ಚಿತ್ತಾಪೂರ,ಕಲಬುರಗಿ ಗ್ರಾಮೀಣ ಮತಕ್ಷೇತ್ರಕ್ಕೆ ಡಿ.ಸಿ. ಭೇಟಿ

0
27

ಕಲಬುರಗಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸತತ ಮೂರನೇ ದಿನವಾದ ಬುಧವಾರ ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಕಲಬುರಗಿ ಗ್ರಾಮೀಣ ಮತ್ತು ಚಿತ್ತಾಪೂರ ಮತಕ್ಷೇತ್ರದ ವ್ಯಾಪ್ತಿಯ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತಗಟ್ಟೆಯಲ್ಲಿನ ಮೂಲಸೌಕರ್ಯ ಕುರಿತು ಪರಿಶೀಲಿಸಿದರು.

ಕಲಬುರಗಿ ಸಹಾಯಕ ಆಯುಕ್ತರ ಕಚೇರಿಗೆ ಭೇಟಿ ನೀಡಿ ಚುನಾವಣಾ ಸಿದ್ಧತೆಗಳ ಬಗ್ಗೆ ಸಹಾಯಕ ಆಯುಕ್ತೆ ರೂಪಿಂದರ್ ಸಿಂಗ್ ಅವರಿಂದ ಮಾಹಿತಿ ಪಡೆದುಕೊಂಡರು.‌ ಕುಸನೂರ, ಶ್ರೀನಿವಾಸ ಸರಡಗಿಯಲ್ಲಿ ಮತಗಟ್ಟೆ ವೀಕ್ಷಿಸಿದರು.

Contact Your\'s Advertisement; 9902492681

ನಂತರ ಚಿತ್ತಾಪೂರ ಮತಕ್ಷೇತ್ರದ ಗುಂಡಗುರ್ತಿ, ಐನೊಳ್ಳಿ ಮತಗಟ್ಟೆ ವೀಕ್ಷಿಸಿದರು. ಮಾಡಬೂಳದಲ್ಲಿ ವಲನರೇಬಲ್‌ ಮತಗಟ್ಟೆ ಇರುವ ಕಾರಣ ಮತದಾರರೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿಗಳು, ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ಮಾಡಲು ಏನಾದರು ಅಡ್ಡಿಗಳಿವೆ ಎಂದು ಸಾರ್ವಜನಿಕರಿಗೆ ಪ್ರಶ್ನಿಸಿದರು. ಏನೇ ಸಮಸ್ಯೆ ಇದ್ದರೆ ಸ್ಥಳೀಯ ಅಧಿಕಾರಗಳ‌ಗ ಗಮನಕ್ಕೆ ತರಬೇಕೆಂದರು.

ತದನಂತರ ಚಿತ್ತಾಪೂರ ಪಟ್ಟಣದಲ್ಲಿ ಸ್ಟ್ರಾಂಗ್ ರೂಂ ಆಗಿ ಗುರುತಿಸಿಕೊಂಡಿರುವ ಸರ್ಕಾರ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ, ಸ್ಟ್ರಾಂಗ್ ರೂಂಗೆ ಸೂಕ್ತ ಭದ್ರತೆ ಒದಗಿಸಬೇಕು ಮತ್ತು ಸಿ.ಸಿ.ಟಿ.ವಿ ಹಾಕಿಸಬೇಕು ಎಂದರು. ನಂತರ ವಾಡಿ ಪಟ್ಟಣದ ಸವಿತಾ ಸಮಾಜ ಸಮುದಾಯ ಭವನದ ಮತಗಟ್ಟೆ ವೀಕ್ಷಣೆ ಮಾಡಿದರು.

ಎಸ್.ಪಿ ಅಕ್ಷಯ್ ಹಾಕೈ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಚಿತ್ತಾಪೂರ ಎ.ಆರ್.ಓ ನವೀನ್ ಯು. ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here