ನೇಕಾರ ನಿಗಮ ಸ್ಥಾಪನೆ ಅಧಿಸೂಚನೆ ಜಾರಿಗೆ ಮನವಿ

0
83

ಕಲಬುರಗಿ: ಮಾಜಿ ಶಾಸಕ ದತ್ತಾತ್ರೇಯ ಪಾಟೀಲ(ಅಪ್ಪು ಗೌಡ) ಜನ್ಮ ದಿನದ ನಿಮಿತ್ತ ಬಿಜೆಪಿಯ ನೇಕಾರ ಪ್ರಕೋಷ್ಠ ಮತ್ತು ನೇಕಾರ ಸಮಾಜಗಳ ನಿಯೋಗ ಅವರ ನಿವಾಸದಲ್ಲಿ ಗೌರವಿಸಿ, ವಿರೋಧ ಪಕ್ಷದ ನಾಯಕ ಆರ್, ಅಶೋಕ ರವರನ್ನು ನೇಕಾರ ಸಮುದಾಯದ ಹಿತದೃಷ್ಟಿಯಿಂದ ಕಳೆದ ವರ್ಷ ಸರಕಾರ ನೇಕಾರ ನಿಗಮ ಸ್ಥಾಪನೆಗೆ ಅಧಿಸೂಚನೆ ಹೊರಡಿಸಿದೆ ಅದನ್ನು ಜಾರಿಗೆ ತರಲು ಒತ್ತಡ ತರಲು ಮನವಿ ಮಾಡಿದರು.

ಕೇಂದ್ರ ಸರ್ಕಾರದ ಜವಳಿ ಯೋಜನೆಯ ನೀಲ ನಕ್ಷೆಯನ್ನು ಜಾರಿಗೊಳಿಸಲು ರಾಜ್ಯದ ಪಾಲಿನ ಹಣ ಬಿಡುಗಡೆಗೆ ಧ್ವನಿ ಗುಡಿಸಿ, ಕಲಬುರಗಿ ಜಿಲ್ಲೆಯ ಪಾರಂಪರಿಕ ನೇಕಾರ ಸಮಾಜಗಳಿಗೆ 51% ಪಾಲಿನ ಹಕ್ಕು ಪಡೆಯುವಂತೆ ಮಾಡಲು ಕೊರಲಾಯಿತು.

Contact Your\'s Advertisement; 9902492681

ಮಾಜಿ ದಕ್ಷಿಣ ಮಂಡಲ ಕಾರ್ಯದರ್ಶಿ ಸತೀಶ ಜಮಖಂಡಿ ಸ್ವಾಗತಿಸಿದರು. ಪ್ರಾಸಂಗಿಕವಾಗಿ ನೇಕಾರ ಮಹಾನಗರ ನೇಕಾರ ಪ್ರಕೋಷ್ಠ ಸಂಚಾಲಕ ಶಿವಲಿಂಗಪ್ಪಾ ಅಷ್ಟಗಿ ನೇತೃತ್ವದಲ್ಲಿ ಸಮಾಜದ ಹಿರಿಯರು ಜವಳಿ ಪಾರ್ಕ್ ನ ಯೋಜನೆಯ ಅಡಿಯಲ್ಲಿ ಮಕ್ಕಳಿಗೆ ಉದ್ಯೋಗ ಖಾತರಿ ಪಡಿಸುವಲ್ಲಿ ಸಹಕರಿಸಬೇಕೆಂದು ಕೋರಿದರು.

ಬಿಜೆಪಿಯ ಹಿರಿಯ ಕಾರ್ಯಕರ್ತ ಹಾಗೂ ನ್ಯಾಯವಾದಿ ಜೇನವೆರಿ ವಿನೋದ ಕುಮಾರ ಮಾತನಾಡಿ ನೇಕಾರರನ್ನು ಕಡೆಗಣಿಸಿ ರಾಜ್ಯ ಬಜೆಟ್ ನಲ್ಲಿ ಅನ್ಯಾಯ ಮಾಡಿದ ನಿಲುವಿಗೆ ಇದೆ 23.2.23 ರಂದು ಪ್ರಪ್ರಥಮ ಬಾರಿಗೆ ಬೃಹತ್ ಪ್ರತಿಭಟನೆ ಮೂಲಕ ಸರ್ಕಾರದ ಗಮನ ಸೆಳೆದಿದ್ದೇವೆ ಅದನ್ನು ಅರಿತು ತಾವು ಕೂಡಾ ಮುಂದಿನ ತಿಂಗಳು ಜರಗುವ ಲೋಕಸಭಾ ಚುನಾವಣೆಯಲ್ಲಿ ನೇಕಾರ ಒಗ್ಗಟ್ಟಾಗಿ ಮತ ಪಡೆಯಲು ಅಭ್ಯರ್ಥಿ ನೇಕಾರರ ವಿಶ್ವಾಸ ಪಡೆಯಲು ಸಭೆ ಹಮ್ಮಿಕೊಳ್ಳುವ ಮೂಲಕ ನೇಕಾರರಿಗೆ ನ್ಯಾಯ ಒದಗಿಸಲು ಆಗ್ರಹಿಸಿದರು.

ನೇಕಾರ ನಿಯೋಗದಲ್ಲಿ ಹಟಗಾರ ಅಭಿವೃದ್ಧಿ ಸಂಘದ ಅಧ್ಯಕ್ಷ ಚನ್ನಮಲ್ಲಪ್ಪ ನಿಂಬೆಣ್ಣಿ ಕಾರ್ಯದರ್ಶಿ ಸೂರ್ಯಕಾಂತ ಸೊನ್ನದ, ಕುರಹಿನಶೆಟ್ಟಿ ಸಮಾಜದ ಅಧ್ಯಕ್ಷ ಬಸವರಾಜ ಕರದಳ್ಳಿ, ಉಪಾಧ್ಯಕ್ಷ ಕುಶಾಲ ಯಡವಳ್ಳಿ ಕಾರ್ಯದರ್ಶಿ ಮ್ಯಾಳಗಿ ಚಂದ್ರಶೇಖರ್ ಖಜಾಂಚಿ ಮಲ್ಲಿನಾಥ ಕುಂಟೋಜಿ, ತೊಗಟ ವೀರ ಅಧ್ಯಕ್ಷ ಶ್ರೀನಿವಾಸ ಬಲಪೂರ್, ಪದ್ಮಸಾಲಿ ಉಪಾಧ್ಯಕ್ಷ ವಿಜಯಕುಮಾರ ತ್ರೀವೇದಿ, ಉತ್ತರ ಮತ ಕ್ಷೇತ್ರದ ಮಹಾದೇವಪ್ಪ ಘಾಳೆ, ಡ್ರಾ.ಬಸವರಾಜ ಚನ್ನಾ, ಶಾಂತ್ ಕುಮಾರ ಗೌರ ಮತ್ತು ಭೀಮಳ್ಳಿ ಕಾರ್ಯಕರ್ತರು ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here