ಕಲಬುರಗಿ: ಎಚ್‌ಕೆಇ ಸೊಸೈಟಿಗೆ ಹೊಸ ಸದಸ್ಯತ್ವ ನೋಂದಣಿಗೆ ನನ್ನ ಮೊದಲ ಆದ್ಯತೆಯಾಗಿದೆ ಎಂದು ಎಚ್‌ಕೆಇ ಸಂಸ್ಥೆ ಚುನಾವಣೆಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶಶೀಲ್ ನಮೋಶಿ ತಿಳಿಸಿದರು.
ಈಗಾಗಲೇ ಸದಸ್ಯತ್ವ ಪಡೆದ ಕುಟುಂಬಗಳಿಗೆ ಹೊಸ ಸದಸ್ಯತ್ವ ನೀಡಲಾಗುವುದು. ಆರೋಗ್ಯ ವಿಮೆ, ನರ್ಸಿಂಗ್ ಸೇವೆ ಹೀಗೆ ಸಂಸ್ಥೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಮೋಶಿ ಪೆನಲ್ ನ 9 ಗ್ಯಾರಂಟಿಗಳು: ಎಚ್‌ಕೆಇ ಸೊಸೈಟಿಯ ಬೋಧಕ ಸಿಬ್ಬಂದಿ ವರ್ಗಕ್ಕೆ 7ನೇ ವೇತನ ಆಯೋಗದ ಏಕರೂಪದ ವೇತನ ನೀಡಲು ಬದ್ಧ, ಅಧ್ಯಕ್ಷರಾಗಿ ಮೂರು ತಿಂಗಳೊಳಗಾಗಿ ಜಾರಿಗೆ ತರುತ್ತೇನೆ. ಬೋಧಕೇತರ ಸಿಬ್ಬಂದಿ ವರ್ಗದ ವೇತನ ಶ್ರೇಣಿ ಹೆಚ್ಚಳ, ಹೊಸ ಸದಸ್ಯತ್ವ ಅಭಿಯಾನ, ಸಂಸ್ಥೆಯ ಸರ್ವ ಸದಸ್ಯರಿಗೆ ಆರೋಗ್ಯ ವಿಮೆ, ಬಸವೇಶ್ವರ ಮತ್ತು ಸಂಗಮೇಶ್ವರ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸಾ ಸೌಲಭ್ಯ, ಎಲ್ಲ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ, ಕ್ರೀಡಾ ಮೈದಾನ ಒಳಗೊಂಡ ಸುಸಜ್ಜಿತ ಹಾಸ್ಟೆಲ್ ನಿರ್ಮಾಣ, ಮಾನವ ಸಂಪನ್ಮೂಲ ಬಳಕೆ, ಎಚ್‌ಕೆಇ ಸೊಸೈಟಿಯ ಅಭಿವೃದ್ಧಿ ಕಾಮಗಾರಿಗಳು, ಇತರೆ ಆರೋಗ್ಯ ಸಂಬಂಧಿ ಕಾರ್ಯಚಟುವಟಿಕೆಗಳಲ್ಲಿ ವ್ಯವಹಾರದಲ್ಲಿ ಭಾಗಯಾಗದಂತೆ ಎಚ್ಚರವಹಿಸುವೆ ಎಂದು ಗ್ಯಾರಂಟಿಗಳ ವಿವರಣೆ ನೀಡಿದರು.
ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ರಾಜಾ ಭೀಮಳ್ಳಿ, ಆಡಳಿತ ಮಂಡಳಿ ಸದಸ್ಯ ಅಭ್ಯರ್ಥಿಗಳಾದ ಡಾ.ಶರಣಬಸಪ್ಪ ಹರವಾಳ, ಅರುಣಕುಮಾರ ಎಂ.ವೈ. ಪಾಟೀಲ್, ವಿಜಯಕುಮಾರ ದೇಶಮುಖ, ಶಿವಶರಣಪ್ಪ ಸೀರಿ, ಉದಯಕುಮಾರ ಚಿಂಚೋಳಿ, ಡಾ.ಕೈಲಾಸ ಬಿ.ಜಿ.ಪಾಟೀಲ್, ಡಾ.ರಾಜೇಶ ಎಸ್. ವಾಲಿ, ನಾಗರಾಜ್ ನಿಗ್ಗುಡಗಿ, ಮಹಾದೇವ ಖೇಣಿ, ಮಂಜುನಾಥ ಹೂಲಿ ಇತರರಿದ್ದರು.