ಗಾಯನ ಲೋಕಕ್ಕೆ ಗವಾಯಿಗಳ ಕೊಡುಗೆ ಅಪಾರ

0
17

ಸುರಪುರ: ವಿಶ್ವ ಸಂಗೀತ ಲೋಕಕ್ಕೆ ಗದುಗಿನ ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿಗಳ ಕೊಡುಗೆ ಅಪಾರವಾಗಿದೆ ಎಂದು ಖ್ಯಾತ ಸಂಗೀತಗಾರ ರಾಜಗುರು ಗುರುಸ್ವಾಮಿ ಕಲಿಕೇರಿ ಹೇಳಿದರು.

ಸುರಪುರ ಪಟ್ಟಣದ ರಾಜಾ ಮದನಗೋಪಾಲ ನಾಯಕ ಸ್ಮಾರಕ ಭವನದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನ ಸುರಪುರ ಹಾಗೂ ಕನ್ನಡ ಸಾಹಿತ್ಯ ಸಂಘ ಸುರಪುರ ವತಿಯಿಂದ ಆಯೋಜಿಸಿದ್ದ ಡಾ. ಪಂಡಿತ ಪುಟ್ಟರಾಜ ಗವಾಯಿಗಳ 110ನೇ ಜನ್ಮದಿನೊತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದೃಷ್ಟಿಹಿನರಾಗಿದ್ದ ಗದುಗಿನ ಗವಾಯಿಗಳು ಈ ನಾಡಿನೊಳಗಡೆ ಅನೇಕ ಜನ ದೃಷ್ಟಿ ಉಳ್ಳವರ ಬಾಳು ಮತ್ತು ಬದುಕಿಗೆ ಬೆಳಾಗಿರುವದು ಮಹತ್ವದ ಕಾರ್ಯಾವಾಗಿದೆ ಎಂದರು.

Contact Your\'s Advertisement; 9902492681

ತ್ರಿಭಾಷಾ ಕವಿಗಳು ಎಲ್ಲಾ ಬಗೆಯ ಸಂಗೀತದ ವಾದ್ಯಗಳನ್ನು ಬಲ್ಲವರಾಗಿದ್ದ ಗದುಗಿನ ಗಾನಯೋಗಿ ಶಿವಯೋಗಿ ಪುಟ್ಟರಾಜ ಗವಾಯಿಗಳು ಸಾಹಿತ್ಯ ಮತ್ತು ಸಂಗೀತ ಲೋಕಕ್ಕೆ ಅಪಾರವಾದ ಕೊಡುಗೆಗಳನ್ನು ನಿಡಿದ್ದಾರೆ. ಹಿಂದಿಯಲ್ಲಿ ಬಸವ ಪುರಾಣವನ್ನು ಬರೆಯುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ ಹಾಗೂ ವಿರೇಶ್ವರ ಪುಣ್ಯಾಶ್ರಮದ ಮೂಲಕ ಸಾವಿರಾರು ಜನ ಅಂಧ, ಅನಾಥ, ದುರ್ಬಲ, ನಿರ್ಗತಿಕರ ಬಾಳಿಗೆ ಬೆಳಕಾಗಿದ್ದಾರೆ. ಅವರಿಗೆ ಸಂಗೀತ, ಸಾಹಿತ್ಯ, ಪುರಾಣ, ಪ್ರವಚನ ಕಲಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಪುಟ್ಟರಾಜ ಕವಿ ಗವಾಯಿಗಳನ್ನು ನಿತ್ಯ ನಿರಂತರವಾಗಿ ಶ್ರಮಿಸಿದರು ಕೂಡ ಅವರ ಸೇವೆ ಅಮೋಘ ಮತ್ತು ಅಪಾರ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧುಷಿ ನಿರ್ಮಲಾ ರಾಜಗುರು ಅವರು ಸಿದ್ಧಾರೂಢ ನಾಗರಹಳ್ಳಿ ಅವರ ಗಾನ ವಚನ ವೈಭವ ಪುಸ್ತಕ ಬಿಡುಗಡೆ ಮಾಡಿದರು, ಕೃತಿ ಕುರಿತು ಸಾಹಿತಿ ಶರಣಗೌಡ ಪಾಟೀಲ ಜೈನಾಪುರ ಮಾತನಾಡಿದರು, ಕಾರ್ಯಕ್ರಮದಲ್ಲಿ ವೇದಿಕೆಯಮೇಲೆ ತಾಲೂಕ ಕ.ಸಾ.ಪ ಅಧ್ಯಕ್ಷ ಶರಣಬಸಪ್ಪ ಯಾಳವಾರ, ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ, ಲೇಖಕ ಸಿದ್ಧಾರೂಢ ನಾಗರಹಳ್ಳಿ ವೇದಿಕೆ ಮೇಲಿದ್ದರು.

