ಯಶಸ್ವಿಯಾದ ವಿಶ್ವ ರಂಗ ಭೂಮಿ ದಿನಾಚರಣೆ

0
26

ಕಲಬುರಗಿ: ವಿಶ್ವ ರಂಗ ನಾಟಕ ಮತ್ತು ನೃತ್ಯ ಸೇವಾ ಸಂಘವು, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿಶ್ವ ರಂಗ ಭೂಮಿ ದಿನಾಚರಣೆಯನ್ನು ಹಮ್ಮಿಕೊಂಡಿದ್ದು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ರಂಗ ಗಣ್ಯರನ್ನು ವೇದಿಕೆಗೆ ಆಹ್ವಾನಿಸಲಾಯಿತು. ಶ್ರೀಧರ ಹೊಸಮನಿ ಅವರ ರಂಗ ಗೀತೆಗಳ ಗಾಯನ ಪ್ರೇಕ್ಷಕರ ಮನಸ್ಸಿಗೆ ಮುದನೀಡುವಂತೆ ಸುಶ್ರಾವ್ಯವಾಗಿ ಹಾಡಿದರು. ಅವರ ಸಂಗೀತ ಗಾಯನಕ್ಕೆ ಮನ ಸೋತು ಮೆಚ್ಚಿ ಆಯೇರಿ ಕೂಡ ಮಾಡಿದರು. ಅವರನ್ನು ಪುಸ್ತಕ ಮತ್ತು ಪುಪ್ಷ ನೀಡಿ ಗೌರವಿಸಿದವಿಶ್ವ ರಂಗ ತಂಡದ ಸಂಸ್ಥಾಪಕ ಡಾ. ವಿಶ್ವರಾಜ್ ಪಾಟೀಲ್ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಕಲಬುರಗಿಯಲ್ಲಿ ರಂಗಭೂಮಿಯವರು ಮಾಡಬೇಕಾದ ಕೆಲಸ ಕಾರ್ಯಗಳು ಹಾಗೂ ಜವಾಬ್ದಾರಿಗಳ ಕುರಿತು ಮಾತನಾಡುತ್ತ, ರಂಗ ಭೂಮಿ ಕಲಾವಿದರ ಬದುಕಿನ ಆತಂಕ, ತಲ್ಲಣಗಳನ್ನು ಮಾರ್ಮಿಕವಾಗಿ ವಿವರಿಸಿದರು.

Contact Your\'s Advertisement; 9902492681

ಹದಿನೈದು ವರ್ಷಗಳಿಂದ ಕಲಬುರಗಿ ಭಾಗದಲ್ಲಿ ವಿಶ್ವರಂಗ ತಂಡದ ಕೆಲಸ ಕಾರ್ಯಗಳನ್ನು ಮೆಲುಕು ಹಾಕಿದರು. ರಂಗ ಗಣ್ಯರಿಗೆ ಸ್ವಾಗತಕೋರಿದರು. ನಂತರ ಡಾ. ಸುಜಾತ ಜಂಗಮಶೆಟ್ಟಿ ಅವರು ಜಾನ ಫೆÇೀಸ್ಸೆ ಅವರ ವಿಶ್ವ ರಂಗ ಭೂಮಿ ಸಂದೇಶವನ್ನು ಓದಿ “ನಾನು ಹೇಳು ವುದಿಷ್ಟೇ ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ದ ಧ್ರುವಗಳಲ್ಲಿ ಇರುವಂತೆ, ಯುದ್ದ ಮತ್ತು ಕಲೆ ಕೂಡ ಪರಸ್ಪರ ವಿರೋಧ ಮುಖಗಳು. ಆದರೆ ಕಲೆಯ ಮೂಲಕ ಯಾರು ಕಾಯಕ ಮಾಡುತ್ತಾರೋ ಅವರು ಶಾಂತಿಯ ಸಾರ್ವತ್ರಿಕ ಪ್ರತಿ ಪಾದಕರಾಗಿನಿಲ್ಲುತ್ತಾರೆ ಎನ್ನುವುದು ಈಜಗತ್ತಿನ ಬಹುದೊಡ್ಡ ಹಾಗೂ ಸಾರ್ವತ್ರಿಕ ಸತ್ಯವಾಗಿದೆ” ಎಂದು ಸಂದೇಶದ ಸಾರದಕುರಿತು ಸವಿವರವಾಗಿ ಮಾತನಾಡಿದರು.

ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ರಂಗ ಕರ್ಮಿ ಶ್ರೀಹೆಚ್. ಎಸ್ ಬಸವಪ್ರಭು ಅವರು ಮಾಡಿದರು. ದೀಪ ಹೇಗೆ ತನ್ನನ್ನು ತಾನು ಸುಟ್ಟು ಕೊಂಡು ಇತರರಿಗೆ ಬೆಳಕುನೀಡುತ್ತದೇಯೋ ಹಾಗೇನೆ ಒಬ್ಬರಂಗ ಕರ್ಮಿಯೂಕೂಡ ತನ್ನಲ್ಲಿರುವ ಕಷ್ಟನಷ್ಟಗಳನ್ನು ಬದಿ ಕೊತ್ತಿ ಸಮಾಜಕ್ಕೆ ನಟನೆ/ನಾಟಕದ ಮೂಲಕ ಒಳ್ಳೆಯ ಸಂದೇಶವನ್ನು ನೀಡುತ್ತಾನೆ. ಎಲ್ಲಾ ಧರ್ಮಕ್ಕಿಂತ ಶ್ರೇಷ್ಠವಾದದ್ದು ಪ್ರೀತಿ ಮತ್ತು ಮಾನವೀಯತೆ ಎಂದು ವಿವರಿಸುತ್ತಾ ನಾವು ಮನುಷ್ಯರಷ್ಟೇ ಆಗಿದ್ದೀವಿ ಮಾನವರಾಗಬೇಕಾಗಿದೆ ಎಂಬ ಹಿತದ ನುಡಿಯನ್ನಾಡಿದರು. ನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ ರಂಗ ಸಂಘಟಕರಾದ ಡಾ. ಕೆ. ಲಿಂಗಪ್ಪ ಅವರು ಕಾರ್ಯಕ್ರಮದ ಸಂಘಟನೆ, ರಂಗ ಸಂಘಟನೆ, ನಾಟಕೋತ್ಸವ ಆಯೋಜನೆಯ ಕುರಿತು ಈಗೀನ ಪೀಳಿಗೆಗೆ ಮಾರ್ಗದರ್ಶನ ಮಾಡಿದರು. ನಂತರ ಕನ್ನಡ ಸಾಹಿತ್ಯ ಪರಿಷತ್ತಿ ಗೌರವ ಕಾರ್ಯದರ್ಶಿ ಶಿವರಾಜ್ ಅಂಗಡಿಯವರು ರಂಗ ಕಾಯಕ ಶ್ರೇಷ್ಠ ಕಾಯಕ, ಕಷ ್ಟದಾಯಕ ಎಂದು ರಂಗ ಭೂಮಿ ಸ್ಥಿತಿಗತಿ ಮತ್ತು ಕಲಾವಿದ ಪರಿಸ್ಥಿತಿ ಕುರಿತು ಮಾತನಾಡಿದರು.

ಕೊನೆಯಲ್ಲಿ ವಿಶ್ವರಂಗ ತಂಡದ ನೂತನ ಅದ್ಯಕ್ಷರಾದ ನೀತಾ ಪಾಟೀಲ್ ಅವರು ರಂಗ ಗಣ್ಯರಿಗೆ ಮತ್ತು ಸಹಕಾರ ಕೊಟ್ಟ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಹಾಗೂ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದರು.

ನಂತರದಲ್ಲಿ ಕುಮಾರಿ ಯೋಗಿತಾ ಮತ್ತು ಕರುಣಾ ಅವರಿಂದ ಭರತ ನಾಟ್ಯ ಪ್ರದರ್ಶಿಸಲಾಯಿತು. ಡಾ. ವಿಶ್ವರಾಜ್ ಪಾಟೀಲ್ ಅವರ ರಚನೆ ಮತ್ತುನಿರ್ದೇಶನದ ಅವ್ಯಕ್ತ ನಾಟಕ ಪ್ರದರ್ಶನಗೊಂಡಿತು. ಸಮೀರ್ ಸುಬೇದಾರ್ ಅಭಿನಯಿಸಿದ ಈ ನಾಟಕಕ್ಕೆ ಚಂದ್ರಕಾಂತ ಕುಮ್ಮನ್ ಅವರು ಸಂಗೀತ ನೀಡಿದರು.

ಈ ಕಾರ್ಯಕ್ರಮದನಿರೂಪಣೆ ಅಕ್ಷತಾ ಕುಲಕರ್ಣಿ ಅವರು ಪ್ರಬುದ್ದವಾಗಿ ತನ್ನ ಮಾತಿನ ಚಾಕೆ ಚಕ್ಯತೆ ಯಿಂದ ಕಾರ್ಯಕ್ರಮವನ್ನು ನಿರ್ವಹಿಸಿ ಮೆರಗು ತಂಡುಕೊಟ್ಟರು. ಕೊನೆಯಲ್ಲಿ ಎಲ್ಲಾ ಕಲಾವಿದರಿಗೆ ಡಾ. ವಿಶ್ವರಾಜ್ ಪಾಟೀಲವರು ಗೌರವಿಸಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿ ಗೂಧನ್ಯವಾದ ಕೋರಿದರು. ಅನೇಕ ಕಲಾವಿದರು, ರಂಗ ನಿರ್ದೇಶಕರು, ಸಂಘಟಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here