆಯೋಗದ ಸಿದ್ಧತೆಗಳು:-

Contact Your\'s Advertisement; 9902492681

ಈ ಎಲ್ಲಾ ಕ್ಷೇತ್ರಗಳಲ್ಲಿ ಸುಮಾರು 28,028 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಅವುಗಳಲ್ಲಿ 5,674 ಸೂಕ್ಷ್ಮ, 22,354 ಸಾಮಾನ್ಯ ಮತಗಟ್ಟೆಗಳಿವೆ. ಚುನಾವಣಾ ಕರ್ತವ್ಯಕ್ಕಾಗಿ ಆಯೋಗ ಒಟ್ಟು 90,997 ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದೆ ಎಂದು ತಿಳಿದು ಬಂದಿದೆ.

ಕಾರ್ಯನಿರ್ವಹಿಸುವ ಸಿಬ್ಬಂದಿಗಳು:

ಚುನಾವಣಾ ಕರ್ತವ್ಯಕ್ಕಾಗಿ 1531 ವಲಯ ಸಂಚಾರಿ ಗಸ್ತು ವಾಹನಗಳು, 337 ವಲಯ ಮೇಲುಸ್ತುವಾರಿ ಸಂಚಾರಿ ಗಸ್ತು, 125 ಬಿಎಸ್‍ಪಿ ಸಂಚಾರಿ ಗಸ್ತು, 382 ಸಂಚಾರಿ ತಂಡಗಳು, 384 ಸ್ಥಿರ ಕಣ್ಗಾವಲು ತಂಡಗಳು, 5 ಸಿಆರ್‍ಪಿಎಫ್ ಪಡೆಗಳು, ಸೂಕ್ಷ್ಮ ಮತಗಟ್ಟೆಗಳಿಗೆ 912 ಸಿಆರ್​​​ಪಿಎಫ್​​​ನ ಅರ್ಧ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಮತದಾನ ವೇಳೆ  ಕಾನೂನು ಸುವ್ಯವಸ್ಥೆಗಾಗಿ 143 ಕೆಎಆರ್​​ಪಿ, 340 ಡಿಎಆರ್, ಸಿಎಆರ್ ತಂಡಗಳನ್ನು ನಿಯೋಜನೆ ಮಾಡಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here