ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿ ಸಾವು ಪ್ರಕರಣ: ಸಿಪಿಐ ವಿಜಯಕುಮಾರ ಬಾವುಗೆ ಪರಿಶೀಲನೆ

0
27

ಚಿತ್ತಾಪುರ: ತಾಲೂಕಿನ ಕರದಾಳ ಗ್ರಾಮದ ವಸತಿ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ತನಿಖೆಯನ್ನು ಪೊಲೀಸ್ ಇಲಾಖೆ ಚುರುಕುಗೊಳಿಸಿದೆ.

ಕರದಾಳ ಗ್ರಾಮದ ಕಸ್ತೂರಬಾ ವಸತಿ ಶಾಲೆಯಲ್ಲಿ ಕಡಬೂರ ಗ್ರಾಮದ ಭಾಗ್ಯಶ್ರೀ ಸಾಬಣ್ಣ ನಾಯ್ಕೋಡಿ ಮಂಚದ ರಾಡಿಗೆ ಬಟ್ಟೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸಂಶಯ ಮೇರೆಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಸಿಪಿಐ ವಿಜಯಕುಮಾರ ಬಾವುಗೆ ಹಾಗೂ ಪಿಎಸ್’ಐ ಸುದರ್ಶನ ರೆಡ್ಡಿ ಅವರು ಮಾ.10 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ವಸತಿ ಶಾಲೆಗೆ ಭೇಟಿ‌ ನೀಡಿ ವಿದ್ಯಾರ್ಥಿನಿಯ ಸ್ನೇಹಿತೆಯರು ಹಾಗೂ ವಾರ್ಡ್’ನ್ ಸಹಿತ ಇನ್ನಿತರ ಸಿಬ್ಬಂದಿ ಜತೆ ಸಮಾಲೋಚನೆ ನಡೆಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here