ಕಲಬುರಗಿ: ಮುಂದಿನ ಎರಡು ವರ್ಷಗಳ ಕಾಲವಧಿಗೆ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ಮುಖಂಡರಾಗಿದ ಮಜರ್ ಆಲಮ್ ಖಾನ್ ಅವರಿಗೆ ನೇಮಕ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶ ಹೋರಡಿಸಿದ್ದಾರೆ.
ಫೆ. 28 ರಂದು ಮಜರ್ ಆಲಮ್ ಖಾನ್ ಅವರಿಗೆ ದೇವರಾಜ ಅರಸು ಟ್ರಕ್ ಟರ್ಮಿನಲ್ ಅಧ್ಯಕ್ಷರಾಗಿ ನೇಮಕ ಮಾಡಿತ್ತು. ಗುರುವಾರ ಮುಖ್ಯಮಂತ್ರಿಗಳು ನೇಮಕಾತಿಯನ್ನು ಮರು ಪರಿಶೀಲಿಸಿ ಮಜರ್ ಆಲಮ್ ಖಾನ್ ಅವರಿಗೆ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ ಆದೇಶ ಹೋರಡಿಸಿದ್ದಾರೆ.