ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು ಚುನಾವಣೆ ಯಶಸ್ಸಿಗೆ ಸಹಕರಿಸಿ

0
11

ಸುರಪುರ:ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಅಂಗವಾಗಿ 06-ರಾಯಚೂರ ಲೋಕಸಭಾ ಕ್ಷೇತ್ರದ ಚುನಾವಣೆ ಅಂಗವಾಗಿ ಸಹಾಯಕ ಚುನಾವಣಾಧಿಕಾರಿಯಾಗಿ ಹಾಗೂ 36-ಸುರಪುರ ವಿಧಾನಸಭಾ ಉಪ ಚುನಾವಣೆ ಅಂಗವಾಗಿ ಚುನಾವಣಾಧಿಕಾರಿಯಾಗಿ ಆಗಮಿಸಿರುವುದಾಗಿ ನೂತನ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಚುನಾವಣಾಧಿಕಾರಿಗಳು ಹಾಗೂ ರಾಯಚೂರ ಲೋಕಸಭಾ ಕ್ಷೇತ್ರದ ಚುನಾವಣೆಯ ಸಹಾಯಕ ಚುನಾವಣಾಧಿಕಾರಿಯಾಗಿ ಆಗಮಿಸಿರುವ ಕಾವ್ಯಾರಾಣಿ ಮಾತನಾಡಿದರು.

ನಗರದ ತಹಸಿಲ್ದಾರ್ ಕಚೇರಿಯಲ್ಲಿ ಆರಂಭಿಸಲಾಗಿರುವ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ವಿಧಾನಸಭಾ ಉಪ ಚುನಾವಣೆಗೆ ಏಪ್ರಿಲ್ 14 ರಂದು ಅಧಿಸೂಚನೆ ಹೊರಡಿಸಲಾಗುವುದು,ನಾಮಪತ್ರ ಸಲ್ಲಿಸಲು ಏಪ್ರಿಲ್ 19 ಕೊನೆಯ ದಿನವಾಗಿದೆ,20 ರಂದು ನಾಮಪತ್ರಗಳ ಪರಿಶೀಲನೆ,22 ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆ ದಿನವಾಗಿದ್ದು ಮೇ 7ರಂದು ಚುನಾವಣೆ ನಡೆಯಲಿದ್ದು,ಜೂನ್ 4ಕ್ಕೆ ಮತ ಎಣಿಕೆ ಹಾಗೂ ಜೂನ್ 6ಕ್ಕೆ ಚುನಾವಣೆ ಪ್ರಕಿಯೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಅಲ್ಲದೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಸಂಬಂಧ ಮಾದರಿ ನೀತಿಸಂಹಿತೆ ಅನುಷ್ಠಾನಗೊಳಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು ತಾ.ಪಂ ಇಓ ಬಸವರಾಜ ಸಜ್ಜನ್,ಡಿವೈಎಸ್ಪಿ ಜಾವಿದ್ ಇನಾಂದಾರ್ ಇರಲಿದ್ದಾರೆ,ಚುನಾವಣಾ ಅಕ್ರಮ ತಡೆಯಲು,ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಬಂಡೊಳ್ಳಿ,ನಾರಾಯಣಪುರ,ಮಾಳನೂರ ಹಾಗೂ ಹಗರಟಗಿಯಲ್ಲಿ ಚೆಕ್‍ಪೋಸ್ಟ್ ಆರಂಭಿಸಲಾಗಿದೆ.ಚುನಾವಣಾ ವೆಚ್ಚ ವೀಕ್ಷಣೆಗೆ ತಂಡಗಳನ್ನು ನೇಮಿಸಲಾಗಿದ್ದು ಫ್ಲೈಯಿಂಗ್ ಸ್ಕ್ವಾಡ್,ಸ್ಟ್ಯಾಟಿಸ್ಟಿಕ್ ಸರ್ವೇಲೆಷನ್ ಟೀಂ,ವೀಡಿಯೋ ಸರ್ವೇಲೇಷನ್,ವೀಡಿಯೋ ವೀವಿಂಗ್ ಟೀಂ,ಸೆಕ್ಟರ್ ಆಫಿಸರ್ಸ್ ಹಾಗೂ ಅಕೌಂಟಿಂಗ್ ಟೀಂ ಇರಲಿದೆ ಎಂದರು.ಅಲ್ಲದೆ ಸುರಪುರ ವಿಧಾನಸಭಾ ಕ್ಷೇತ್ರದಾದ್ಯಂತ ಒಟ್ಟು 317 ಮತಗಟ್ಟೆ ಕೇಂದ್ರಗಳನ್ನು ನೇಮಿಸಲಾಗಿದೆ,281869 ಒಟ್ಟು ಮತದಾರರಿದ್ದು,141858 ಪುರುಷ,139983 ಮಹಿಳಾ ಮತ್ತು 28 ಜನ ಇತರೆ ಮತದಾರರಿದ್ದಾರೆ ಎಂದು ತಿಳಿಸಿದರು.