ಇದೇ ಸಂದರ್ಭದಲ್ಲಿ ಪುಟ್ಟರಾಜ ಸೇವಾ ರತ್ನ ಗೌರವ ಪ್ರಶಸ್ತಿಯನ್ನು 2024ನೇ ಸಾಲಿಗೆ ರಾಜಗುರು ಗುರುಸ್ವಾಮಿ ಕಲಿಕೇರಿ ಅವರಿಗೆ 2023ನೇ ಸಾಲಿಗೆ ಡಾ. ಸಿದ್ದಣ್ಣ ಉತ್ನಾಳ ಅವರಿಗೆ ಪ್ರಧಾನ ಮಾಡಲಾಯಿತು, ವಾರ್ಷಿಕ ಪ್ರಶಸ್ತಿಯನ್ನು ಕಲಾವಿದರುಗಳಾದ ದತ್ತರಾಜ ಕಲಶೆಟ್ಟಿ ಕಲಬುರಗಿ, ಮೋಹನ ಮಾಳದಕರ, ಮಲ್ಲಪ್ಪ ಹಸಮಕಲ್ ಮಸ್ಕಿ, ನಿರುಪಾದಿ ನಂಜಲದಿನ್ನಿ, ನಿಂಗಮ್ಮ ಮಂಡಲಗೇರಿ, ಲಕ್ಷ್ಮೀದೇವಿ ಮಾದಿನೂರು, ಶಿವಮೂರ್ತೆಪ್ಪ ಮೆಡೆದಾರ, ಸಾತಲಿಂಗಪ್ಪ ಸಲಗಾರ ಅವರುಗಳಿಗೆ ಪುಟ್ಟರಾಜ ಸೇವಾ ರತ್ನ ವಾರ್ಷಿಕ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರಪುರ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಬಸವರಾಜ ಜಮದ್ರಖಾನಿ ವಹಿಸಿದ್ದರು, ಬಸವರಾಜ ಬಂಟನೂರು ಪ್ರಾರ್ಥಿಸಿದರು, ದೇವು ಹೆಬ್ಬಾಳ ನಿರೂಪಿಸಿದರು, ಎ.ಕಮಲಾಕರ ಸ್ವಾಗತಿಸಿದರು, ಮಲ್ಲು ಬಾದ್ಯಾಪುರ ವಂದಿಸಿದರು.

ನಂತರ ನಡೆದ ಪುಟ್ಟರಾಜ ಕವಿ ಗವಾಯಿಗಳ ಕುರಿತಾದ ಕಾವ್ಯಾಯಾನ-ಗಾನಯಾನ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಶ್ರೀನಿವಾಸ ಜಾಲವಾದಿ ಉದ್ಘಾಟಿಸಿ ಮಾತನಾಡಿದರು ಸಾಹಿತಿ ನಬಿಲಾಲ ಮಕಾಂದಾರ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಪ್ರಕಾಶಚಂದ ಜೈನ್, ಶರಣಯ್ಯ ಇಟಗಿ, ಅಮರೇಶ ಹಸಮಕಲ್, ಶಿವನಗೌಡ ಬಿರಾದರ, ಶಿವಶರಣಪ್ಪ ಹೆಡಿಗಿನಾಳ ವೇದಿಕೆಮೇಲಿದ್ದರು, ಕಾವ್ಯಯಾನದ ಕವಿಗೋಷ್ಠಿಯಲ್ಲಿ ನಿಂಗನಗೌಡ ದೇಸಾಯಿ, ವೀರಣ್ಣ ಕಲಿಕೇರಿ, ಸಿದ್ದಯ್ಯ ಮಠ ರಂಗಂಪೇಟ, ವೆಂಕಟೇಶ ಪಾಟೀಲ್, ಹೆಚ್ ರಾಠೋಡ, ಶರಣು ಬಾದ್ಯಾಪುರ, ಹಣಮಂತ್ರಾಯ ಐಹೋಳೆ, ದೇವಿಂದ್ರ ಕರಡಕಲ್ ಕವಿತೆ ವಾಚಿಸಿದರು. ನಂತರ ನಡೆದ ಗಾಯನ ಕಾರ್ಯಕ್ರಮದಲ್ಲಿ ಸ್ಥಳಿಯ ಸೂಗುರೇಶ್ವರ ಸಂಗೀತ ಪಾಠಶಾಲೆಯ ಶಿವಶರಣಯ್ಯ ಸ್ವಾಮಿ ಬಳ್ಳುಂಡಗಿಮಠ ಮತ್ತು ಸಂಗಡಿಗರು ಹಾಗೂ ಅನೇಕ ಸಂಗೀತ ಕಲಾ ತಂಡಗಳಿಂದ ಸಂಗೀತ ಕಾರ್ಯಕ್ರಮಗಳು ಜರುಗಿದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here