ಕಾಂಗ್ರೆಸ್ ನ ಮ್ಯಾಚ್ ಫಿಕ್ಸಿಂಗ್ ಇನ್ನು ಅಂತ್ಯ: ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್

0
81

ಕಲಬುರಗಿ: ಕಾಂಗ್ರೆಸ್ ಈವರೆಗೆ ಮ್ಯಾಚ್ ಫಿಕ್ಸಿಂಗ್ ಮಾಡಿ ಎಲ್ಲ ಚುನಾವಣೆಗಳನ್ನು ಗೆಲ್ಲುತ್ತಿತ್ತು. ಇನ್ನು ಮುಂದೆ ಅಂತಹ ನಾಟಕ ನಡೆಯುವುದಿಲ್ಲ. ಜೆಡಿಎಸ್ ಪಕ್ಷ ಬಿಜೆಪಿಯ ಜೊತೆ ಕೈಜೋಡಿಸಿ ದೊಡ್ಡ ಶಕ್ತಿಯಾಗಿ ಕಲ್ಬುರ್ಗಿಯಲ್ಲಿ ಚುನಾವಣೆಯನ್ನು ಎದುರಿಸಲಿದೆ ಎಂದು ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರವರು ಹೇಳಿದರು.

ನಗರದ ಶಹಬಜಾರ್ ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪ್ರತಿ ಚುನಾವಣೆಯಲ್ಲಿ ದುಡ್ಡು ಹಂಚಿ ಮತದಾರರನ್ನು ಖರೀದಿ ಮಾಡುತ್ತಿತ್ತು ಮತ್ತು ಮ್ಯಾಚ್ ಫಿಕ್ಸಿಂಗ್ ಮಾಡುವುದರ ಮೂಲಕ ಚುನಾವಣೆಗಳನ್ನು ಗೆಲ್ಲುತ್ತಿತ್ತು. ಇನ್ನು ಮುಂದೆ ಆ ಎಲ್ಲಾ ಅಡ್ಡದಾರಿಗಳಿಗೆ ಅಂತ್ಯ ಹಾಡಿ, ಬಿಜೆಪಿಯು ಅದ್ಭುತ ಗೆಲುವನ್ನು ಕಲಬುರಗಿಯಲ್ಲಿ ಮತ್ತೊಮ್ಮೆ ಸಾಬೀತು ಮಾಡಲಿದೆ ಎಂದು ಹೇಳಿದರು.

Contact Your\'s Advertisement; 9902492681

ಕಾಂಗ್ರೆಸ್ಸಿಗೆ ಯಾವುದೇ ಅಭಿವೃದ್ಧಿಯ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲದೆ ಕೇವಲ ವೈಯಕ್ತಿಕ ಟೀಕೆ ಮಾಡಿ ಕಾಲ ಕಳೆಯುತ್ತಿದೆ.ಕಾಂಗ್ರೆಸ್ ನ 60 ವರ್ಷಗಳ ಸಾಧನೆ ಬಗ್ಗೆ ಚರ್ಚೆಗೆ ಆಹ್ವಾನಿಸಿದರೆ ಹಿಂದದೇಟು ಹಾಕುತ್ತಿದೆ. ದೇಶದ ಉತ್ತಮ ಭವಿಷ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ಐದು ವರ್ಷಗಳಲ್ಲಿ ಅದ್ಭುತ ಅಭಿವೃದ್ಧಿ ಸಾಧನೆ ಮಾಡಿದ ಉಮೇಶ್ ಜಾಧವ್ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಭ್ರಷ್ಟಾಚಾರ ಮುಕ್ತ 10 ವರ್ಷಗಳ ಆಡಳಿತ ನೀಡಿದ ಮೋದಿಯವರ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಗದೆ ಅಪಪ್ರಚಾರದಲ್ಲಿ ಕಾಂಗ್ರೆಸ್ ನಿರತವಾಗಿದೆ. ಮತದಾರರು ಇದಕ್ಕೆ ಕಿವಿಗೊಡಬಾರದಾಗಿ ಬಿಜೆಪಿಯ ಗ್ರಾಮೀಣ ಅಧ್ಯಕ್ಷರಾದ ಶಿವರಾಜ ಪಾಟೀಲ್ ರದ್ದೇವಾಡಗಿ ಹೇಳಿದರು.

7 ಲಕ್ಷ ಜನರಿಗೆ ಕುಡಿಯುವ ನೀರು ಕೊಡಲಾಗದ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆಯವರು ಬಿಜೆಪಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸುಳ್ಳು ಮೊಕದ್ದಮೆಗಳನ್ನು ಹಾಕುತ್ತಿರುವುದು ಅವರ ಸೋಲಿನ ಭಯದಿಂದ ಎಂದು ಬಿಜೆಪಿಯ ನಗರ ಅಧ್ಯಕ್ಷರಾದ ಚಂದು ಪಾಟೀಲ್ ಟೀಕಿದರು.

ಮೋದಿಯವರು 360 ಡಿಗ್ರಿಯಲ್ಲಿ ಅಭಿವೃದ್ಧಿಯನ್ನು ಸಾಧಿಸುತ್ತಿದ್ದು ಕಾಂಗ್ರೆಸ್ಸಿಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್ ಹೇಳಿದರು.

ಈ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಅದು ಕೇವಲ “ವಿಕ್ಟರಿ” ಅಲ್ಲ ಅದು “ಹಿಸ್ಟರಿ” ಎಂದು ಮಾಜಿ ಬಿಜೆಪಿ ನಗರ ಅಧ್ಯಕ್ಷ ಪಾಟೀಲ್ ಹೇಳಿದರು.

ಮೇಯರ್ ವಿಶಾಲ್ ದರ್ಗಿ ಉಪಮೇಯರ್ ಶಿವಾನಂದ ಪಿಸ್ತಿ, ಶಿವಾನಂದ ಬಂಡಕ್ ಮತ್ತಿತರರು ಮಾತನಾಡಿದರು. ಕಾರ್ಯಕ್ರಮದಲ್ಲಿ ಶೋಭಾ ಬಾಣಿ,ಸಾವಿತ್ರಿ ಕುಳಗೇರಿ, ಉಮೇಶ್ ಪಾಟೀಲ್, ಅಶೋಕ್ ಮಾನ್ಕರ್, ಶಿವಾನಂದ ಕಣ್ಣಿ, ಮಹೇಶ್ ಪಟ್ಟಣ್ ಮತ್ತಿತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here