ಸಂವಿಧಾನ ಬದಲಾವಣೆ ಹೇಳಿಕೆ; ಸಂಸದ ಅನಂತಕುಮಾರ್ ಹೆಗಡೆ ಪ್ರತಿಕೃತಿ ದಹಿಸಿ ಪ್ರತಿಭಟನೆ

0
15

ಕಲಬುರಗಿ; ಲೋಕಸಭಾ ಚುನಾವಣೆಯಲ್ಲಿ 400 ಸೀಟುಗಳು ಬಿಜೆಪಿಗೆ ಬಂದರೆ ಸಂವಿಧಾನ ಬದಲಾಯಿಸಲಾಗುವುದು ಎಂದು ಹೇಳಿಕೆ ನೀಡಿದ ಸಂಸದ ಅನಂತಕುಮಾರ್ ಹೆಗೆಡೆ ಅವರ ಪ್ರತಿಕೃತಿಗೆ ಗುರವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಿನಿ ವಿಧಾನಸೌಧದ ಮುಂದೆ ದಹಿಸಿ ಪ್ರತಿಭಟನೆ ಮಾಡಿದರು.

ಪ್ರತಿಕೃತಿ ದಹಿಸುವ ಮುನ್ನ ಪ್ರತಿಭಟನೆಕಾರರು ಅನಂತಕುಮಾರ್ ಹೆಗಡೆ ಅವರ ಅಣುಕು ಶವಯಾತ್ರೆಯನ್ನು ಮಾಡಿದರು. ಅಲ್ಲದೇ ಪ್ರತಿಕೃತಿಗೆ ಚಪ್ಪಲಿಗಳ ಹಾರವನ್ನು ಹಾಕಿದರು. ಕೆಲವರು ಚಪ್ಪಲಿಗಳಿಂದ ಹೆಗಡೆ ಪ್ರತಿಕೃತಿಗೆ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಪ್ರತಿಕೃತಿ ದಹಿಸಿ ಪ್ರತಿಭಟನೆ ಮಾಡಿದರು.

Contact Your\'s Advertisement; 9902492681

ಸಮಿತಿಯ ಮುಖಂಡ ಸುರೇಶ್ ಹಾದಿಮನಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹೆಚ್. ಶಂಕರ್, ಬಿ.ಸಿ. ವಾಲಿ, ಕೃಷ್ಣಪ್ಪ ಕರಣಿಕ್, ಉಮೇಶ್ ನರೋಣಾ, ರೇವಣಸಿದ್ಧ ಜಾಲಿ, ಮಹಾದೇವ್ ತರನಳ್ಳಿ, ರವಿ ಬಡಿಗೇರ್, ಸುಭಾಷ್ ಡಾಂಗೆ, ಮಹಾನಿಂಗ್ ಅಂಗಡಿ, ಮಹೇಂದ್ರ ಕೊಳ್ಳಿ, ಶಿವಶರಣ್ ಮಾರಡಗಿ, ದೇವಿಂದ್ರ ಹೆಗಡೆ, ಶಿವಪುತ್ರ ರಾಗಿ ಮುಂತಾದವರು ಪಾಲ್ಗೊಂಡಿದ್ದರು.

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಅಂಬೇಡ್ಕರ್ ಅವರು ಸಂವಿಧಾನವನ್ನು ಸರ್ವರಿಗೆ ಸಮಬಾಳು, ಸರ್ವರಿಗೂ ಸಮಪಾಲು ಉದ್ದೇಶದಿಂದ ರಚಿಸಿದ್ದಾರೆ. ಆದಾಗ್ಯೂ, ಕೆಲವು ಮತಾಂಧ ಶಕ್ತಿಗಳು ನಿರಂತರ ಸಂವಿಧಾನ ಮತ್ತು ಅಂಬೇಡ್ಕರ್ ಅವರ ಕುರಿತು ಹಗುರವಾಗಿ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ಸಂಸದ ಅನಂತಕುಮಾರ್ ಹೆಗಡೆ ಅವರು ನಾವು ಬಂದಿರುವುದೇ ಸಂವಿಧಾನ ಬದಲಾವಣೆ ಮಾಡಲು ಎಂದು ವಿವಾದಿತ ಹೇಳಿಕೆ ನೀಡಿದರೂ ಸಹ ಬಿಜೆಪಿ ವರಿಷ್ಠರು ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಕೂಡಲೇ ಅನಂತಕುಮಾರ್ ಹೆಗಡೆ ಅವರಿಗೆ ಬಿಜೆಪಿಯಿಂದ ಉಚ್ಛಾಟಿಸಬೇಕು. ಇಲ್ಲದೇ ಹೋದಲ್ಲಿ ಆ ಪಕ್ಷವನ್ನೇ ಜನರು ಉಚ್ಛಾಟಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಪ್ರತಿಭಟನೆಕಾರರು, ಇನ್ನು ಮುಂದೆ ಸಂವಿಧಾನದ ಕುರಿತು ಯಾರು ಹಗುರವಾಗಿ ಮಾತನಾಡುತ್ತಾರೋ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here