ಕಲಬುರಗಿ: ಮೇ 7 ರಂದು ನಡೆಯುವ ಕಲಬುರಗಿ (ಮೀಸಲು) ಲೋಕಸಭಾ ಕ್ಷೇತ್ರದ ಚುನಾವಣೆಯ ಅಂಗವಾಗಿ ಭಾನುವಾರ (ಮಾ.31) ಬೆಳಗ್ಗೆ 11 ಗಂಟೆಗೆ ಕಮಲಾಪೂರ ಪಟ್ಟಣದ ಕೋಹಿನೂರ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಕಮಲಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವೈಜನಾಥ ತಡಕಲ್ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಆಗಮಿಸುವರು. ಈ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲೆಯ ಹಾಲಿ ಹಾಗೂ ಮಾಜಿ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿ ಅಧ್ಯಕ್ಷರು ಮತ್ತು ಕಮಲಾಪೂರ ಹಾಗೂ ಶಹಾಬಾದ ಬ್ಲಾಕ್ ಕಾಂಗ್ರೆಸ್ ಸಮಿತಿ ಮುಖಂಡರು, ಕಾರ್ಯಕರ್ತರು, ಮಹಿಳೆಯವರು, ಯುವಕರು ಹಾಗೂ ಪಕ್ಷದಿಂದ ಎಲ್ಲಾ ಚುನಾಯಿತರಾದ ಹಾಲಿ ಹಾಗೂ ಮಾಜಿ ಸದಸ್ಯರುಗಳು ಭಾಗವಹಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಹಾಬಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಡಾ. ಎಂ.ಎ. ರಸೀದ್, ರೇವುನಾಯಕ ಬೆಳಮಗಿ, ಸೋಮಶೇಖರ ಗೋನಾಯಕ, ಮಲ್ಲಿನಾಥ ಪಾಟೀಲ ಸೊಂತ, ಆನಂದ ಪಾಟೀಲ ಸರಡಗಿ, ಶರಣಗೌಡ ಪಾಟೀಲ, ಬಲರಾಮ ಪೂಜಾರಿ ಇತರರಿದ್ದರು.