ಮಹಿಳೆಯರ ಸ್ವಾಭಿಮಾನದ ಬದುಕಿಗೆ ಅವಕಾಶಗಳ ಸದ್ಬಳಕೆ ಅಗತ್ಯ: ಸಂಸದ ಡಾ. ಉಮೇಶ್ ಜಾಧವ್

0
6

ಕಲಬುರಗಿ: ಮಹಿಳೆಯರು ಸ್ವಾಭಿಮಾನ ಮತ್ತು ಸ್ವಾವಲಂಬನೆ ಬದುಕು ಮಾಡಲು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಿ ಜಾಧವ್ ಹೇಳಿದರು.

ನಗರದಲ್ಲಿ ಇಂದು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಜಂಟಿ ಆಶ್ರಯದಲ್ಲಿ ನಡೆದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ “ಮಹಿಳೆಯರಲ್ಲಿ ಹೂಡಿಕೆ ಪ್ರಗತಿ ವರ್ಧಿಸಿ” ಉದ್ಘಾಟನೆ ಮಾಡಿ ಮಾತನಾಡಿದರು.

Contact Your\'s Advertisement; 9902492681

ವಿಶ್ವದಾದ್ಯಂತ ಮಹಿಳೆಯರ ಹಕ್ಕು ಸಂರಕ್ಷಣೆ ಮತ್ತು ಲಿಂಗಸಮಾನತೆಗಾಗಿ ಜಾಗೃತಿ ಮೂಡಿಸುವ ಮಹಿಳಾ ದಿನಾಚರಣೆಯಿಂದ ಮಹಿಳೆಯರಲ್ಲಿ ಸ್ವಾಬಲಂಬನೆಯ ಬದುಕಿಗೆ ಹೆಜ್ಜೆ ಇಡುವಂತೆ ಪ್ರೇರಣೆ ನೀಡಲಾಗುತ್ತದೆ. ಭಾರತ ಮಹಿಳೆಯರಿಗೆ ಅತ್ಯುನ್ನತ ಸ್ಥಾನ ಗೌರವವನ್ನು ನೀಡಿದ ರಾಷ್ಟ್ರವಾಗಿದೆ ಆದರ್ಶ ಮಹಿಳೆಯರ ಇತಿಹಾಸವನ್ನು ಹೊಂದಿದ ಭಾರತದಲ್ಲಿ ಈಗ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ ದೇಶದ ಪ್ರಗತಿಗೆ ಅವರ ಕೊಡುಗೆ ಗಣನೀಯವಾದದು ಭಾರತದ ಸಂವಿಧಾನದ ಮೂಲಕ ಅಂಬೇಡ್ಕರ್ ಅವರು ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಿ ಸಮಾನತೆ ಮತ್ತು ಮಹಿಳೆಯರಲ್ಲಿ ಸ್ವಾಭಿಮಾನದ ಬದುಕು ಗಟ್ಟಿಗೊಂಡಿದೆ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಶಸ್ತಿ ನೀಡಿ ರಾಷ್ಟ್ರಪತಿ ಹಣಕಾಸು ಸಚಿವ ಸ್ಥಾನ ಮಹಿಳೆಯರಿಗೆ ಸಂದಿವೆ. ಮಹಿಳೆಯರಿಗೆ ಶೇಕಡ 33 ರಷ್ಟು ಪ್ರತ್ಯೇಕ ಮೀಸಲಾತಿ ನೀಡುವ ವಿಶೇಷ ಮಸೂದೆ ‘ ನಾರಿ ಶಕ್ತಿ ವಂದನ್ ಅಭಿನಂದನ್ ಬಿಲ್ ‘ ಗೆ ಸಂಸತ್ತಿನಲ್ಲಿ ಅಂಗೀಕಾರ ನೀಡಲಾಗಿದೆ. ಇದು ಐತಿಹಾಸಿಕ ನಿರ್ಣಯವಾಗಿದ್ದು ಉಜ್ವಲಾ ಯೋಜನೆ, ಮುದ್ರಾ ಯೋಜನೆ ಮುಂತಾದ ಕೇಂದ್ರದ ಹಲವು ಯೋಜನೆಗಳಲ್ಲೂ ಮಹಿಳೆಯರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ ಎಂದು ತಿಳಿಸಿದರು.

ಮೋದಿಯವರ ಆಡಳಿತದಿಂದ ಮಹಿಳೆಯರಿಗೆ ಹೊಸ ಯುಗ ನಿರ್ಮಾಣಗೊಂಡಿದೆ ಎಂದು ಜಾಧವ್ ಹೇಳಿದರು. ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಶಶಿಕಾಂತ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ.ಪುಷ್ಪಾ ಎಂ. ಸವದತ್ತಿ ಮತ್ತು ಡಾ. ಮೊಹಮ್ಮದ್ ಝೋಹೈರ್ ಮಾತನಾಡಿದರು.

ಈ ಸಂದರ್ಭದಲ್ಲಿ ಮುಕ್ತಾ ಆರ್. ಜಗರಕಲ್ ಹಾಗೂ ಚಂದನ್ ಬಾಲಾ ಎಸ್ ಸೇಥಿಯ, ಎ ಮಂಜುನಾಥ ಜೇವರ್ಗಿ, ಉತ್ತಮ್ ಬಜಾಜ್ ,ಪ್ರೊ. ಆರ್.ಆರ್ ಬಿರಾದಾರ್, ಡಾ. ಶಫಿಯಾ ಪರ್ವೀನ್, ಡಾ. ಸುಷ್ಮಾ ಎಚ್ ಮತ್ತು ಭಾರತಿ ಪಾಟೀಲ್ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here