ಅಭ್ಯುದೇಯ ಪತ್ರಿಕೋದ್ಯಮಕ್ಕೆ ಒತ್ತು ನೀಡಿ: ಸದಾನಂದ ಪೇರ್ಲಾ

0
45

ಕಲಬುರಗಿ: ಪತ್ರಕರ್ತನಿಗೆ ಅಂತರದೃಷ್ಟಿ ಇದ್ದಾಗ, ಸಮಾಜಮುಖಿ ಸುದ್ದಿ ಸೃಷ್ಠಿಸಲು ಸಾಧ್ಯವಾಗುತ್ತದೆ. ಯುವ ಪತ್ರಕರ್ತರು ಅಭ್ಯುದೇಯ ಪತ್ರಿಕೋದ್ಯಮಕ್ಕೆ ಹೆಚ್ಚು ಒತ್ತು ನೀಡಬೇಕು. ಒಂದು ಸಮಸ್ಯೆ ಬಗ್ಗೆ ಸುದ್ದಿ ಬರೆದರೆ, ಸಮಸ್ಯೆ ಪರಿಹಾರವಾಗುವ ತನಕ ಆ ಸಮಸ್ಯೆಯ ಮುಂದುವರೆದ ಹಂತವನ್ನು ವರದಿ ಮಾಡಬೇಕು ಎಂದು ಕಲಬುರಗಿ ಆಕಾಶವಾಣಿಯ ಪ್ರೊಗ್ರಾಮ್ ಎಕ್ಸಕ್ಯೂಟರ್ ಸದಾನಂದ ಪೇರ್ಲಾ ಸಲಹೆ ನೀಡಿದರು.

ನಗರದ ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಥಮ ಸೆಮೆಸ್ಟರ್ ವಿದ್ಯಾರ್ಥಿಗಳ ಸ್ವಾಗತಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಹಿರಿಯ ಪತ್ರಕರ್ತರು ಪತ್ರಿಕಾರಂಗವನ್ನು ಭವಿಷ್ಯದ ದೃಷ್ಟಿಯಿಂದ, ಉದ್ಯೋಗದ ದೃಷ್ಟಿಯಿಂದ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ ಪ್ರಸ್ತುತ ಸಮಾಜದಲ್ಲಿ ಪತ್ರಿಕೋದ್ಯಮ ಕ್ಷೇತ್ರವನ್ನು ಇಷ್ಟ ಪಟ್ಟು ಆಯ್ಕೆ ಮಾಡಿಕೊಂಡು ಸೇರಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಸತ್ಯ ನಿಷ್ಠೆ, ಶ್ರದ್ಧೆಯಿಂದ ಕಾರ್ಯನಿರ್ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

Contact Your\'s Advertisement; 9902492681

ಜನರ ಹಕ್ಕು ಕರ್ತವ್ಯ ಮತ್ತು ದೀನ ದಲಿತರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮಗಳು ಸಮಾಜದಲ್ಲಿ ಪ್ರಜಾಪ್ರಭುತ್ವ ಕಾಪಾಡುವಂತಹ ಜವಾಬ್ದಾರಿಯುತ ಕಾರ್ಯನಿರ್ವಹಿಸುತ್ತಿವೆ ಪತ್ರಕರ್ತರು ಅಧ್ಯಯನ ಶೀಲರಾಗಬೇಕು. ಸಂಶೋಧನಾ ಪ್ರವೃತ್ತಿ ಬೆಳಸಿಕೊಳ್ಳಬೇಕು. ಪ್ರತಿಯೊಂದು ಕ್ಷೇತ್ರದ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಅಧ್ಯಯನದ ಹಂಬಲ ಬೆಳಸಿಕೊಳ್ಳಬೇಕು ಅದೇ ರೀತಿ ಸಮಾದಲ್ಲಿಯ ಎಡ-ಬಲ ಮಾರ್ಗವನ್ನು ಅನುಸರಿಸದೇ ಮಧ್ಯಮ ಮಾರ್ಗ ಅನುಸರಿಸಿ ಕರ್ತವ್ಯ ನಿರ್ವಹಿಸಬೇಕು. ಅಂದಾಗ ಮಾತ್ರ ಸಮಾಜಕ್ಕೆ ನ್ಯಾಯಯುತವಾದ ವರದಿ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ವಿವಿ ಕುಲಸಚಿವ ಡಾ. ಅನೀಲ ಕುಮಾರ ಬಿಡವೆ ಮಾತನಾಡಿ, ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರಿಗೆ ಪತ್ರಿಕೋದ್ಯಮ ವಿಭಾಗದ ಬಗ್ಗೆ ಹೆಚ್ಚಿನ ಒಲವು ಇದೆ. ವಿದ್ಯಾರ್ಥಿಗಳ ಅಧ್ಯಯನದ ದೃಷ್ಠಿಯಿಂದ ಸಂಸ್ಥೆ ಒದಗಿಸಿದ ಸೌಲಭ್ಯಗಳನ್ನು ಸಮರ್ಪಕವಾಗಿ ವಿದ್ಯಾರ್ಥಿಗಳು ಉಪಯೋಗಿಸಿಕೊಂಡು, ಪ್ರಬುದ್ಧ ಪತ್ರಕರ್ತರಾಗಿ ಬೆಳೆಯಬೇಕು. ಅಂದಾಗ ಸಂಸ್ಥೆಗೆ ಕೀರ್ತಿ ಬರುತ್ತದೆ ಎಂದು ಹೇಳಿದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಟಿ.ವಿ. ಶಿವಾನಂದನ್ ಮಾತನಾಡಿ, ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ಸೌಕರ್ಯವಿದೆ. ವಿದ್ಯಾರ್ಥಿಗಳು ಕಾಲಹರಣ ಮಾಡದೆ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಂ.ಎಸ್ ಪಾಟೀಲ, ಆಂಗ್ಲ ವಿಭಾಗದ ಮುಖ್ಯಸ್ಥ ಡಾ. ಎಲೆನೋರಾ ಗೀತಮಾಲಾ, ಡಾ. ಸಾರೀಕಾದೇವಿ ಕಾಳಗಿ, ಡಾ. ಪ್ರಭಾವತಿ ಚಿತ್ತಕೋಟಿ, ಡಾ.ಸುಮಂಗಲಾ ರೆಡ್ಡಿ, ಡಾ.ನಾನಾಸಾಹೇಬ್, ಡಾ. ಚಿದಾನಂದ ಚಿಕ್ಕಮಠ, ಪ್ರೊ.ಸುನಿತಾ ಪಾಟೀಲ, ಪ್ರೊ.ನಿರ್ಮಲಾ ದೋರೆ, ಪ್ರೊ ಅಶ್ವಿನಿ ರೆಡ್ಡಿ, ಪ್ರೊ. ಸಾಯಿಬಣ್ಣ ಗುಡುಬಾ, ಪ್ರೊ ಅಶೋಕ ಪಾಟೀಲ, ಬಸವರಾಜ ಇದ್ದರು.

ಕು. ಗೀತಾ ಮತ್ತು ಉಮಾಶ್ರೀ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ದಸ್ತಗೀರ್ ನದಾಫ್ ಸ್ವಾಗತಿಸಿದರು. ಕು. ಸಿದ್ದಮ್ಮ ವಂದಿಸಿದರು. ಪ್ರಥಮ ಸೆಮೆಸ್ಟರ್ ವಿದ್ಯಾರ್ಥಿಗಳಾದ ಕಾಶಿಬಾಯಿ, ಚಂದ್ರಶಾ ಅನಿಸಿಕೆ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here