ಸ್ವಾತಂತ್ರ್ಯ ಹೋರಾಟದಲ್ಲಿ ಉನ್ನತ ವೈಚಾರಿಕತೆಯ ಚೈತನ್ಯ ನೀಡಿದವರು ಭಗತ್ ಸಿಂಗ್

0
19

ವಾಡಿ: ಭಗತ್ ಸಿಂಗ್ ರವರ ಹುತಾತ್ಮ ದಿನದ ಅಂಗವಾಗಿ ಇಂದು ಚಿತ್ತಾಪುರ ತಾಲೂಕಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಯಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ಹೋರಾಟದ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ಹುತಾತ್ಮ ದಿನ ಕಾರ್ಯಕ್ರಮದಲ್ಲಿ ಭಾಷಣಕಾರರಾಗಿ ಎಐಡಿಎಸ್ಓ ಜಿಲ್ಲಾ ಖಜಾಂಚಿ ವೆಂಕಟೇಶ ದೇವದುರ್ಗ ಮಾತನಾಡಿದರು.

ಬಾಲ್ಯದಲ್ಲಿಯೇ ದೇಶದ ಸ್ವಾತಂತ್ರ್ಯಕ್ಕಾಗಿ ಕೆಲಸ ಮಾಡಬೇಕೆಂಬ ಹಂಬಲದಿಂದ ಭಗತ್ ಸಿಂಗ್ ಬೆಳೆದರು. ಸ್ವಾತಂತ್ರ್ಯವು ಕೇವಲ ಬ್ರಿಟೀಷರಿಂದ ಪಡೆದರೆ ಸಾಲದು! ಅದು ಭಾರತದ ಶೋಷಣೆಗೊಳಗಾದ ರೈತರು, ಕಾರ್ಮಿಕರು, ಮಹಿಳೆಯರ ನಿಜವಾದ ವಿಮುಕ್ತಿಯು ನೀಡಲಾರದು. ಮಾನವನಿಂದ ಮಾನವನ ಎಲ್ಲ ರೀತಿಯ ಶೋಷಣೆಯನ್ನು ಕೊನೆಗಾಣುವುದು ಸಮಾಜವಾದಿ ಕ್ರಾಂತಿಯಲ್ಲಿ ಮಾತ್ರವೆಂದು ಕಂಡುಕೊಂಡರು. ವೈಚಾರಿಕವಾಗಿ ಮತ್ತು ಸಂಘಟನಾತ್ಮಕವಾಗಿ ಬ್ರಿಟಿಷರ ಒಡೆದು ಹಾಳುವ ನೀತಿಯ ವಿರುದ್ಧ ರಾಜಿ ಇಲ್ಲದೆ ಹೋರಾಟವನ್ನು ಮುನ್ನಡೆಸಿದವರು ಭಗತ್ ಸಿಂಗ್.

Contact Your\'s Advertisement; 9902492681

ಹಿಂದುಸ್ತಾನ್ ಸೋಶಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ (ಊSಖಂ) ಸಂಘಟನೆಗೆ ನಾಯಕತ್ವ ನೀಡಿ, ದೇಶದ ಸ್ವಾತಂತ್ರ್ಯಕ್ಕಾಗಿ ವಿದ್ಯಾರ್ಥಿ-ಯುವಕರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹತ್ತಿಸಿದರು. ಕ್ರಾಂತಿಕಾರಿಗಳ ರಾಜಿ ರಹಿತ ಹೋರಾಟಕ್ಕೆ ಭಯಭೀತರಾದ ಬ್ರಿಟಿಷ್ ಸರ್ಕಾರವು ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರನ್ನು ಮಾರ್ಚ್ 23, 1931 ರಂದು ಗಲ್ಲಿಗೇರಿಸಿದರು. ನಗುನಗುತ್ತಲೇ ಬ್ರಿಟಿಷರ ಗಲ್ಲುಗಂಬಕ್ಕೆ ಮುತ್ತಿಟ್ಟು ಹುತಾತ್ಮರಾದ ಈ ಚೇತನಗಳು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಯುವಕರು ಹೇಗೆ ಪ್ರಾಣ ತ್ಯಾಗ ಮಾಡಬೇಕೆಂಬುದು ತೋರಿಸಿಕೊಟ್ಟಿದ್ದಾರೆ.

