ಮೋದಿ ಸಾಧನೆ  ಪ್ರತಿ ಮತದಾರರ ಮನೆಗೆ ತಲುಪಿಸಿ: ಸಂಸದ ಜಾಧವ್ ಕರೆ

0
77

ಕಲಬುರಗಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಾಧನೆ ಹಾಗೂ ಐದ ವರ್ಷಗಳಲ್ಲಿ ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮತದಾರರ ಮನೆ ಮನೆಗೆ ಮುಟ್ಟಿಸಿ ಸೇವಕನಂತೆ ಕಾರ್ಯನಿರ್ವಹಿಸಿದ ಪ್ರಗತಿಯನ್ನು ಪ್ರಚಾರ ಮಾಡಿ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಹೊಂದಲು ಕಾರ್ಯಕರ್ತರು ಮುಂದಾಗಬೇಕು ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಕರೆ ನೀಡಿದರು.

ಇಲ್ಲಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಗ್ರಾಮೀಣ ಮತಕ್ಷೇತ್ರದ ಮಂಡಲಮಟ್ಟದ ಬಿಜೆಪಿ ಪ್ರಮುಖರ ಸಭೆಯಲ್ಲಿ ಮಾತನಾಡಿ ಇದು ದೊಡ್ಡ ಚುನಾವಣೆ. ವಿರೋಧಿ ಪಕ್ಷದ ಅಭ್ಯರ್ಥಿ ಯಾರೇ ಇರಲಿ ಕಾರ್ಯಕರ್ತರು ಎಚ್ಚರದಿಂದ ಕೆಲಸ ಮಾಡಬೇಕಾಗಿದೆ ಗ್ರಾಮೀಣ ಮತಕ್ಷೇತ್ರದ ಬೆಡಸೂರಲ್ಲಿ ಹುಟ್ಟಿ ಬೆಳೆದು ಲೋಕಸಭೆಗೆ 2ನೇ ಬಾರಿ ಅಭ್ಯರ್ಥಿಯಾಗಿರುವುದು ಕಾರ್ಯಕರ್ತರ ದುಡಿಮೆಯ ಫಲವಾಗಿದೆ ಮತದಾರರ ಆಕಾಂಕ್ಷೆಗಳಿಗೆ ಚ್ಯುತಿ ಬರದಂತೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು ಎರಡು ವರ್ಷ ಮಹಾಮಾರಿ ಕೋವಿಡ್ ವಿರುದ್ಧ ಹೋರಾಟ ಹಾಗೂ ನಂತರದ ಮೂರು ವರ್ಷಗಳ ಅವಧಿಯಲ್ಲಿ ಗಣನೀಯ ಸಾಧನೆ ಮಾಡಲಾಗಿದೆ  ಎಂದು ತಿಳಿಸಿದರು.

Contact Your\'s Advertisement; 9902492681

ಕಾರ್ಯಕರ್ತರಲ್ಲಿ ದೊಡ್ಡಮಟ್ಟದ ನಿರೀಕ್ಷೆಗಳಿದ್ದು ಮುಂದಿನ ಅವಧಿಗೆ ಇನ್ನಷ್ಟು ಉತ್ತಮ ಕೆಲಸ ಮಾಡಿ ಅಭಿವೃದ್ಧಿ ಹೊಂದಲು ಪ್ರತಿ ಮತದಾರನ ಆಶೀರ್ವಾದ ಅಗತ್ಯವಾಗಿದೆ. ವಲಸೆ ಹೋಗುವುದನ್ನು ತಡೆಯಲು ಕಲಬುರಗಿ ಯಲ್ಲೆ 10,000 ಕೋಟಿ ರೂಪಾಯಿ ವೆಚ್ಚದಲ್ಲಿ ಒಂದು ಲಕ್ಷ ನೇರ ಹಾಗೂ ಎರಡು ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಸುವ ಮೆಗಾ ಜವಳಿ ಪಾರ್ಕ್ ಆರಂಭ, ವಿಮಾನ ನಿಲ್ದಾಣ ಅಭಿವೃದ್ಧಿ, 71 ಕಿಲೋಮೀಟರ್ ಉದ್ದದ 1475 ಕೋಟಿ ರೂಪಾಯಿ ವೆಚ್ಚದಲ್ಲಿ ಭಾರತ್ ಮಾಲಾ ರಸ್ತೆ, 120 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರುಣಿಸುವ ಜಲಜೀವನ್ ಮಿಷನ್ ಅಡಿಯಲ್ಲಿ ಸನ್ನತಿ ,ಬೆಣ್ಣೆತೋ ರಾದಿಂದ ನೀರು ಪೂರೈಕೆ, ಬೆಂಗಳೂರಿಗೆ ಎರಡು ರೈಲುಗಳ ಆರಂಭ, ನೀಲೂರು ರೈಲ್ವೇ ಸೇತುವೆ ನಿರ್ಮಾಣ ಹಲವು ರೈಲು ನಿಲ್ದಾಣಗಳ ಅಭಿವೃದ್ಧಿ, ಚಿತಾಪುರದ ಪಾದಾಚಾರಿ ಮೇಲು ಸೇತುವೆ ಆರಂಭ ಇಎಸ್ಐ ಆಸ್ಪತ್ರೆ ಜಿಮ್ಸ್ ನಲ್ಲಿ ಸ್ನಾತಕೋತ್ತರ ಸೀಟುಗಳ ಹೆಚ್ಚಳ ಮುಂತಾದ ನೂರಾರು ಕೆಲಸಗಳನ್ನು ಮಾಡಲಾಗಿದೆ ಸಂಸತ್ತಿನಲ್ಲಿ ಅತ್ಯಧಿಕ ಹಾಜರಿ, ಅತ್ಯಧಿಕ ಪ್ರಶ್ನೆ ಮಾಡಿದ ಹಾಗೂ ಅತ್ಯಧಿಕ ಚರ್ಚೆಯಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಕಲ್ಬುರ್ಗಿ ಸಂಸದನಿಗೆ ಲಭಿಸಿರುವುದಕ್ಕೆ ಹೆಮ್ಮೆ ಇದೆ ಎಂದು ಜಾಧವ್ ಹೇಳಿದರು.

