ನೂತನ ಗೋಪುರ ಕಳಸಾರೋಹಣ ಎಪ್ರಿಲ್7ಕ್ಕೆ

0
33

ಶಹಾಬಾದ: ತಾಲೂಕಿನ ಭಂಕೂರ ಗ್ರಾಮದ ಪುರಾತನ ರಾಮಲಿಂಗೇಶ್ವರ ದೇವಸ್ಥಾನದ ನೂತನ ಗೋಪುರ ಉದ್ಘಾಟನೆ ಮತ್ತು ಕಳಸಾರೋಹಣ ಕಾರ್ಯಕ್ರಮವು ಎಪ್ರಿಲ್ .7ಕ್ಕೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಈರಣ್ಣ ಕಾರ್ಗಿಲ್ ತಿಳಿಸಿದ್ದಾರೆ.
ನೂತನ ಗೋಪುರ ಉದ್ಘಾಟನೆ ಮತ್ತು ಕಳಸಾರೋಹಣ ನಿಮಿತ್ತ ಸಮಾರಂಭ ಎಪ್ರಿಲ್ 2.3 ರಿಂದ ಪ್ರವಚನ ಪ್ರಾರಂಭವಾಗಿದೆ.

ವೇದಮೂರ್ತಿ ಬಸಯ್ಯ ಶಾಸ್ತ್ರೀ ಅರಳಗುಂಡಗಿ ಅವರಿಂದ ಎಪ್ರಿಲ್ 6ರ ವರೆಗೆ ಸಂಜೆ 7ರಿಂದ 8:30 ವರೆಗೆ ಜೀವನ ದರ್ಶನ ಪ್ರವಚನ ನಡೆಯುತ್ತಲಿದೆ. ಏ.7ರಂದು ಬೆಳಗ್ಗೆ ಮುಗಳನಾಗಾವಿ ಕಟ್ಟಮನಿ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು, ಚಿತ್ತಾಪುರ ಸೋಮಶೇಖರ ಶಿಚಾರ್ಯರು, ರಾವೂರಿನ ಸಿದ್ದಲಿಂಗ ಮಹಾಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಭವ್ಯ ಕಳಸಾರೋಹಣ ನೆರವೇರಲಿದೆ. ನಂತರ ಭಕ್ತರಿಗಾಗಿ ಮಹಾಪ್ರಸಾದ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.

Contact Your\'s Advertisement; 9902492681

ಸದಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಶಶಿಕಾಂತ ಪಾಟೀಲ್ ಭಂಕೂರ : 7019270699, ಉಮೇಶ ಪಾಟೀಲ್ ಭಂಕೂರ – 9448594624

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here