ಕಲಬುರಗಿ: ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸವಾಲು, ಸಮಸ್ಯೆಗಳು ಹೆಚ್ಚಾಗಿದ್ದು, ಅವುಗಳನ್ನು ಎದುರಿಸಿ ಹಿಂದೆ ನೋಡದೇ ಮುನ್ನಡೆಯುವ ಸಾಮರ್ಥ್ಯ ಅವುಗಳಿಗಿರುವ ಕಾರಣ ಮಹಿಳೆ ವಿಶ್ವದ ಮಹಾನ್ ಶಕ್ತಿಯಾಗಿದ್ದಾಳೆ ಎಂದು ಚಿಂತಕ ಹಾಗೂ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ. ಯಶವಂತರಾಯ ಅಷ್ಠಗಿ ಅಭಿಪ್ರಾಯ ಪಟ್ಟರು.
ಕರ್ನಾಟಕ ಸಮತಾ ಸೈನಿಕ ದಳದ ವತಿಯಿಂದ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಎಲ್ಲ ಹೆಣ್ಣುಮಕ್ಕಳು ವಿದ್ಯೆ ಕಲಿಯುತ್ತಿದ್ದಾರೆ. ಆಧುನಿಕ ಭಾರತದಲ್ಲಿ ಮೊದಲ ಬಾರಿಗೆ ವಿದ್ಯೆ ನೀಡಿದವರು.
ಸಾವಿತ್ರಿಬಾಯಿ ಫುಲೆ ಅವರು. ಅನೇಕರ ವಿರೋಧದ ಮಧ್ಯೆಯೂ ಹೆಣ್ಣು ಮಕ್ಕಳಿಗಾಗಿ ಶಾಲೆ ತೆರೆದು ಕಲಿಸಲು ತನ್ನ ಜೀವನ ಮುಡಿಪಾಗಿಟ್ಟ ದೇಶದ ಮೊಟ್ಟ ಮೊದಲ ಶಿಕ್ಷಕಿ.
ಇಂದು ಮಹಿಳೆಯರ ಉನ್ನತಿಗಾಗಿ ಹೋರಾಡಿದ ಸಾವಿತ್ರಿಬಾಯಿಯವರನ್ನು ಹಾಗೂ ಮಾತೆ ರಮಾಬಾಯಿ ಅಂಬೇಡ್ಕರ್ ರವರ ತ್ಯಾಗ ಮತ್ತು ತಾಳ್ಮೆ ಎಲ್ಲರೂ ಸ್ಮರಿಸುವ ಅಗತ್ಯವಿದೆ ಎಂದು ಪ್ರೊ. ಅಷ್ಠಗಿ ನುಡಿದರು.
ಕರ್ನಾಟಕ ಸಮತಾ ಸೈನಿಕ ದಳದ ವಿಭಾಗೀಯ ಅಧ್ಯಕ್ಷರಾದ ಸಂಜೀವ ಟಿ ಮಾಲೆ ಸ್ವಾಗತಿಸಿ- ಪ್ರಾಸ್ತಾವಿಕ ಮಾತನಾಡಿ, ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಮಹಿಳಾ ಪರ ಕಾರ್ಯಕ್ರಮಗಳ ಆಯೋಜನೆಯ ಅಗತ್ಯವಿದೆ ಎಂದರು.
