ನಂಬಿಕೆಗೆ ಇನ್ನೊಂದು ಹೆಸರೇ ದೇವರು

0
325

ಕಲಬುರಗಿ: ತನ್ನ ನಂಬಿ ಬಂದ ಭಕ್ತರ ಇಷ್ಟಾರ್ಥಗಳಿಗೆ ಎಂದಿಗೂ ನಿರಾಸೆ ಮಾಡದ ದಯಾಮಯಿ ಶಿವಾ, ಶಿವನ ಪವಿತ್ರ ದಿನವಾದ ಶಿವರಾತ್ರಿ ಇದರ ಮಹತ್ವ ಇಂದಿನ ಯುವ ಪೀಳಿಗೆ ತಿಳಿಸುವುದು ನಮ್ಮ ನಿಮ್ಮೆಲ್ಲ ರ ಕರ್ತವ್ಯವೆಂದು ನಿವೃತ್ತ ಎಸ್.ಪಿ ಬಿ.ಎಸ್. ಮರತೂರಕರ ಮಾತನಾಡಿದರು.

ಸೇಡಂ ರಸ್ತೆ ಬಸವೇಶ್ವರ ಆಸ್ಪತ್ರೆಯ ಎದುರುಗಡೆಯಿರುವ ವಿದ್ಯಾನಗರ ಕಾಲೋನಿಯ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಮಹಾಶಿವರಾತ್ರಿ ನಿಮಿತ್ಯ ವಿದ್ಯಾನಗರ ವೆಲ್‍ಫೇರ ಸೊಸೈಟಿ ವತಿಯಿಂದ ಹಮ್ಮಿಕೊಂಡ ದೀಪೋತ್ಸವ, ಸಂಗೀತೋತ್ಸವ ಮತ್ತು ಹಾಸ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ನಿರಾರ, ಉಪವಾಸ ಧಾರ್ಮಿಕ ಆಚರಣೆಗೋಸ್ಕರ ಮಾಡಿದರು, ಅದಕ್ಕೆ ವೈಜ್ಞಾನಿಕ ಅರ್ಥವಿದೆ. ಕಟ್ಟುನಿಟ್ಟಾಗಿ ಆಚರಿಸಿದರೆ ಉತ್ತಮ ಆರೋಗ್ಯ ಅದರಲ್ಲಿ ಅಡಗಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ನಂತರ ಕಲ್ಯಾಣ ಕರ್ನಾಟಕ ಭಾಗದಲ್ಲೇ ಬಿ.ಚಿ. ಎಂದೇ ಪ್ರಖ್ಯಾತಿ ಪಡೆದ ಹಾಸ್ಯಚಕ್ರವರ್ತಿ ಗುಂಡಣ್ಣ ಡಿಗ್ಗಿ ಹರಸೂರ ಅವರು ಮಂದಿರಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ನಕ್ಕು ನಗಿಸುವ ಮೂಲಕ ಹಾಸ್ಯ ಸಂಜೆ ನಡೆಸಿಕೊಟ್ಟರು, ಕನ್ನಡ ಟಿ.ವಿ. 5 ಚಾನೆಲ್‍ನ ಡ್ರಾಮಾ ಜ್ಯೂನಿಯರ ಕಲಾವಿದ ವಾಸು ಪಾಟೀಲ ಅವರಿಂದ ಶಿವರಾತ್ರಿ ಆಚರಣೆ ಹಾಗೂ ಚುನಾವಣೆ ಕುರಿತು ಏಕಪಾತ್ರಾಭಿನಯ ಜನರ ಗಮನಸೆಳೆಯಿತು.

