ಶರಣಬಸವ ವಿಶ್ವವಿದ್ಯಾಲಯಕ್ಕೆ ಶೈಕ್ಷಣಿಕ ಸಂಸ್ಥೆಗಳಿಗೆ ನೀಡುವ ಐಎಸ್ಓ ಪ್ರಮಾಣ ಪತ್ರ

0
22

ಕಲಬುರಗಿ; ಅಭ್ಯಾಸಿಸುವರ ಎಲ್ಲಾ ಅಗತ್ಯತೆಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳಲು ಶೈಕ್ಷಣಿಕ ನಿರ್ವಹಣೆಯನ್ನು ಪ್ರಮಾಣೀಕರಿಸುವ ಗುರಿಯನ್ನು ಹೊಂದಿರುವ ಶಿಕ್ಷಣ ಸಂಸ್ಥೆಗಳಿಗೆ ಪ್ರತ್ಯೇಕವಾಗಿ ಪರಿಚಯಿಸಲಾದ ISಔ ಪ್ರಮಾಣೀಕರಣವನ್ನು ಪಡೆದು ಶರಣಬಸವ ವಿಶ್ವವಿದ್ಯಾಲಯವು ದೇಶದ ಪ್ರಮುಖ ವಿಶ್ವವಿದ್ಯಾಲಯಗಳ ಪಟ್ಟಿಗೆ ಸೇರುವ ಮೂಲಕ ತನ್ನ ಹಿರಿಮೆಯಲ್ಲಿ ಮತ್ತೊಂದು ಗರಿಯನ್ನು ಸೇರಿಸಿದೆ.

ಶಿಕ್ಷಣ ಸಂಸ್ಥೆಗಳಿಗೆ ISO ಪ್ರಮಾಣೀಕರಣವನ್ನು ಒದಗಿಸುವ ಖಿUಗಿ ಇಂಡಿಯಾದಿಂದ ವಿಶ್ವವಿದ್ಯಾಲಯವು ಸ್ವೀಕರಿಸಿದ ಪ್ರಕಟಣೆಯ ಪ್ರಕಾರ, ಶರಣಬಸವ ವಿಶ್ವವಿದ್ಯಾಲಯವು ISO 21001-2018 ಅನ್ನು ಪಡೆದುಕೊಂಡಿದೆ. ಇದು ಮಾರ್ಚ್ 2027 (ಮೂರು ವರ್ಷಗಳ)ವರೆಗೆ ಮಾನ್ಯವಾಗಿದೆ ಮತ್ತು ಇದು ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕಂಪ್ಯೂಟರ್ ಅಪ್ಲಿಕೇಶನ್ ಮತ್ತು ಬಿಸಿನೆಸ್ ಸ್ಟಡೀಸ್‍ನಲ್ಲಿ ಪದವಿಪೂರ್ವ ಕೋರ್ಸ್‍ಗಳು ಮತ್ತು ಇಂಜಿನಿಯರಿಂಗ್, ಕಂಪ್ಯೂಟರ್ ಅಪ್ಲಿಕೇಶನ್, ಸೈನ್ಸ್, ಬಿಸಿನೆಸ್ ಸ್ಟಡೀಸ್ ಹಾಗೂ ಸೋಷಿಯಲ್ ಸೈನ್ಸ್ ಆ್ಯಂಡ್ ಹ್ಯೂಮ್ಯಾನಿಟಿಸ್ ವಿಷಯಗಳಲ್ಲಿ ಸ್ನಾತಕೋತ್ತರ ಕೋರ್ಸ್‍ಗಳು ಸೇರಿದಂತೆ ವಿಶ್ವವಿದ್ಯಾಲಯವು ನೀಡುವ ಎಲ್ಲಾ ಕೋರ್ಸ್‍ಗಳನ್ನು ಒಳಗೊಂಡಿದೆ.

Contact Your\'s Advertisement; 9902492681

ಲಭ್ಯವಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಶೈಕ್ಷಣಿಕ ಸಂಸ್ಥೆಗಳಿಗೆ ಪ್ರತ್ಯೇಕವಾಗಿ ಪರಿಚಯಿಸಲಾದ ISಔ 21001:2018 ಪ್ರಮಾಣೀಕರಣವನ್ನು ಪಡೆದ, ಇಡೀ ರಾಜ್ಯದಲ್ಲಿಯೇ ಶರಣಬಸವ ವಿಶ್ವವಿದ್ಯಾಲಯವು ಎರಡನೇ ವಿಶ್ವವಿದ್ಯಾಲಯವಾಗಿದೆ ಮತ್ತು ISಔ 21001:2018 ಪ್ರಮಾಣೀಕರಣವನ್ನು ಪಡೆದ ಮೊದಲ ಏಕೈಕ ವಿಶ್ವವಿದ್ಯಾಲಯವೆಂದರೆ ಬೆಂಗಳೂರಿನ ಖಾಸಗಿ ಜೈನ್ ವಿಶ್ವವಿದ್ಯಾಲಯ.

