ಕಲಬುರಗಿ: ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುವ ಕಡಗಂಚಿ ಕೇಂದ್ರೀಯ ವಿಶ್ವ ವಿದ್ಯಾಲಯ ಇದೀಗ ತನ್ನ ಸಂಶೋಧಾನ ವಿದ್ಯಾರ್ಥಿ ಓರ್ವನನ್ನು ಕಾರಣ ನೀಡದೇ ವಿವಿಯೊಳಗೆ ಪ್ರವೇಶಕ್ಕೆ ನಿರ್ಭಂದ ಹೇರಿರುವ ಘಟನೆ ಶನಿವಾರ ನಡೆದಿದೆ ಎಂದು ತಿಳಿದುಬಂದಿದೆ.
2018ರಲ್ಲಿ ಪ್ರವೇಶ ಪಡೆದು,ಪಿಎಚ್‌ಡಿ ಮುಗಿಸದ ವಿದ್ಯಾರ್ಥಿಗಳಪ್ರವೇಶವನ್ನು ತಕ್ಷಣದಿಂದ ಜಾರಿಗೆಬರುವಂತೆ ರದ್ದುಗೊಳಿಸಲಾಗಿದೆ. ಕನ್ನಡವಿಭಾಗದ ನಂದಪ್ಪ, ಗಡ್ಡೆಪ್ಪ ಶರಣಪ್ಪ,ಜೀವವಿಜ್ಞಾನ ವಿಭಾಗದ ಪೂಜಾಕುಮಾರಿ, ಭೌತವಿಜ್ಞಾನ ವಿಭಾಗದರಿಧಿ ಸೇನಗುಪ್ತಾ ಸೇರಿದಂತೆ 12ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ನಿರ್ಬಂಧಹಾಕಲಾಗಿದೆ ಎಂದು ತಿಳಿಸಿದ್ದಾರೆ.
ಕನ್ನಡ ವಿಭಾಗದ ಸಂಶೋಧಾನ ವಿಭಾಗದ ವಿದ್ಯಾರ್ಥಿಯಾಗಿರುವ ನಂದಕುಮಾರ ಅವರನ್ನು ವಿವಿಯ ಕ್ಯಾಂಪಸ್ ಒಳಗೆ ಪ್ರವೇಶಿಸಬಾರದೆಂತೆ ನೋಡಿಕೊಳ್ಳಲು ಸೆಕ್ಯುರಿಟಿ ಗಾರ್ಡ್ ಗಳಿಗೆ ವಿವಿಯ ಉನ್ನತ ಆಡಳಿತ ಮಂಡಳಿ ಆದೇಶಿದ್ದಾರೆ ಎಂದು ತಿಳಿದುಬಂದಿದೆ.
ನಂದಪ್ಪಾ ಅವರು ಶನಿವಾರ ಎಂದಿನಂತೆ ತರಬೇತಿಗೆ ತೆರಳುವಾಗ ಸೆಕ್ಯುರಿಟಿ ಗಾರ್ಡಗಳು ತಡೆದು ನಿಲ್ಲಿಸಿ ನಿಮಗೆ ವಿವಿಯ ಆವರಣದೊಳಗೆ ಪ್ರವೇಶಕ್ಕೆ ಅವಕಾಶ ವಿಲ್ಲ ಎಂದು ದ್ವಾರದಲ್ಲಿ ಬ್ಯಾರಿಕೆಟ್ ಹಾಕಿ ತಡೆದಿದ್ದಾರೆ. ಪ್ರವೇಶಕ್ಕೆ ನಿರ್ಭಂದ ಹೇರಿರುವ ಕುರಿತು ಪ್ರಶ್ನಿಸಿದಾಗ ಹೈಯರ್ ಅಥಾರಿಟಿಗೆ ಕೇಳಿ ಎಂದು ಸೆಕ್ಯುರಿಟಿ ಆಫಿಸರ್ ಹೇಳುತ್ತಿದ್ದಾರೆ ಎಂದು ನೊಂದ ವಿದ್ಯಾರ್ಥಿ ಇ ಮೀಡಿಯಾ ಲೈನ್ ಸುದ್ದಿ ವಾಹಿನಿಗೆ ತನ್ನ ಅಳಲು ತೊಡಿಕೊಂಡಿದ್ದಾರೆ.
ನಾನೊಬ್ಬ ವಿವಿಯ ವಿದ್ಯಾರ್ಥಿ ನನ್ನಗೆ ಒಳಗೆ ಬೀಡಿ ಎಂದು ಕೆಲಹೊತು ಸಿಬ್ಬಂದಿ ಮತ್ತು ವಿದ್ಯಾರ್ಥಿ ನಡುವೆ ವಾದ ನಡೆದಿದ್ದು, ಯಾವ ಕಾರಣಕ್ಕಾಗಿ ನನ್ನಗೆ ಬಿಡುತ್ತಿಲ್ಲ ನಾನೇನು ಟೆರಿಸ್ಟ್, ನಕ್ಸಲ್ ಅಥವಾ ದಲಿತ ಎನ್ನುವ ಕಾರಣಕ್ಕೆ ವಿವಿಯಲ್ಲಿ ನನ್ನ ಪ್ರವೇಶ ನಿಷೇಧಿಸಲಾಗಿದೆ ಎಂದು ವಿವಿಯ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಕಾರಣ ಮತ್ತು ಸ್ಪಷ್ಟನೆ ನೀಡಿದ ವಿವಿಯ ಆಡಳಿತ ಮಂಡಳಿ ಸಂಶೋಧಾ ವಿದ್ಯಾರ್ಥಿಯನ್ನು ಕ್ಯಾಂಪಸ್ ನೊಳಗೆ ಪ್ರವೇಶಕ್ಕೆ ನಿರ್ಭಂದಿಸಿ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚೆಗಷ್ಟೇ ನಂದಕುಮಾರ ವಿವಿಯಲ್ಲಿ ಸರಸ್ವತಿ ಪೂಜೆ ಹಾಗೂ ಎಬಿವಿಪಿ ಸಂಘಟನೆಯಿಂದ ಹೊರಗಿನ ಜನರಿಗೆ ಕರಿಸಿ ಕಾರ್ಯಕ್ರಮ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.