ಸಾಹಿತಿಗಳಾದ ಧರ್ಮಣ್ಣ ಧನ್ನಿ ಹಾಗೂ ಡಾ.ಕೆ. ಗಿರಿಮಲ್ಲ ಮಾತನಾಡಿ, ಮಹಿಳಾ ಸಮಾನತೆಗಾಗಿ ಬುದ್ಧ, ಬಸವ, ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ರವರ ಹೋರಾಟ ಅನುಪಮವಾದುದು. ಮಹಿಳೆಯರ ಅಭ್ಯುದಯಕ್ಕೆ ಶ್ರಮಿಸಿದ ಇಂತಹ ಮಹಿಳಾವಾದಿಯನ್ನು ನಾವು ಎಂದಿಗೂ ಮರೆಯಬಾರದೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಅಂಬೇಡ್ಕರ್ ಸೇನೆಯ ಮಹಿಳಾ ಘಟಕದ ಅಧ್ಯಕ್ಷರಾದ ಶೀಲಾ ಗಾಯಕವಾಡ ವಹಿಸಿದ್ದರು. ಜೈಶೀಲಾ ಬೊದಲೆ, ಧರ್ಮಣ್ಣ ಕೋನೆಕರ್,ಕೆ ಎಸ್ ಎಸ್ ಡಿ ಜಿಲ್ಲಾಧ್ಯಕ್ಷ ಈರಣ್ಣ ಜಾನೆ,ಜಾನಪದ ಕಲಾವಿದ ಎಂ ಎನ್ ಸುಗಂಧಿ, ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾರತಿಬಾಯಿ ಕಾಂಬಳೆ, ಶಿವಲಿಂಗಮ್ಮ ಸಾವಳಗಿ, ಶಾಂತಾಬಾಯಿ, ಎಸ್.ಯಶೋಧಾ ಕುಸನೂರ, ಮಲ್ಲಮ್ಮ ಜಗತಿ, ಕಾವೇರಿ ಗೋರಂಪಳ್ಳಿ, ಶಿವಮೂರ್ತಿ ಬಲಿಚಕ್ರವರ್ತಿ,ಪವನ್ ಧನಕರ, ಖತಲಪ್ಪಾ ಕಟ್ಟಿಮನಿ, ಲಲಿತಾಬಾಯಿ ಬಿಲಕಲ್, ಅಪ್ಪಾರಾವ ಭಾವಿಮನಿ, ಮಹಾದೇವ ನಾಟಿಕರ, ಮುತ್ತಣ್ಣ ಡೆಂಗಿ, ಮಾರುತಿ ಲೇಂಗಟಿ,ಭರತ್ ಹುಂಡೆಕಾರ ಸೇರಿದಂತೆ ಸಂಘಟನೆಯ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.
ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕರಾದ ಶಾಂತಾಬಾಯಿ ಎಸ್ ಮಾಲೆ, ಸುಜಾತಾ ಆರ್ ಸೂಗೂರ, ರಾಜೇಶ್ವರಿ ಶಿವಶರಣಪ್ಪ, ವಿಜಯಲಕ್ಷ್ಮಿ ನರಸಯ್ಯ ಕಲಾಲ, ಮಹಾದೇವಿ ಎಚ್ ಭೀಮಪೂರೆ ಅವರನ್ನು ಸತ್ಕರಿಸಲಾಯಿತು. ಅಪ್ಪಾರಾವ ಭಾವಿಮನಿ ನಿರೂಪಿಸಿದರು. ಮಹಾದೇವ ನಾಟಿಕರ ವಂದಿಸಿದರು.
ವಿಶ್ವಸಂಸ್ಥೆಯು ಈ ವರ್ಷದ ಧ್ಯೇಯವಾಕ್ಯವನ್ನು ‘ಮಹಿಳೆಯರಲ್ಲಿ ಹೂಡಿಕೆ ಮಾಡಿ: ಪ್ರಗತಿಯನ್ನು ವೇಗಗೊಳಿಸಿ’ ಆರ್ಥಿಕ ಅಸಾಮರ್ಥ್ಯವನ್ನು ನಿಭಾಯಿಸುವ ಗುರಿಯನ್ನು ಹೊಂದಿದೆ. ಇದೇ ವರ್ಷದ ಪ್ರಚಾರದ ಅಭಿಯಾನ ‘ಇನ್‌ಸ್ಪೈರ್ ಸೇರ್ಪಡೆ ಆಗಿದೆ. ಪ್ರೊ ಯಶವಂತರಾಯ ಅಷ್ಠಗಿ. ಚಿಂತಕರು ಹಾಗೂ ಜಿಲ್ಲಾ ಗೌರವ ಕಾರ್ಯದರ್ಶಿಗಳು, ಕಲಬುರಗಿ