ವಿಭಾಗೀಯ ಮಟ್ಟದ ವಸ್ತು ಪ್ರದರ್ಶನ

0
51

ಕಲಬುರಗಿ: ಮಹಿಳಾ ಸ್ವ-ಸಹಾಯ ಗುಂಪುಗಳು ಉತ್ಪಾದಿಸುವ ಉತ್ಪನ್ನಗಳ ಹೆಚ್ಚಿನ ಮಹತ್ವವಿದ್ದು, ಏನೇ ಸಹಕಾರ ಬೇಕಿದ್ದರೂ ನಮ್ಮನ್ನು ಕೇಳಿ ಎಂದು ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಪಂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ವಿಭಾಗದ ಎಲ್ಲ ಜಿಲ್ಲೆಗಳ ಸ್ತ್ರೀ ಶಕ್ತಿ ಒಕ್ಕೂಟಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸ್ವ-ಸಹಾಯ ಗುಂಪುಗಳು ಉತ್ಪಾದಿಸುವ ಉತ್ಪನ್ನಗಳ ವಿಭಾಗೀಯ ಮಟ್ಟದ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಆನ್‍ಲೈನ್‍ನಲ್ಲಿ ವ್ಯವಹಾರ ಹೇಗೆ ಮಾಡಬಹುದು ಎಂಬುದರ ಬಗ್ಗೆ ವಿಚಾರಿಸುತ್ತಿದ್ದೇವೆ ಎಂದು ಹೇಳಿದರು.

ಸಿಇಒ ಭಂವರ್‍ಸಿಂಗ್ ಮೀನಾ ಮಾತನಾಡಿ, ಮಹಿಳೆಯರ ಆದಾಯ ಹೆಚ್ಚಳ ಹೇಗೆ ಮಾಡಬೇಕು ಎಂಬ ಬಗ್ಗೆ ವಿಚಾರಿಸುತ್ತಿದ್ದೇವೆ. ಮಹಿಳೆಯರಿಗೆ ತರಬೇತಿ ಕೊಡುತ್ತಿದ್ದೇವೆ. ಬಹಳಷ್ಟು ಸಂಸ್ಥೆಯೊಂದಿಗೆ ಒಂದು ಸಹಯೋಗವಾಗಿದ್ದೇವೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನವೀನಕುಮಾರ ಯು ಪ್ರಾಸ್ತಾವಿಕ ಮಾತನಾಡಿದರು. ಮಕ್ಕಳ ರಕ್ಷಕ ಘಟಕ ಅಧಿಕಾರಿ ಮಂಜುಳಾ, ಶಿಶು ಅಭಿವೃದ್ಧಿ ಯೋಜನ ಅಧಿಕಾರಿ ಪ್ರೇಮಾ, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಮಲ್ಲಮ್ಮ ಎ ಕಡ್ಡಾ, ಅಧೀಕ್ಷಕಿ ಶೋಭಾ ಎಸ್.ಬನ್ನಿ ಗೋಳ, ಸ್ತ್ರೀಶಕ್ತಿ ಮೇಲ್ವಚಾರಕಿ ಅರುಣಾ ಗೋಟೂರ್ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here