ಹೃದಯ ಶ್ರೀಮಂತಿಕೆ ಬೆಳೆಯುವುದು ಕನ್ನಡ ಶಾಲೆಗಳಿಂದ ಮಾತ್ರ ಸಾದ್ಯ: ಡಾ. ಶಿವರಂಜನ ಸತ್ಯಂಪೇಟೆ

0
129

ಶಹಾಪುರ : ಆಂಗ್ಲ ಮಾಧ್ಯಮ ಶಾಲೆಗಳಿಂದ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ,ಆದರೆ ಕನ್ನಡ ಶಾಲೆಗಳಿಂದ ಹೃದಯ ಶ್ರೀಮಂತಿಕೆ ಬೆಳೆಯುತ್ತಿದೆ ಎಂದು ಪತ್ರಕರ್ತ – ಸಾಹಿತಿ ಡಾ: ಶಿವರಂಜನ ಸತ್ಯಂಪೇಟೆ ಹೇಳಿದರು,

ನಗರದ ಮಾತೃ ಛಾಯ ಶಿಕ್ಷಣ ಸಂಸ್ಥೆಯ 12 ನೇ ವರ್ಷದ ವಾರ್ಷಿಕೋತ್ಸವ ಹಾಗೂ,ಶ್ರೀ ಕನಕದಾಸ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು,ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ,ಹೆಚ್ಚಾಗಿ ಕನ್ನಡ ಪೌರಾಣಿಕ,ಐತಿಹಾಸಿಕ, ಸಾಮಾಜಿಕ ನಾಟಕ,ಜಾನಪದ ನೃತ್ಯಗಳ ಕಡೆಗೆ ಒಲವು ತೋರುವಂತೆ ಶಿಕ್ಷಕರು ಮಕ್ಕಳನ್ನು ಪ್ರೇರೇಪಿಸಬೇಕು ಎಂದು ನುಡಿದರು.

Contact Your\'s Advertisement; 9902492681

ಇನ್ನೋರ್ವ ಮುಖ್ಯ ಅತಿಥಿಗಳಾದ ಸಿದ್ಧಲಿಂಗಣ್ಣ ಆನೇಗುಂದಿ ಸಂಸ್ಥೆಯ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿ,ಮಕ್ಕಳಿಗೆ ಇತಿಹಾಸದ ಪರಿಚಯ ಜೊತೆಗೆ,ಕೌಟುಂಬಿಕ ಮೌಲ್ಯಗಳು,ಬೆಸೆಯುವ ನಿಲುವು ಮತ್ತು ನೀತಿ ಕಥೆಗಳು ಹೇಳುವ ಮೂಲಕ ಅವರಲ್ಲಿ ಬಿತ್ತಬೇಕು ಎಂದು ಹೇಳಿದರು.

ಗೋಗಿ ಸೈಯದ್ ಚಂದಾ ಹುಸೇನಿ ದರ್ಗಾದ ಪಿಟಾಧಿಪತಿಗಳಾದ ಸೈಯದ್ ಮಹಮ್ಮದ್ ಹುಸೇನಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು,ಸಮಾರಂಭದ ವೇದಿಕೆಯ ಮೇಲೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ: ರವೀಂದ್ರನಾಥ್ ಹೊಸಮನಿ, ತಾಲೂಕು ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷರಾದ ಆರ್. ಚನ್ನಬಸು ವನದುರ್ಗ,ಕುರಿ ಮಹಾಮಂಡಳಿಯ ನಿರ್ದೇಶಕರಾದ ಶಾಂತಗೌಡ ಪಾಟೀಲ್ ನಾಗನಟಿಗಿ,ಬೀ.ಗುಡಿ ವಲಯ ಕಸಾಪ ಅಧ್ಯಕ್ಷ ಶರಣಬಸವ,ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಸಿನ್ನೂರ,ಹೆಗ್ಗಣದೊಡ್ಡಿಯ ಮಡಿವಾಳಪ್ಪ ಪಾಟೀಲ್,ಇತರರು ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಪ್ರಕಾಶ್ ದೊರೆ (ಮಾಧ್ಯಮ ಕ್ಷೇತ್ರ),ನರಸಿಂಹ ವೈದ್ಯ (ಯೋಗ ಕ್ಷೇತ್ರ).ವಿ.ಸತ್ಯಂ ರೆಡ್ಡಿ (ಶಿಕ್ಷಣ ಕ್ಷೇತ್ರ), ಸವಿತಾ ಟೋಕಾಪುರ (ಶಿಕ್ಷಣ ಕ್ಷೇತ್ರ) ಅಕ್ಬರ್ ಭಾಷಾ ಹೊಟಗಿ (ಸಮಾಜ ಸೇವೆ) ಹಣಮಂತ್ರಾಯ ಧರೆಣ್ಣವರ್ (ಸಮಾಜ ಸೇವೆ) ಆರು ಜನರಿಗೆ 2024 ನೇ ಸಾಲಿನ ಶ್ರೀ ಕನಕದಾಸ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಂತರ ಮಕ್ಕಳಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು,ಸಂಸ್ಥೆಯ ಕಾರ್ಯದರ್ಶಿಗಳಾದ ತಿಪ್ಪಣ್ಣ ಕ್ಯಾತನಾಳ ಪ್ರಾಸ್ತಾವಿಕ ಮಾತುಗಳನ್ನಾಡಿದರು,ಶಿವಾನಿ ಘನಾತೆ ಸ್ವಾಗತಿಸಿದರು,ಭಾಗ್ಯಶ್ರೀ ಘನಾತೆ ಪ್ರಾರ್ಥಿಸಿದರು,ವಿದ್ಯಾ ಎಸ್. ಆನೆಗುಂದಿ ನಿರೂಪಿಸಿದರು,ಮೀನಾಕ್ಷಿ ರೆಡ್ಡಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here