ISO 21001 ಪ್ರಮಾಣೀಕರಣವು ಮೂಲಭೂತವಾಗಿ ಗುಣಮಟ್ಟದ ನಿರ್ವಹಣಾ ವ್ಯವಸ್ಥೆಯಾಗಿದ್ದು, ವಿದ್ಯಾರ್ಥಿಗಳ ಎಲ್ಲಾ ಅವಶ್ಯಕತೆಗಳನ್ನು ಶಿಕ್ಷಣ ಸಂಸ್ಥೆಗಳು ಪೂರೈಸುತ್ತವೆ ಎಂದು ಖಚಿತಪಡಿಸಿಕೊಳ್ಳಲು ಶಿಕ್ಷಣ ನಿರ್ವಹಣೆಯನ್ನು ಸುಧಾರಿಸಲು ಮತ್ತು ಪ್ರಮಾಣೀಕರಿಸಲು ಇದು ಸಹಾಯವಾಗುತ್ತದೆ. ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು, ಅಧ್ಯಾಪಕರಿಗೆ ಅಂಗೀಕೃತ ಉತ್ತಮ ಅಭ್ಯಾಸಗಳನ್ನು ಜಾರಿಗೆ ತರಲು ಸಹಾಯ ಹಸ್ತ ಚಾಚಲು ಸಹ ಉದ್ದೇಶಿಸಲಾಗಿದೆ.

ISO 21001 ರ ವಿಶಿಷ್ಟ ವಿಶೇಷತೆಯಂದರೆ ISO 21001 ನ ಎಲ್ಲಾ ಅವಶ್ಯಕತೆಗಳು ಸಾರ್ವತ್ರಿಕವಾಗಿವೆ ಹಾಗೂ ವಿಧ್ಯಾರ್ಥಿಗಳಿಗೆ ಒದಗಿಸಿದ ಉತ್ಪನ್ನ ಮತ್ತು ಸೇವೆಯನ್ನು ಲೆಕ್ಕಿಸದೆ ಬೋಧನೆ, ತರಬೇತಿ ಹಾಗೂ ಸಂಶೋಧನೆಯ ಮೂಲಕ ಜ್ಞಾನವನ್ನು ಒದಗಿಸುವ, ಹಂಚಿಕೊಳ್ಳುವ ಮತ್ತು ಸುಗಮಗೊಳಿಸುವ ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸುವ ಉದ್ದೇಶವನ್ನು ಹೊಂದಿದೆ.

ವಿಶ್ವವಿದ್ಯಾಲಯದ ಕುಲಸಚಿವ ಡಾ. ಅನಿಲಕುಮಾರ ಬಿಡವೆ ಮತ್ತು ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ ಅವರು ISಔ ಪ್ರಮಾಣೀಕರಣ ಪಡೆಯಲು ಎಲ್ಲಾ ಅಗತ್ಯತೆಗಳನ್ನು ಪೂರೈಸಿದ ವಿವಿಯ ಎಲ್ಲಾ ಅಧ್ಯಾಪಕರನ್ನು ಅಭಿನಂದಿಸಿದ್ದಾರೆ. ವಿಶ್ವವಿದ್ಯಾಲಯವು ISಔ ಪಡೆಯಲು ಎಲ್ಲಾ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಅನುಸರಿಸಿದೆ ಎಂದು ಶನಿವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಮಾಣೀಕರಣ ಮತ್ತು ಸುಮಾರು ಆರು ತಿಂಗಳ ದಾಖಲೆ ಸಮಯದಲ್ಲಿ, ಎಲ್ಲಾ ಅಧ್ಯಾಪಕರು ISO ಪ್ರಮಾಣೀಕರಣವನ್ನು ಪಡೆಯಲು ಎಲ್ಲಾ ಅವಶ್ಯಕತೆಗಳನ್ನು ಪೂರೈಸಲು ಅಧಿಕಾವಧಿ ಕೆಲಸ ಮಾಡಿದರು. ವಿಶ್ವವಿದ್ಯಾಲಯಕ್ಕೆ ISO ಪ್ರಮಾಣೀಕರಣವನ್ನು ನೀಡುವ ಮೊದಲು ಖಿUಗಿ  ಇಂಡಿಯಾದÀ ತಜ್ಞರ ಸಮಿತಿಯು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಮತ್ತು ಎಲ್ಲಾ ಮೂಲಸೌಕರ್ಯ ಸೌಲಭ್ಯಗಳನ್ನು ಎರಡು ಬಾರಿ ಪರಿಶೀಲಿಸಿತು. “ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನವನ್ನು ನೀಡಲು ಮೂಲಸೌಕರ್ಯ ಸೌಲಭ್ಯಗಳನ್ನು ಹೆಚ್ಚಿಸಲು ವಿಶ್ವವಿದ್ಯಾಲಯದ ನಿರಂತರ ಪ್ರಯತ್ನದಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ” ಎಂದು ಅವರು ಹೇಳಿದರು.

ISO ಪ್ರಮಾಣೀಕರಣವನ್ನು ಪಡೆಯಲು ಶ್ರಮಿಸಿದ ವಿವಿಯ ಎಲ್ಲಾ ಅಧಿಕಾರಿಗಳು ಮತ್ತು ಅಧ್ಯಾಪಕರನ್ನು ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಹಾಗೂ ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಡಾ. ದಾಕ್ಷಾಯಿಣಿ ಅವ್ವಾಜಿ ಹಾಗೂ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಅಭಿನಂದಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here