317 ಮತದಾನ ಕೇಂದ್ರಗಳಿಗೆ 210 ಕಟ್ಟಡಗಳನ್ನು ಗುರುತಿಸಲಾಗಿದ್ದು,210 ಕಡೆ 1 ಮತದಾನ ಕೇಂದ್ರ ಇರಲಿವೆ,77 ಕಡೆ 2 ಮತದಾನ ಕೇಂದ್ರ ಇರಲಿವೆ,8 ಕಡೆಗಳಲ್ಲಿ ಒಂದೇಕಡೆಗೆ 3 ಮತದಾನ ಕೇಂದ್ರ ಇರಲಿವೆ,1 ಕಡೆ 5 ಮತದಾನ ಕೇಂದ್ರಗಳಿರಲಿವೆ, 2 ಕಡೆಗಳಲ್ಲಿ 6 ಮತದಾನ ಕೇಂದ್ರಗಳಿರಲಿವೆ ಎಂದು ಮಾಹಿತಿ ನೀಡಿದರು.ಈಬಾರಿ 6265 ಜನ ಯುವ ಮತದಾರರಿದ್ದು,3798 ವಿಕಲಚೇತನ ಮತದಾರರು, 85 ವರ್ಷ ದಾಟಿದ ವಯೋಮಾನದ 2381 ಜನ ಮತದಾರರಿದ್ದು ಇವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗುವುದು ಎಂದರು.

ಕಳೆದ 2023ರ ಚುನಾವಣೆಯಲ್ಲಿ 75.16 ರಷ್ಟು ಮತದಾನವಾಗಿದ್ದು ಈಬಾರಿ ಅದಕ್ಕಿಂತಲು ಹೆಚ್ಚಿನ ಮತದಾನವಾಗಲು ಎಲ್ಲರು ಶ್ರಮಿಸೋಣ,ಈಗಾಗಲೇ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ,ಅಲ್ಲದೆ ಚುನಾವಣೆಯ ಕುರಿತು ಯಾವುದೇ ಅಕ್ರಮ ಕಂಡುಬಂದಲ್ಲಿ ಉಚಿತ ಸಹಾಯವಾಣಿ 08443-256043 ಆರಂಭಿಸಲಾಗಿದ್ದು ಕರೆ ಮಾಡಿ ಮಾಹಿತಿ ನೀಡಬಹುದು ಅಥವಾ 1950 ಟೋಲ್ ಫ್ರೀ ನಂಬರ್‍ಗೆ ಕರೆ ಮಾಡಿ ತಿಳಿಸಬಹುದು,ಇಲ್ಲವಾದಲ್ಲಿ ಸಿ.ವಿಜಿಲ್ ಯಾಪ್ ಮೂಲಕವೂ ಮಾಹಿತಿ ನೀಡಬಹುದು,60 ನಿಮಿಷಗಳಲ್ಲಿ ನಮ್ಮ ತಂಡ ಭೇಟಿ ನೀಡಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನಸಭಾ ಉಪ ಚುನಾವಣೆಯ ಸಹಾಯಕ ಚುನಾವಣಾಧಿಕಾರಿ ನಾಗಮ್ಮ,ಸುರಪುರ ಠಾಣೆ ಪಿ.ಐ ಆನಂದ ಮಾಗಮೊಡೆ,ಹುಣಸಗಿ ಠಾಣೆ ವೃತ್ತ ನಿರೀಕ್ಷಕ ಸಚಿನ್ ಚಲುವಾದಿ ಹಾಗೂ ಚುನಾವಣಾ ಶಾಖೆ ಸಿರಸ್ತೆದಾರ ಅವಿನಾಶ್ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here