ವಿದ್ಯಾನಗರ ವೆಲ್‍ಫೇರ ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖ ಅಧ್ಯಕ್ಷತೆ ವಹಿಸಿದರು. ನಿವೃತ್ತ ಕೃಷಿ ಅಧಿಕಾರಿ ಬಸವರಾಜ ಎನ್. ಪುಣ್ಯಶೆಟ್ಟಿ ಎಂ.ಬಿ.ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಶಿವಾನಂದ ವಾಲೀಕಾರ, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಯಂಕಮ್ಮ ಜಗದೇವ ಗುತ್ತೇದಾರ, ದೀಪೋತ್ಸವ ಕಾರ್ಯಕ್ರಮದ ಪ್ರಾಯೋಜಕರಾದ ವಿಶ್ವನಾಥ ರಟಕಲ್, ಸಂಗೀತ ಕಾರ್ಯಕ್ರಮದ ಪ್ರಾಯೋಜಕರಾದ ಉಮೇಶ ಶೆಟ್ಟಿ, ವೆಲ್‍ಫೇರ ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಕುಮಾರ ದೇವರಾಜ ವಿಶ್ವನಾಥ ತೊಟ್ನಳ್ಳಿ ಅವರು ಮಹಾಶಿವರಾತ್ರಿ ಅಂಗವಾಗಿ ಶಿವನ ವೇಷಧಾರಿಯಾಗಿ ಢಮರು ಬಾರಿಸುತ್ತ ವೇದಿಕೆಗೆ ಬಂದಾಗ ಅತಿಥಿಗಳು ಮತ್ತು ನೆರೆದಿದ್ದ ಜನಸಮೂಹ ಚಪ್ಪಾಳೆ ತಟ್ಟಿ ಹರ್ಷವ್ಯಕ್ತಪಡಿಸುತ್ತ ಎದ್ದು ನಿಂತು ನಮಸ್ಕರಿಸಿದ್ದು ಒಂದು ವಿಶೇಷ ಕುಮಾರಿ ಧಾನೇಶ್ವರಿ ಭರತನಾಟ್ಯ ಪ್ರಸ್ತುತಪಡಿಸಿದರು, ಗುರುರಾಜ ಮುಗಳಿ ಸ್ವಾಗತಿಸಿದರು, ಗುರುಲಿಂಗಯ್ಯ ಮಠಪತಿ ವಂದನಾರ್ಪಣೆ ಮಾಡಿದರು.

ಗಾಯಕರಾದ ಕವಿರಾಜ ಮಾಲಿಪಾಟೀಲ ಮೈಸಲಗಾ ಹಾಗೂ ಸೂರ್ಯಕಾಂತ ಬಿರಾದಾರ ಗಾಯನ ಮಾಡಲಿದ್ದಾರೆ. ದಿಲೀಪಕುಮಾರ ದೇಸಾಯಿ ಅವರು ಹಾರ್ಮೋನಿಯಂ, ಅಕ್ಷಯಕುಮಾರ ಮಾಣಿಕನಗರ ತಬಲಾ ಸಾಥ ನೀಡುವ ಮೂಲಕ ವಿಶೇಷ ಸಂಗೀತೋತ್ಸವ ಕಾರ್ಯಕ್ರಮ ಜರುಗಿತು. ನಂತರ ಅಕ್ಕಮಹಾದೇವಿ ಮಹಿಳಾ ಟ್ಟಸ್ಟ ಸದಸ್ಯರಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೇಕ್ ಕಟ್ಟ ಮಾಡುವ ಮೂಲಕ ದಿನಾಚರಣೆ ಆಚರಿಸಲಾಯಿತು. ಆ ಪ್ರಯುಕ್ತ ವಿದ್ಯಾನಗರ ವೆಲ್‍ಫೇರ ಸೊಸೈಟಿ ವತಿಯಿಂದ ಎಲ್ಲಾ ಮಹಿಳೆಯರ ಪರವಾಗಿ ಹಿರಿಯ ಮಹಿಳೆ ಶ್ರೀಮತಿ ಕಮಲಾಬಾಯಿ ಹೆಬ್ಬಾಳ ಅವರನ್ನು ಸನ್ಮಾನಿಸಲಾಯಿತು. ಇಡೀ ರಾತ್ರಿ ಮಹಿಳಾ ಟ್ರಸ್ಟ ಸದಸ್ಯರಿಂದ ವಿಶೇಷ ಭಜನೆ ಕಾರ್ಯಕ್ರಮ ಜರುಗಿತು.

ಹಿರಿಯರಾದ ಬಸವಂತರಾವ ಜಾಬಶೆಟ್ಟಿ, ಕಾಶಿನಾಥ ಚಿನ್ನಮಳ್ಳಿ, ನಾಗರಾಜ ಹೆಬ್ಬಾಳ, ಶಾಂತಯ್ಯ ಬೀದಿಮನಿ, ಸುಭಾಷ ಮಂಠಾಳೆ, ಮಲ್ಲಿಕಾರ್ಜುನ ತರುಣ ಸಂಘದ ಸದಸ್ಯರಾದ ವಿರೇಶ ನಾಗಶೆಟ್ಟಿ, ಕರಣ ಆಂದೋಲಾ, ಶಶಿಧರ ಪ್ಯಾಟಿ, ಸಂಜು ತಂಬಾಕೆ, ಸಂಗಮೇಶ ಹೆಬ್ಬಾಳ, ಧರ್ಮರಾಜ ಹೆಬ್ಬಾಳ, ಮಹಾದೇವ ತಂಬಾಕೆ, ಸುನೀಲ ಮುತ್ತಾ, ಡಾ. ಸಂತೋಷ ಪಾಟೀಲ, ವಿನೋದಕುಮಾರ ಜೆನೆವರಿ, ತರುಣಶೇಖರ ಬಿರಾದಾರ, ಅಮಿತ ಜೀವಣಗಿ, ಅಮಿತ ಸಿಕೇದ, ಹಾಗು ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here