ಕಲಬುರಗಿ: ಅಕ್ಷರಜ್ಞಾನ ಇಲ್ಲದಿದ್ದರೂ ಚಿಕ್ಕವಳಿದ್ದಾಗಿನಿಂದ ಕುಷ್ಠಪೀಡಿತರ ಕಷ್ಟವನ್ನು ನೋಡಿದ ಮಹಿಳೆಯೊಬ್ಬರು, 52 ಕುಷ್ಠಪೀಡಿತ ಗರ್ಭಿಣಿಯರಿಗೆ ಹೆರಿಗೆ ಮಾಡಿ ಆರೈಕೆ ಮಾಡಿ ಸೇವೆ ಮಾಡಿದ್ದು ಎಲ್ಲರಿಗೂ ಮಾದರಿಯಾಗಿದೆ. ಎಂದು ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಲತಾ ರವಿ ರಾಠೋಡ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬಸಮ್ಮ ದೇವನೂರ ಅವರನ್ನು ಸನ್ಮಾನಿಸಲಾಯಿತು.
ಕಲಬುರಗಿ ನಗರದ ಮಹಾತ್ಮಗಾಂಧಿ ಕುಷ್ಠರೋಗಿಗಳ ಆಶ್ರಯ ಕಾಲೋನಿಯಲ್ಲಿರುವ ಬಸಮ್ಮ ದೇವನೂರ 21 ವರ್ಷಗಳಿಂದ ಕುಷ್ಠಪೀಡಿತ ಗರ್ಭಿಣಿಯರಿಗೆ ಹೆರಿಗೆ ಮಾಡುತ್ತಾ ಬರುತ್ತಿದ್ದಾರೆ, ಈ ಮಹಿಳೆಯರು ಹೆರಿಗೆ ಸಂದರ್ಭದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು, ಗರ್ಭಿಣಿಯರ ಜತೆಗೆ ಆಸ್ಪತ್ರೆಗೆ ಹೋದರೆ ಅವರನ್ನು ಸರಿಯಾಗಿ ಮುಟ್ಟುತ್ತಿರಲಿಲ್ಲ ಮತ್ತು ಆರೈಕೆ ಕೂಡ ಮಾಡುತ್ತಿರಲಿಲ್ಲ ಅವರ ಕಷ್ಟವನ್ನು ಕಣ್ಣಾರೆ ಕಂಡ ಬಸಮ್ಮ ಸ್ವತಃ ಹೆರಿಗೆ ಮಾಡೊ ಕಾಯಕ ಮುಂದುವರಿಸಿದ್ದಾರೆ. ಇಂತಹ ಗೃಹಿಣಿ ನಮಗೆಲ್ಲರಿಗೂ ಮಾದರಿಯಾಗಿದ್ದಾರೆ.
ಹೀಗೆ ಬೇರೆ ಹೆಣ್ಣುಮಕ್ಕಳು ಬಸಮ್ಮ ತರಹ ಸಮಾಜ ಸಮಾಜಮುಖಿ ಸೇವೆ ಮಾಡಲು ಮುಂದಾಗಬೇಕು. ಬಸಮ್ಮರವರಂತಹ ಮಹಿಳೆ ಕಾಯಕ ನೋಡಿಕೊಂಡು ಕಾಂಗ್ರೇಸ್ ಸರಕಾರ ವಿಷೇಶವಾಗಿ ಮಹಿಳೆಯರಿಗೆ ಗ್ಯಾರಂಟಿ ಯೋಜನೆಯನ್ನು ಗೃಹಲಕ್ಷ್ಮಿ ಮಹಿಳಾ ವಿದ್ಯಾರ್ಥಿಯರಿಗೆ ಯುವನಿಧಿ ಮತ್ತು ಶಕ್ತಿ ಯೋಜನೆಯನ್ನು ಮಹಿಳೆಯರಿಗೆ ಶಕ್ತಿ ತುಂಬುವಂತಹ ಕಾಂಗ್ರೇಸ್ ಸರಕಾರ ಮಾಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣಾ ದಿನಗಳಲ್ಲಿ ನಾಡಿನ ಎಲ್ಲಾ ಮಹಿಳೆಯರು ಒಗ್ಗಟ್ಟಾಗಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಮತ ಚಲಾಯಿಸಿ ಕೇಂದ್ರದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡುತ್ತೇವೆ ಎಂದರು.
ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ರೇಣುಕಾ ಚವ್ಹಾಣ, ಹಣಕಾಸು ಮತ್ತು ತೆರಿಗೆ ಸ್ಥಾಯಿ ಸಮಿತಿಯ ಅಧ್ಯಕ್ಷೆ ರಾಗಮ್ಮ ಇನಾಮದಾರ, ಮಹಾನಗರ ಪಾಲಿಕೆ ಸದಸ್ಯರಾದ ರೇಣುಕಾ ಹೋಳಕರ್, ಇರ್ಫಾನ್, ಅಂಜನಾ ರಾಠೋಡ, ಅಹ್ಮದಿ ಬೇಗಂ, ಕಮಲಾ, ರೇಷ್ಮಾ, ಶನ್ನು, ವೈಶಾಲಿ, ಭಾರತಿ ಬಾಯಿ, ಸೈರಾ ಬಾನು, ಅನುರಾಧ ಎಸ್, ಶಹಾನೂರ, ಕವಿತಾ, ಶೇಖ ಸಮರಿನ್, ಸ್ವೇತಾ, ಜಯಶ್ರೀ, ಶೀಲಾ ಸೇರಿದಂತೆ ಇತರರು ಇದ್ದರು.