ಶಿವಯೋಗೇಶ್ವರ ಜಾತ್ರೆ ರದ್ದು- ಗ್ರಾಮಸ್ಥರ ಒಪ್ಪಿಗೆ

0
203

 

ಶಹಾಬಾದ: ಕೊರೊನಾ ವೈರಸ್ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಎಪ್ರಿಲ್ 12 ಮತ್ತು 13 ರಂದು ನಡೆಯಬೇಕಿದ್ದ ತಾಲೂಕಿನ ದೇವನತೆಗನೂರಿನ ಶಿವಯೋಗೇಶ್ವರ ಜಾತ್ರೆಯನ್ನು ಗ್ರಾಮಸ್ಥರ ಮಧ್ಯದಲ್ಲಿ ಸಭೆ ನಡೆಸಿ ರದ್ದುಪಡಿಸಲಾಗಿದೆ ಎಂದು ಪಿಐ ಕಲ್ಲದೇವರು ಹೇಳಿದರು.

Contact Your\'s Advertisement; 9902492681

ಅವರು ಶನಿವಾರ ಕೊರೊನಾ ವೈರಸ್ ಹರಡದಂತೆ ದೇವನತೆಗನೂರ ಗ್ರಾಮಸ್ಥರ ಜತೆ ಶಿವಯೋಗೇಶ್ವರ ಜಾತ್ರೆಯನ್ನು ರದ್ದುಪಡಿಸುವ ಕುರಿತು ಆಯೋಜಿಸಲಾದ ಶಾಂತಿ ಸಭೆಯಲ್ಲಿ ಮಾತನಾಡಿದರು.

ಜಗತ್ತಿಗೆ ಮಹಾಮಾರಿ ರೋಗವಾದ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ.ಇದರಿಂದ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ.ಈ ಬಗ್ಗೆ ನಿರ್ಲಕ್ಷ್ಯ ತೋರಿದರೆ ಮುಂದೆ ಗಡಾಂತರ ಎದುರಿಸಬೇಕಾಗುತ್ತದೆ. ಸರಕಾರದ ಆದೇಶದ ಪ್ರಕಾರ ಕೋವಿಡ್  ಮಾರ್ಗಸೂಚಿಗಳನ್ನು ಪಾಲಿಸಲೇಬೇಕು. ಯಾವುದೇ ಕಾರಣಕ್ಕೂ ಜಾತ್ರೆ ನಡೆಸುವಂತಿಲ್ಲ. ಯಾವುದೇ ಕಾರಣಕ್ಕೂ ಅಂದು ದೇವಸ್ಥಾನದ ಸಮೀಪ ಜನ ಬರುವಂತಿಲ್ಲ. ಗ್ರಾಮಸ್ಥರು ದೇವಸ್ಥಾನಕ್ಕೆ ಬರದೇ ಪೂಜೆ, ನೈವಿಧ್ಯ ಇತ್ಯಾದಿ ತಮ್ಮ ಧಾರ್ಮಿಕ ವಿಧಿವಿಧಾನಗಳನ್ನು ಮನೆಯಲ್ಲಿಯೇ ಮಾಡಿಕೊಳ್ಳತ್ಕದ್ದು.ಅಲ್ಲದೇ ಕುಸ್ತಿ ಪಂದ್ಯಾಟ, ನಾಟಕ, ಗೀಗೀ ಪದಗಳನ್ನು ರದ್ದುಪಡಿಸಲಾಗಿದೆ ಎಂದು ಹೇಳಿದರು.

ಪಿಎಸ್‍ಐ ತಿರುಮಲೇಶ ಮಾತನಾಡಿ, ಯಾವುದೇ ಕಾರಣಕ್ಕೂ ಜಾತ್ರೆ ನಡೆಸುವಂತಿಲ್ಲ.ಒಂದು ವೇಳೆ ಆಚರಣೆಗಳು ಮಾಡುವುದನ್ನು ಕಂಡು ಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.ಸಾಮಾಜಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಜಾತ್ರೆ ನಡೆಸದಂತೆ ಮನವಿ ಮಾಡಿದರು.ನಂತರ ಗ್ರಾಮಸ್ಥರು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಕೈಗೊಂಡ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಕಮಿಟಿಯ ಅಧ್ಯಕ್ಷ ಶಂಕರ ಬಾಬು ಕಣಕಿ, ಕಾರ್ಯದರ್ಶಿ ಸೋಮಶೇಖರ ಮಕಾಶಿ, ಸಿದ್ದಲಿಂಗಶೆಟ್ಟಿ ಶಿರವಾಳ,  ಕಂದಾಯ ಅಧಿಕಾರಿ ವೀರಭದ್ರಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here