ಬೈಚಬಾಳ : ದಲಿತ ಸಂಘರ್ಷ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

0
39

ಸುರಪುರ: ನಗರದ ಟೇಲರ‍್ಸ್ ಮಂಜಿಲ್ ಪ್ರವಾಸಿ ಮಂದಿರದಲ್ಲಿ ಜರುಗಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ) ಬೈಚಬಾಳ ಗ್ರಾಮ ಶಾಖೆಯ ರಚನಾ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸಂಘಟನಾ ಸಂಚಾಲಕ ನಾಗಣ್ಣ ಕಲ್ಲದೇವನಹಳ್ಳಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ ಅವರ ತತ್ವಾದರ್ಶಗಳನ್ನು ಸಮಿತಿಯ ಕಾರ್ಯಕರ್ತರು ಅಳವಡಿಸಿಕೊಳ್ಳಬೇಕು, ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿ ಸಮಾಜದಲ್ಲಿ ಎಲ್ಲರೂ ಶಿಕ್ಷಣವಂತರಾಗಲು ಶ್ರಮಿಸಬೇಕು ಎಂದು ಕರೆ ನೀಡಿದು, ದಲಿತ ಜನಾಂಗದವರ ಮೇಲೆ ಯಾವುದೇ ದೌರ್ಜನ್ಯ ದಬ್ಬಾಳಿಕೆ ಘಟನೆಗಳು ಸಂಭವಿಸಿದಲ್ಲಿ ಅದರ ವಿರುದ್ಧ ಸಂಘಟಿತರಾಗಿ ಹೋರಾಡಕ್ಕೆ ಮುಂದಾಗಬೇಕು ಎಂದು ಹೇಳಿದರು.

Contact Your\'s Advertisement; 9902492681

ತಾಲೂಕು ಸಂಚಾಲಕ ಶಿವಶಂಕರ ಹೊಸಮನಿ ಮಾತನಾಡಿ ಅಂಬೇಡ್ಕರ, ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಪುಲೆ, ನಾಲ್ವಡಿ ರಾಜಾ ಕೃಷ್ಣರಾಜ ಒಡೆಯರ ಅವರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು, ತಾಲೂಕು ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ತಳವಾರಗೇರಾ ಪದಾಧಿಕಾರಿಗಳ ಪಟ್ಟಿಯನ್ನು ಓದಿದರು, ಪ್ರಮುಖರಾದ ರೈತ ಸಂಘದ ಮುಖಂಡ ಅಯ್ಯಣ್ಣ ಹಾಲಬಾವಿ, ರವಿಚಂದ್ರ ದರಬಾರಿ, ಮಲ್ಲಿಕಾರ್ಜುನ ಜಾಲಿಬೆಂಚಿ, ಮಲ್ಲು ಬೋನಾಳ, ಹುಣಸಗಿ ತಾಲೂಕು ಸಂಚಾಲಕ ಶರಣಪ್ಪ ತೆಗ್ಗಳ್ಳಿ, ಸುರೇಶ ಡೊಣ್ಣಿಗೇರಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು.

ತಿಮ್ಮಣ್ಣ ದೊಡ್ಡಮನಿ (ಸಂಚಾಲಕ), ಪರಮಣ್ಣ ಬೈಚಬಾಳ, ಭೀಮಣ್ಣ ದೊಡ್ಡಮನಿ, ಮರೆಣ್ಣ ಬೋನಾಳ (ಸಂಘಟನಾ ಸಂಚಾಲಕರು) ಹಾಗೂ ಬಸವರಾಜ ಬೋನಾಳ (ಖಜಾಂಚಿ) ಆಯ್ಕೆಗೊಳಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here