ಶಹಾಬಾದ :ಪಾಲಕರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವ ಜತೆಗೆ ಅವರಿಗೆ ಮನೆಯಲ್ಲಿ ಒಳ್ಳೆಯ ಸಂಸ್ಕಾರ ಬಗ್ಗೆ ನೀಡಿದರೇ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಸಾಧ್ಯ ಎಂದು ಕೋಲಿ ಸಮಾಜದ ಮುಖಂಡರಾದ ಅವ್ವಣ್ಣಾ ಮ್ಯಾಕೇರಿ ಹೇಳಿದರು.
ಅವರು ತೊನಸನಹಳ್ಳಿ(ಎಸ್) ಗ್ರಾಮದ ಶಿವಸಾಯಿ ಪೀಠ ಹಾಗೂ ಶ್ರೀ ಶರಣ ಗ್ರಾಮೀಣ ಅಭಿವೃದ್ಧಿ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ದಶಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತಾನಾಡಿದರು.
ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಒಳ್ಳೆಯ ಪೆÇೀಷಕ ಮತ್ತು ಶಿಕ್ಷಕರ ವೃಂದ ಲಭಿಸಿದಾಗ ಯಶಸ್ಸನ್ನು ಕಾಣಲು ಸಾಧ್ಯವಾಗುತ್ತದೆ.ಒಳ್ಳೆಯ ಶಿಕ್ಷಣ ಹಾಗೂ ಸಂಸ್ಕಾರ ಕೊರತೆಯನ್ನು ಇಲ್ಲಿನ ಶಿವಸಾಯಿ ಪೀಠ ಹಾಗೂ ಶ್ರೀ ಶರಣ ಗ್ರಾಮೀಣ ಅಭಿವೃದ್ಧಿ ಶಿಕ್ಷಣ ಸಂಸ್ಥೆ ತುಂಬುತ್ತಿದೆ ಎಂದರು.
ಯರಗೋಳ ಗವಿ ಸಿದ್ಧಲಿಂಗೇಶ್ವರ ಮಠದ ಪೂಜ್ಯರಾದ ಸಂಗಮೇಶ್ವರ ಮಹಾ ಸ್ವಾಮಿಗಳು ಮಾತನಾಡಿ, ಸಮಾಜದಲ್ಲಿ ಶಾಂತಿ, ನೆಮ್ಮದಿಯಿಂದ ಜನರು ಜೀವನ ನಡೆಸಬೇಕಾದರೆ ವಿದ್ಯಾರ್ಥಿಗಳು ಮತ್ತು ಯುವಕರು ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು. ಈ ಶಾಲೆಯು ಉತ್ತಮ ಪರಿಸರವನ್ನು ಹೊಂದಿದ್ದು, ತಾಲೂಕಿನಲ್ಲಿ ಮಾದರಿ ಶಾಲೆಯಾಗಿ ಮುನ್ನಡೆದಿದೆ. ಇಲ್ಲಿಯ ಸಿಬ್ಬಂದಿ ವರ್ಗದವರು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕೆಂದು ತಿಳಿಸಿದರು.
ಅಥಿತಿಗಳಾಗಿ ಕೋಲಿ ಸಮಾಜದ ಮುಖಂಡರಾದ ದೇವೇಂದ್ರಪ್ಪ ಬಾಡಿಹಾಳ, ರಾಜಗೋಪಾಲರೆಡ್ಡಿ, ಬಸವರಾಜ ಬೂದಿಹಾಳ ಮಾತನಾಡಿದರು. ಶಿವಸಾಯಿ ಪೀಠದ ಶರಣ ಕೊತಲಪ್ಪ ಮುತ್ಯಾ ಅಧ್ಯಕ್ಷತೆ ವಹಿಸಿದ್ದರು. ಚಿತ್ರಕಲಾ ಶಿಕ್ಷಕ ಡಾ. ಹಣಮಂತರಾವ ಮಂತಟ್ಟಿ ಯವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
ಶಾಂತಮಲ್ಲ ಶಿವಬೋ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಾಲೆಯ ಮುಖ್ಯ ಶಿಕ್ಷಕಿ ರಾಜೇಶ್ವರಿ ಸ್ವಾಗತಿಸಿದರು, ಸಿಂದೂ ನಿರೂಪಿಸಿದರು, ಗುಜ್ಜಮ್ಮ ವಂದಿಸಿದರು.