ರಸಪ್ರಶ್ನೆ ಕಾರ್ಯಾಕ್ರಮ: ಶಿಕ್ಷಕರು ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಲಿ: ಲಕ್ಷ್ಮೀಕಾಂತ

0
72

ಸುರಪುರ: ತಾಲ್ಲುಕಿನ ಬಾದ್ಯಾಪುರ ಗ್ರಾಮದಲ್ಲಿ ಶ್ರೀಗುರು ಸೇವಾ ಸಂಸ್ಥೆಯಿಂದ ಬೇಸಿಗೆ ಶಿಬಿರದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಿಂತಕ ಲಕ್ಷ್ಮೀಕಾಂತ ದೇವರಗೋನಾಲ ಭಾಗವಹಿಸಿ ಮಾತನಾಡಿ, ಇಂದು ಶಿಕ್ಷಣ ಎಂಬುದು ಪ್ರತಿಯೊಬ್ಬ  ಮಗುವಿನ ಬದುಕಿಗೆ ಮುಖ್ಯವಾಗಿದೆ.ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಆಸಕ್ತಿ ವಹಿಸಿ ಶಾಲೆಗೆ ಕಳುಹಿಸುತ್ತಾರೆ.ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸುವ ಜವಬ್ದಾರಿ ಶಿಕ್ಷಕರ ಮೇಲಿದೆ ಎಂದರು.

Contact Your\'s Advertisement; 9902492681

ಮತ್ತೋರ್ವ ಮುಖಂಡ ಮಾನು ಕಲಬುರ್ಗಿ ಮಾತನಾಡಿ,ಇಂದು ಶಿಕ್ಷಣ ಎಂಬುದು ವ್ಯಾಪಾರಿಕರಣವಾಗುತ್ತಿದೆ.ಆದರೆ ಹಳ್ಳಿಯಲ್ಲಿನ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡಲು ಶ್ರಮಿಸುತ್ತಿರುವ ಶ್ರೀಗುರು ಸೇವಾ ಸಂಸ್ಥೆಯ ಕಾರ್ಯ ಶ್ಲಾಘನಿಯವಾಗಿದೆ ಎಂದರು. ಸಂಸ್ಥೆಯ ಅಧ್ಯಕ್ಷ ಮಲ್ಲು ಬಾದ್ಯಾಪುರ ಪ್ರಾಸ್ತಾವಿಕವಾಗಿ  ಮಾತನಾಡಿ,ತಾಲ್ಲೂಕಿನ ಅನೇಕ ಶಾಲೆಗಳಲ್ಲಿ ಪ್ರತಿವರ್ಷ ಈರೀತಿಯ  ಸ್ಪರ್ಧಾತ್ಮಕ ಚಟುವಟಿಕೆಗಳನ್ನು ನಡೆಸುವ ಮೂಲಕ ಮಕ್ಕಳಲ್ಲಿ ಕಲಿಯುವ ಆಸಕ್ತಿ ಹೆಚ್ಚಿಸಲಾಗುತ್ತಿದೆ ಎಂದರು.

ಇದೇ ಸಂಸರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳು ತಮ್ಮ ಕೌಶಲ್ಯ ಪ್ರದರ್ಶಿಸಿದರು ಹಾಗು ಶಾಲಾ ಮಕ್ಕಳಿಂದ ಎರಡು ತಂಡಗಳಿಂದ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು.ಕಾರ್ಯಕ್ರಮದಲ್ಲಿ ಬಾಲರಾಜ ಶಾಂತಪೂರ,ಹಣಮಂತ್ರಾಯ ದೇವರ,ಶರಣಪ್ಪ ಬಸಣ್ಣೋರ,ಶರಣಗೌಡ ಮಾಲಿಪಾಟೀಲ,ಶಿವಗುಂಡಪ್ಪ ಜಾಲಹಳ್ಳಿ,ಹಣಮಂತ್ರಾಯ ಹೋಟೆಲ ಸೇರಿದಂತೆ ಅನೇಕ ಜನ ವಿದ್ಯಾರ್ಥಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here