ಇಂತಹ ಮಹಾನ್ ವ್ಯಕ್ತಿಗಳ ತ್ಯಾಗದಿಂದ ಪಡೆದ ಸ್ವಾತಂತ್ರ್ಯವು ಇಂದು ಕೆಲವೇ ಕೆಲವು ಕಾರ್ಪೊರೇಟ್ ಮನೆತನಗಳ ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಪಾಲಾಗಿದೆ. ದೇಶದ ದುಡಿಯುವ ವರ್ಗ, ಮಧ್ಯಮ ವರ್ಗ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಬಡವರು ಮತ್ತು ಕೆಳ ಮಧ್ಯಮ ವರ್ಗದ ಜನರು ತಮ್ಮ ಮಕ್ಕಳಿಗೆ ಶಿಕ್ಷಣ-ಆರೋಗ್ಯ ಕೊಡಲಾಗುತ್ತಿಲ್ಲ. ನಿರುದ್ಯೋಗ, ಬಡತನ, ಅಪೌಷ್ಟಿಕತೆ ಮತ್ತು ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದಾರೆ. ನಮ್ಮನ್ನಾಳುತ್ತಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜನರ ಸಂಕಷ್ಟಗಳಿಗೆ ಕಿವಿಗೊಡದೆ, ಜನರನ್ನು ಧರ್ಮ-ಜಾತಿ-ಪ್ರಾಂತೀಯ ಹೆಸರಿನಲ್ಲಿ ಒಡೆದು ಆಳುವ ನೀತಿಯಲ್ಲಿ ಮಗ್ನರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಭಗತ್ ಸಿಂಗರ್ ಕಂಡಂತಹ ಕನಸಿನ ಭಾರತ ಕಟ್ಟಲು ವಿದ್ಯಾರ್ಥಿ ಯುವಕರು ಮುನ್ನುಗ್ಗಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಎಐಡಿವೈಓ ಚಿತ್ತಾಪುರ ತಾಲೂಕು ಸಂಚಾಲಕರಾದ ಗೌತಮ ಪರತೂರಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಇಂದಿನ ನಮ್ಮ ದೇಶದ ಪರಿಸ್ಥಿತಿಯಲ್ಲಿ ಅಧಿಕಾರಕ್ಕೆ ಬರುವಂತಹ ಎಲ್ಲಾ ಸರ್ಕಾರಗಳು ಯಾವುದೇ ಅಡೆತಡೆ ಇಲ್ಲದೆ ಅಶ್ಲೀಲ ಸಿನಿಮಾ ಸಾಹಿತ್ಯಗಳನ್ನು ಅರೆ ಬಿಟ್ಟು ಯುವಕರ ದಾರಿ ತಪ್ಪಿಸುತ್ತಿವೆ. ಇದರಿಂದಾಗಿ ಇಡಿ ಸಮಾಜ ಸಾಂಸ್ಕೃತಿಕ ಅಧಃಪತನಕ್ಕೆ ಒಳಗಾಗುತ್ತಿದೆ. ಶಿಕ್ಷಣವು ಉಳ್ಳವರ ಪಾಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಸಂಘಟನೆಗಳು ಇಂದು ದೇಶದಾದ್ಯಂತ ಇಂತಹ ಮಹಾನ್ ವ್ಯಕ್ತಿಗಳ ವಿಚಾರದೊಂದಿಗೆ ಉನ್ನತ ಮೌಲ್ಯಗಳನ್ನು ಬೆಳೆಸಲು ಮುನ್ನುಗ್ಗುತ್ತಿದೆ ಎಂದು ಹೇಳಿದರು.

ಕಾಲೇಜಿನ ಕಿರಿಯ ತರಬೇತಿ ಅಧಿಕಾರಿ ಬಸವರಾಜ ಅವರು ಅಧ್ಯಕ್ಷತೆ ವಹಿಸಿದ್ದರು. ಗುಂಡೇರಾವ್ ಸ್ವಾಗತ ಭಾಷಣ ಮಾಡಿದರು, ಅತಿಥಿ ಬೋಧಕರಾದ ಅನ್ವರಖಾನ್ ನೀರೂಪಿಸಿದರು. ಸುಧಿರ ವಂದನಾರ್ಪಣೆ ಮಾಡಿದರು. ಪ್ರಥಮ ದರ್ಜೆ ಸಹಾಯಕರಾದ ಸಂತೋಷ್ ಹಾಗೂ ಎಐಡಿಎಸ್ಓ ಜಿಲ್ಲಾ ಸಮಿತಿ ಸದಸ್ಯರಾದ ಸಿದ್ದಾರ್ಥ್ ತಿಪ್ಪನೋರ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here