ಕಾಳಗಿ: ರೇವಣಸಿದ್ದೇಶ್ವರ ರಥೋತ್ಸವದಲ್ಲಿ ಯುವಕರಿಂದ ಗಲಾಟೆ

0
28

ಕಾಳಗಿ: ತಾಲ್ಲೂಕಿನ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸುಕ್ಷೇತ್ರ ರೇವಗ್ಗಿ (ರಟಕಲ್) ರೇವಣಸಿದ್ದೇಶ್ವರರ ಗುಡ್ಡದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತೋತ್ಸವ ಅಂಗವಾಗಿ ಶುಕ್ರವಾರ ಸಾಯಂಕಾಲ ಅಪಾರ ಭಕ್ತ ಸಮೂಹದ ಮಧ್ಯೆ ಸಡಗರ ಸಂಭ್ರಮದಿಂದ ರೇವಣಸಿದ್ದೇಶ್ವರರ ಭವ್ಯ ರಥೋತ್ಸವ ಜರುಗಿತು.

ರೇವಣಸಿದ್ದೇಶ್ವರರ ಜಾತ್ರಾ ಮಹೋತ್ಸವ ಅಂಗವಾಗಿ ಬೆಳಗಿನ ಜಾವದಲ್ಲಿ ಜಗದ್ಗುರು ರೇವಣಸಿದ್ದೇಶ್ವರ ಕತೃ ಗದ್ದುಗೆಗೆ ವಿಶೇಷ ರುದ್ರಾಭಿಷೇಕ, ಮಹಾ ಮಂಗಳಾರತಿ, ತೊಟ್ಟಿಲೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

Contact Your\'s Advertisement; 9902492681

ನಂತರ ರಟಕಲ್ ರೇವಣಸಿದ್ಧ ಶಿವಾಚಾರ್ಯರು ಹಾಗೂ ಸಿದ್ಧರಾಮ್ ಮಹಾಸ್ವಾಮಿಗಳ ನೇತೃತ್ವದಲ್ಲಿ 51 ಜಂಗಮ ವಟುಗಳಿಗೆ ಅಯ್ಯಾಚಾರ ಲಿಂಗ ದೀಕ್ಷೆ ನೀಡಲಾಯಿತು.

ಬಳಿಕ ಮುತೈದಿಯರು ರೇಣುಕಾಚಾರ್ಯ ಮೂರ್ತಿಯನ್ನು ಬೆಳ್ಳಿ ತೊಟ್ಟಿಲಲ್ಲಿ ಹಾಕಿ ಜೋಗುಳ ಹಾಡಿದರು. ರೇವಗ್ಗಿ ಗ್ರಾಮದಿಂದ ರೇವಣಸಿದ್ದೇಶ್ವರರ ಗುಡ್ಡದವರೆಗೆ ರೇವಣಸಿದ್ದೇಶ್ವರರ ಭಕ್ತ ಬಳಗದ ವತಿಯಿಂದ ಪೂಜ್ಯ ನಿರಗುಡಿಯ ಹವಾ ಮಲ್ಲಿನಾಥ್ ಮಹಾರಾಜರ ಸಾನಿಧ್ಯದಲ್ಲಿ ರೇಣುಕಾಚಾರ್ಯ ಭವ್ಯ ಭಾವಚಿತ್ರದ ಮೆರವಣಿಗೆ ಜರುಗಿತು.

ಸಾಯಂಕಾಲ ಕುಂಭ, ಕಳಸ, ಮೀಣಿ, ನಂದಿಕೋಲುಗಳನ್ನು ಡೊಳ್ಳು ಭಾಜ ಭಜಂತ್ರಿಗಳೊಂದಿಗೆ ಭವ್ಯ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆ ತರಲಾಯಿತು. ಸೇಡಂ ಸಹಾಯಕ ಆಯುಕ್ತ ಹಾಗೂ ದೇವಸ್ಥಾನ ಆಡಳಿತ ಅಧಿಕಾರಿ ಆಶಪ್ಪ ಪೂಜಾರಿ ಅವರು ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ನೆರೆದಿದ್ದ ಅಪಾರ ಭಕ್ತರಿಂದ ರೇವಣಸಿದ್ದೇಶ್ವರ್ ಮಹಾರಾಜಕೀ ಜೈ, ರೇಣುಕಾಚಾರ್ಯ ಮಹಾರಾಜ್ ಕಿ ಜೈ ಜಯಘೋಷ ಮೊಳಗಿದವು. ಜನರು ರಥಕ್ಕೆ ಬಾಳೆಹಣ್ಣು, ಉತ್ತತ್ತಿ, ನಾಣ್ಯುಗಳನ್ನು ಎಸೆದು ಕೃತಾರ್ಥರಾದರು.

ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು, ಚಂದನಕೇರಿ ಅಭಿನವ ರಾಚೋಟೇಶ್ವರ್ ಶಿವಾಚಾರ್ಯರು, ಸೂಗುರ್ ಡಾ. ಚೆನ್ನರುದ್ರಮುನಿ ಶಿವಾಚಾರ್ಯರು, ರಟಕಲ್ ರೇವಣಸಿದ್ಧ ಶಿವಾಚಾರ್ಯರು, ಸಿದ್ಧರಾಮ್ ಮಹಾಸ್ವಾಮಿಗಳು, ಚನ್ನಬಸಪ್ಪ ದೇವರಮನಿ, ದೇವಸ್ಥಾನ ಕಾರ್ಯದರ್ಶಿ ಸದಾಶಿವ್ ವಗ್ಗೆ, ಅಣವೀರಯ್ಯಸ್ವಾಮಿ ಸಾಲಿ ಸೇರಿದಂತೆ ರೇವಗ್ಗಿ, ರಟಕಲ್, ಗೊಣಗಿ, ಭೆಡಸೂರ್, ಅರಣಕಲ್, ಮುಕರಂಬಿ, ಕಂದಗೂಳ್, ಚಂದನಕೇರಿ, ಮಾವಿನಸೂರ್, ಕೊಟಗಾ ಸೇರಿದಂತೆ ವಿವಿಧಡೆಯಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಯುವಕರ ಗಲಾಟೆ: ರಥೋತ್ಸವದ ಸಂದರ್ಭದಲ್ಲಿ ರೇವಗ್ಗಿ ಮತ್ತು ರಟಕಲ್ ಗ್ರಾಮಗಳ ಯುವಕರ ನಡುವೆ ಜೈಕಾರ ಕೂಗುವ ವಿಷಯವಾಗಿ ಗಲಾಟೆ ಶುರುವಾಗಿ ತಳ್ಳಾಟ, ನೂಕಾಟ ಆರಂಭಗೊಂಡಿತು. ಉದ್ರಿಕ್ತ ಯುವಕರನ್ನು ಪೋಲಿಸರು ಚದುರಿಸಿದರು ಈ ವೇಳೆ ರಥೋತ್ಸವದಲ್ಲಿ ಗೊದಲದ ವಾತಾವರಣ ನಿರ್ಮಾಣವಾಯಿತು. ನಂತರ ಕಾಳಗಿ ಸರ್ಕಲ್ ಅವರು ಎರಡು ಗ್ರಾಮದ ಮುಖಂಡರೊಂದಿಗೆ ಮಾತುಕತೆ ನಡೆಸಿ ಶಾಂತಿಕಾಪಾಡುವಂತೆ ತಾಕೀತು ಮಾಡಿ ಸಮಸ್ಯೆ ಇತ್ಯರ್ಥ ಪಡೆಸಿದರು ಎಂದು ತಿಳಿದುಬಂದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here