ಈ ಬಾರಿ ಕೂಡ ಅತ್ಯಧಿಕ ಮತಗಳ ಅಂತರದಿಂದ ಗೆಲುವು ತಂದುಕೊಡಲು ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕು ಎಂದು ವಿನಂತಿಸಿದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕರಾದ ಬಸವರಾಜ್ ಮತ್ತಿಮಡು ಮಾತನಾಡಿ ಕಲ್ಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಈಗ ಏಕೈಕ ಬಿಜೆಪಿ ಶಾಸಕ ನಾಗಿದ್ದು ಕಳೆದ ಬಾರಿಗಿಂತ ಹೆಚ್ಚು 30 ಸಾವಿರ ಮತಗಳ ಮುನ್ನಡೆ ನೀಡಲು ಸಜ್ಜಾಗಿದೆ.ಕಳೆದ ಬಾರಿ 21ಸಾವಿರ ಮುನ್ನಡೆ ಸಿಕ್ಕಿತ್ತು.ಅದಕ್ಕಾಗಿ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಶ್ರಮವಹಿಸಿ ಕೆಲಸ ಮಾಡಿ ಭಾರಿ ಅಂತರದೊಂದಿಗೆ ಜಾಧವ್ ಅವರನ್ನು ಸಂಸತ್ತಿಗೆ ಕಳುಹಿಸಬೇಕು ಎಂದು ಹೇಳಿದರು.

ವಿಭಾಜಗೀಯಯ ಸಂಘಟನಾ ಕಾರ್ಯದರ್ಶಿ ಅರುಣ್ ಬಿನ್ನಾಡಿ ಮಾತನಾಡಿ ಕಲ್ಬುರ್ಗಿ ಮತಕ್ಷೇತ್ರ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಕ್ಷೇತ್ರವಾಗಿದೆ. ಕಲ್ಬುರ್ಗಿ ಲೋಕಸಭಾ ಮತಕ್ಷೇತ್ರದಲ್ಲಿ ಎರಡು ಲಕ್ಷಕ್ಕೂ ಮಿಕ್ಕ ಅಂತರದಿಂದ ಈ ಬಾರಿ ಜಯ ಸಾಧಿಸಿ ಖರ್ಗೆ ಕುಟುಂಬದ ಆಡಳಿತಕ್ಕೆ ಇತಿಶ್ರೀ ಹಾಡಲು ಮತದಾರರು ಸಜ್ಜಾಗುವಂತೆ ಕರೆ ನೀಡಿದರು. ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳಿಲ್ಲದೆ ಉಸ್ತುವಾರಿ ಸಚಿವರ ಕುಟುಂಬದವರಿಗೆ ,ಮೀಸೆ ಚಿಗುರದವರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವ ಹೀನಾಯ ಸ್ಥಿತಿಗೆ ತಲುಪಿದೆ ಎಂದು ಲೇವಡಿ ಮಾಡಿದರು.

ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗೆ ಮಾತನಾಡಿ ಬಿಜೆಪಿಯ ಗುರಿ ಅಭ್ಯರ್ಥಿಯ ಗೆಲುವು ಕಡೆಗೆ ಮಾತ್ರ ಅದಕ್ಕಾಗಿ ಮುಂದಿನ ದಿನಗಳಲ್ಲಿ ಪೂರ್ಣವಾಗಿ ಕಾರ್ಯಕರ್ತರು ರಾತ್ರಿ ಹಗಲು ದುಡಿದು ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಲು ಕೊಡುಗೆ ನೀಡಬೇಕು ಜಾಧವ್ ಅವರು ಈ ಬಾರಿ ದಾಖಲೆಯ ಮತಗಳೊಂದಿಗೆ ಗೆಲ್ಲುವಂತಾಗಲು ಅವರು ಮಾಡಿದ ಅಭಿವೃದ್ಧಿ ಕೆಲಸಗಳು ಶ್ರೀರಕ್ಷೆಯಾಗಲಿದೆ ಎಂದು ಹೇಳಿದರು.
ಈ ಸಭೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಮರನಾಥ ಪಾಟೀಲ್ ಶೋಭಾ ಬಾಣಿ, ಶಶಿಕಲಾ ತೆಂಗಳಿ, ಸಂತೋಷ್ ಹಾದಿಮನಿ, ಸಂಗಪ್ಪ ಗೌಡ ಪಾಟೀಲ್, ನಿಂಗಣ್ಣ ಹೊಳ್ಕರ್, ಅಶೋಕ್ ಬಗಲಿ ಪ್ರವೀಣ್ ಮಚ್ಚೆಟ್ಟಿ, ಜಗನ್ನಾಥ ಗೌಡ, ದಿನೇಶ್ ಗೌಳಿ ಮುಂತಾದವರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here