ಕಲಬುರಗಿ: ನಗರದ ಗೋದುತಾಯಿ ಮಹಿಳಾ ಮಹಾವಿದ್ಯಾಲಯದಲ್ಲಿ ನಾಲ್ಕುಚಕ್ರ ಚಾರಿಟೇಬಲ್ ಟ್ರಸ್ಟ್ ಕಲಬುರಗಿ ಛಪ್ಪರಬಂದಿ ಪ್ರಭಾಕರ್ ಫ಼ೌಂಡೇಶನ್ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ ಇವರಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತರಾದ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಣಿ ಶರಣಬಸಪ್ಪ ಅಪ್ಪ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಮಹಿಳಾ ದಿನಾಚರಣೆ ಅಂಗವಾಗಿ ಸಾಧಕ ಮಹಿಳೆಯರಿಗೆ ನಾರಿಶಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಾಧಕರಾದಂತ ಶೃತಿ ವೆಂಕಟೇಶಲು ವೈದ್ಯಕೀಯ ಕ್ಷೇತ್ರ, ಡಾ ಪುಟ್ಟಮಣಿ ದೇವಿದಾಸ್ ಸಾಹಿತ್ಯ ಕ್ಷೇತ್ರ, ಡಾ ಗೀತಾ ಪಾಟೀಲ್ ಶಿಕ್ಷಣ ಕ್ಷೇತ್ರ, ಭಾರತಿ ಪಾಟೀಲ್ ಸಮಾಜ ಸೇವೆ, ಶಿತಲ್ ಗಿಲ್ಡಾ ಉದ್ಯಮ ಕ್ಷೇತ್ರ, ಮಹಾನಂದಾ ಪಾಟೀಲ್ ಕೃಷಿ ಕ್ಷೇತ್ರ, ಆರ್ ಜಿ ನಾಗೇಶ್ವರಿ ಕದಮ್ ಮಾಧ್ಯಮ ಕ್ಷೇತ್ರ, ಭವಾನಿ ಕಡ್ಲೂರು ವಿಡಿಯೋ ಕ್ರೀಯೆಟರ್ ಈ ಎಲ್ಲಾ ಕ್ಶೇತ್ರದ ಸಾಧಕಿಯರಿಗೆ ನಾರಿಶಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು..
ಕಾರ್ಯಕ್ರಮದ ಸ್ವಾಗತ ಭಾಷಣ ಶರಣರಾಜ್ ಛಪ್ಪರಬಂದಿ, ನಿರೂಪಣೆ ಆರ್ ಜೆ ನಾಗೇಶ್ವರಿ ಕದಮ್ ಹಾಗೂ ವಂದನಾರ್ಪಣೆ ಕಲ್ಯಾಣರಾವ್ ಪಾಟೀಲ್ ಕಣ್ಣಿ ಮಾಡಿದರು..
ಈ ಸಂದರ್ಭದಲ್ಲಿ ಜಾನಕಿ ಹೊಸುರಕರ್ ಪ್ರಾಂಶುಪಾಲರು ಗೋದುತಾಯಿ ಮಹಿಳಾ ಮಹಾವಿದ್ಯಾಲಯ, ಬಿ ಎಡ್ ಕಾಲೇಜಿನ ಪ್ರಾಂಶುಪಾಲರಾದ ಕಲ್ಪನಾ ಭಿಮಳ್ಳಿ, ಛಪ್ಪರಬಂದಿ ಪ್ರಭಾಕರ ಫ಼ೌಂಡೇಶನ್ ಅಧ್ಯಕ್ಷರಾದ ಸುವರ್ಣಾ ಛಪ್ಪರಬಂದಿ, ನಾಲ್ಕುಚಕ್ರ ಮುಖ್ಯಸ್ಥರಾದ ಕಲ್ಯಾಣರಾವ ಪಾಟೀಲ ಕಣ್ಣಿ, ಮಹೇಶಚಂದ್ರ ಪಾಟೀಲ ಕಣ್ಣಿ, ಸದಸ್ಯರುಗಳಾದ ವಿಜಯಲಕ್ಷ್ಮಿ ಹಿರೇಮಠ, ರಾಹುಲ್ ರಾಥೋಡ್,ಅನಂದತೀರ್ಥ ಜೋಶಿ, ಪೂರ್ಣಿಮಾ ಕುಲಕರ್ಣಿ, ಜಯಶ್ರೀ ಜೈನ,ಲಿಂಗರಾಜ ಡಾ0ಗೆ, ಸುಭಾಷ್ ಮೈತ್ರೆ, ಅನ್ನಪೂರ್ಣ ಸಂಗೊಳಗಿ, ಸುಧಾರಾಣಿ, ನಿರ್ಮಲ ಮುತ್ತಿನ, ಸುಮಂಗಲ ಚಕ್ರವರ್ತಿ, ಶೀಲಾ ಕಲಬುರ್ಗಿ, ವಿಶ್ವನಾಥ ಗೌನಳ್ಳಿ, ಕಲ್ಯಾಣರಾವ ಶೀಲವಂತ, ಪ್ರಭುಲಿಂಗ ಮೂಲಗೆ, ಮಲ್ಲಿಕಾರ್ಜುನ್ ಡೊಣ್ಣೂರ, ಶಿವ ಜೀ ಕೃಷ್ಣ, ಸಿದ್ಧಲಿಂಗಪ್ಪ ಮಲಶೆಟ್ಟೆ, ಬಸವಂತರಾಯ ಕೊಳಕುರ, ಶಿವಾನಂದ ಮಠಪತಿ ಕಾಲೇಜಿನ ಪ್ರಾಧ್ಯಾಪಕರು, ಉಪನ್ಯಾಸಕರು, ಹಾಗೂ ವಿದಾರ್ಥಿಗಳು ಉಪಸ್ಥಿತರಿದ್ದರು.