ಆಳಂದ: ತಾಲೂಕು ಆಡಳಿತ ಸೇರಿದಂತೆ ಸರ್ಕಾರಿ ಕಚೇರಿ ಸಂಘ ಸಂಸ್ಥೆಗಳಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಜಯಂತಿ ಆಚರಿಸಲಾಯಿತು.
ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡ ಗುರುಗಳ ಭಾವಚಿತ್ರದ ಪೂಜೆಯನ್ನು ಶಾಸಕ ಸುಭಾಷ ಗುತ್ತೇದಾರ ನೆರವೇರಿಸಿದರು. ಮೂಢನಂಬಿಕೆ, ಕಂದಾಚಾರವನ್ನು ಹತ್ತಿಕುವ ಮೂಲಕ, ವೈಜ್ಞಾನಿಕ ತಳಹದ್ದಿಯ ಮೇಲೆ ಸಮಾಜಕ್ಕೆ ಸನ್ಮಾರ್ಗ ತೋರಿದ ಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಮುಖಂಡರು ಪ್ರತಿಪಾದಿಸಿದರು.
ತಹಸೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ, ಆರ್ಯ ಈಡಿಗ ಸಮಾಜದ ತಾಲೂಕು ಅಧ್ಯಕ್ಷ ತಿಪ್ಪಯ್ಯ ಗುತ್ತೇದಾರ ಯಳಸಂಗಿ, ಕಾರ್ಯದರ್ಶಿ ಸಿದ್ಧಲಿಂಗ ಗುತ್ತೇದಾರ, ತಡಕಲ್ ಗ್ರಾಪಂ ಅಧ್ಯಕ್ಷ ಶಿವುಪುತ್ರಪ್ಪ ಬೆಳ್ಳೆ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡರಂಗಪ್ಪ, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ಸಂಜಯ ರೆಡ್ಡಿ, ಶಿರಸ್ತೆದಾರ ರಾಕೇಶ ಶೀಲವಂತ, ಕಂದಾಯ ನಿರೀಕ್ಷಕ ಶರಣಬಸಪ್ಪ ಹಕ್ಕಿ, ಮುಖಂಡ ಅಶೋಕ ಗುತ್ತೇದಾರ, ಚಂದ್ರಾಮಪ್ಪ ಘಂಟೆ, ಕಾಂತು ಯಳಸಂಗಿ, ಮಲ್ಲಯ್ಯ ಶುಕ್ರವಾಡಿ, ಮರಗಯ್ಯ ಕಲಾಲ, ರಮೇಶ ಗುತ್ತೇದಾರ, ತಿಪ್ಪಯ್ಯ ಗುತ್ತೇದಾರ ತಡಕಲ್, ಸೀನು ಗುತ್ತೇದಾರ, ಶಿವಯ್ಯ ಗುತ್ತೇದಾರ, ಮರಾಠಾ ಸಮಾಜದ ಅಧ್ಯಕ್ಷ ನಾಗನಾಥ ಏಟೆ, ಪ್ರಕಾಶ ಮಾನೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಅಲ್ಲದೆ, ಪಟ್ಟಣದಲ್ಲಿ ಆರ್ಯ ಈಡಿಗ ಸಮಾಜದಿಂದ ನಾರಾಯಣ ಗುರುಗಳ ಜಯಂತಿ ಆಚರಿಸಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅಭಿಮಾನಿಗಳಿಗೆ ಸಹಿ ಹಂಚಲಾಯಿತು. ಯುವ ಮುಖಂಡ ಕಿರಣ ಗುತ್ತೇದಾರ, ರಾಜೇಂದ್ರ ಗುಂಡೆ ತಡಕಲ್ ಮತ್ತು ಸಮಾಜದ ಬಾಂಧವರು ಸೇರಿ ಅನೇಕರು ಭಾಗವಹಿಸಿದ್ದರು.